ಅಫಘಾತ ರಹಿತ ಚಾಲನೆ ಮಾಡಿದ KSRTC ಚಾಲಕರಿಗೆ ಸನ್ಮಾನ.!

ಬೆಂಗಳೂರು, (www.thenewzmirror.com ) ;

ಅವರದ್ದು ಸುದೀರ್ಘ 33 ವರ್ಷಗಳ ಸೇವೆ. ಸೇವೆಯಲ್ಲಿ ಒಂದೇ ಒಂದೇ ಅಫಘಾತ ಮಾಡದ ನೌಕರರಿಗೆ ಇಂದು ಸನ್ಮಾನ ಮಾಡಲಾಯ್ತು.

RELATED POSTS

KSRTC ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿಗಮದ ಮುಖ್ಯಸ್ಥ ಅನ್ಬುಕುಮಾರ್ ಸನ್ಮಾನ ಮಾಡಿ ಗೌರವಿಸಿದರು.

33 ವರ್ಷಗಳಿಂದ ಸುದೀರ್ಘ ಕಾಲ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿ,  ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ (ASRTU) ಕೊಡ ಮಾಡುವ ಹೀರೋಸ್ ಆನ್ ದ ರೋಡ್ ಪ್ರಶಸ್ತಿಯನ್ನ ಹುಣಸೂರು ಘಟಕದ ಎಜಾಜ್ ಅಹಮ್ಮದ್  ಶರೀಫ್, ಸಾತಗಳ್ಳಿ ಘಟಕದ ಇಶಾಕ್ ಶರೀಫ್ ರಿಗೆ ವ್ಯವಸ್ಥಾಪಕ ನಿರ್ದೇಶಕ ತಲಾ 5000 ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ವ್ಯವಸ್ಥಾಪಕ‌ ನಿರ್ದೇಶಕ,  ಚಾಲನಾ ವೃತ್ತಿಯು ಅತ್ಯಂತ ಕಷ್ಟ ಮತ್ತು ಜವಾಬ್ದಾರಿಯಿಂದ ಕೂಡಿದ್ದು, ಅಪಘಾತಗಳನ್ನು ತಡೆಗಟ್ಟುವುದು ಸವಾಲೇ ಸರಿ ! ತಮ್ಮದಲ್ಲದ ತಪ್ಪಿನಿಂದಲೂ ಹಲವು ಬಾರಿ ಅಪಘಾತ ಉಂಟಾಗುತ್ತದೆ. ಚಾಲಕರು ಹೆಚ್ಚು ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿ, ಸದರಿ ಚಾಲಕರುಗಳ ಸೇವೆಯು ಅನನ್ಯ ಮತ್ತು ಅನುಕರಣೀಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ತೆಲಂಗಾಣ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 2023ನೇ ಸಾಲಿನ ಸೌತ್ ಇಂಡಿಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನಗಳಿಸಿ, ಚಿನ್ನದ ಪದಕ ಗೆದ್ದಿರುವ ಮುದ್ರಣಾಲಯದ ಕಿರಿಯ ಸಹಾಯಕಿ ಖುದ್ಸಿಯ ನಜೀರ್ ಅಭಿನಂದಿಸಲಾಯ್ತು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist