ಬೆಂಗಳೂರು, (www.thenewzmirror.com);
ನಂಬಿದ್ರೆ ನಂಬಿ ಬಿಟ್ರೆ ಬಿಡಿ.., ರಾಜ್ಯದಲ್ಲಿ ಅತಿ ಹೆಚ್ಚು ಆ್ಅಯ ತರುವ ಸಾರಿಗೆ ಇಲಾಖೆಯಲ್ಲಿ ಕಳೆದ ಹಲವು ದಿನಗಳಿಂದ ಕೆಲಸಗಳೇ ಆಗುತ್ತಿಲ್ಲ.., ಕೆಲಸ ಮಾಡಿಸಿಕೊಳ್ಳೋಕೆ ಕಚೇರಿಗೆ ಬರುವ ವಾಹನ ಸವಾರರ ಪಾಡು ಹೇಳತೀರದಾಗಿದೆ. ಇದೆಲ್ಲ ಗೊತ್ತಿರುವ ಅಧಿಕಾರಿಗಳು ಮಾತ್ರ ಎಸಿ ರೂಮಿನಲ್ಲಿ ಅರಾಮಾಗಿ ಇದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಸಾರಿಗೆ ಕಚೇರಿಗಳಲ್ಲಿ ಕೆಲ ದಿನಗಳಿಂದ ಯಾವುದೇ ಕೆಲಸಗಳು ಆಗುತ್ತಿಲ್ಲವಂತೆ. ಇದಕ್ಕೆ ಕಾರಣ ಕೆಲ ದಿನಗಳಿಂದ ವಾಹನ ಸವಾರರಿಗೆ ಡಿಎಲ್ ಸಿಗ್ತಿಲ್ಲ.., ಆರ್ಸಿ ಕಾರ್ಡ್ ಸಿಗುತ್ತಿಲ್ಲ.. ಸ್ಮಾರ್ಟ್ ಕಾರ್ಡ್ ಅಂತೂ ಮರಿಚಿಕೆಯಾಗಿದೆಯಂತೆ. ಅದರಲ್ಲೂ ಡಿಎಲ್ ಟೆಸ್ಟ್ ಪಾಸ್ ಆಗಿ 20 ದಿನಗಳು ಕಳೆದ್ರೂ ಡಿಎಲ್ ಸಿಗ್ತಿಲ್ವಂತೆ.
![](https://thenewzmirror.com/wp-content/uploads/2023/12/news-13-AM-Yogesh-1-edited.jpg)
ಕೈಗೆ ಕಾರ್ಡ್ ಸಿಗದೇ ಮನೆ ಮುಂದೆ ಬೈಕ್, ಕಾರು ನಿಂತಿದೆ.ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಡಿ ಎಲ್ ಸಿಗುತ್ತಿಲ್ಲ . ಯಾಕೆ ಅಂತ ಪ್ರಶ್ನೆ ಮಾಡಿದ್ರೆ ಸ್ಮಾರ್ಟದ ಕಾರ್ಡ್ ಕೊಡೋಕೆ ತಾಂತ್ರಿಕ ಸಮಸ್ಯೆ ಇದೆ. ಸ್ಮಾರ್ಟ್ ಕಾರ್ಡ್ ಗೆ ಅಳವಡಿಕೆ ಮಾಡುವ ಚಿಪ್ ಪೂರೈಕೆಯಾಗುತ್ತಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಶೋ ರೂಂನಿಂದ ಹೊಸದಾಗಿ ವಾಹನ ಖರೀದಿಸಿದ್ರೂ ವಾಹನ ರಸ್ತೆಗಿಳಿಸದ ಸ್ಥಿತಿ ನಿರ್ಮಾಣವಾಗಿದ್ದು, ಆರ್ಟಿಓ ಕಚೇರಿಗಳಲ್ಲಿ ಅಧಿಕಾರಿಗಳ ವಿರುದ್ಧ ವಾಹನಸವಾರರು ಆಕ್ರೋಶ ಹೊರಹಾಕಿದ್ದಾರೆ.
![](https://thenewzmirror.com/wp-content/uploads/2023/10/Ramalinga-Reddy-1.jpg)
ಬೆಂಗಳೂರಿನ ಜಯನಗರ, ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್. ಪುರಂ, ಜಯನಗರ, ಯಶವಂತಪುರ, ಜ್ಞಾನಭಾರತಿ, ಕೋರಮಂಗಲ ಸೇರಿದಂತೆ ಹಲವು ಕಚೇರಿಗಳಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿಲ್ಲ. ಸ್ಮಾರ್ಟ್ ಕಾರ್ಡ್ ಪೂರೈಕೆ ಮಾಡುವ ರೋಸ್ ಮಾರ್ಟ್ ಕಂಪನಿಗೆ ಇಲಾಖೆ ಟೆಂಡರ್ ನೀಡಿದೆ. ಟೆಂಡರ್ ಪಡೆದ ಕಂಪನಿ ಪೂರೈಕೆ ಮಾಡುವಲ್ಲಿ ವಿಳಂಬ ಆಗ್ತಿದೆಯಂತೆ. ಹೀಗಾಗಿ ಇಂಥ ಸಮಸ್ಯೆ ಇದೆ ಎಂದು ಹೇಳ್ತಾರೆ ಬೆಂಗಳೂರು ಸಾರಿಗೆ ಇಲಾಖೆ ಕಚೇರಿಯ ಹಿರಿಯ ಅಧಿಕಾರಿಗಳು.
ಅಪರ ಜಂಟಿ ಆಯುಕ್ತರು ಏನು ಮಾಡುತ್ತಿದ್ದಾರೆ..?
ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಸಮಸ್ಯೆ ಆಗುತ್ತಿದೆ. ಈ ವಿಚಾರವನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಪರ ಸಾರಿಗೆ ಆಯುಕ್ತರು ಹಾಗೂ ಜಂಟಿ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ.