ಬೆಂಗಳೂರು,( www.thenewzmirror.com);
ಹಳ್ಳಿ ಕಡೆ ಒಂದು ಗಾದೆ ಮಾತಿದೆ.., ನಾಯಿ ಬಾಲವನ್ನ ಅಲ್ಲಾಡಿಸಬೇಕು.. ಆದರೆ ಬಾಲ ನಾಯಿಯನ್ನ ಅಲ್ಲಾಡಿಸಬಾರದು ಅಂತ. KSRTC ಯಲ್ಲಿ ಆಗುತ್ತಿರುವ ಕೆಲ ಬೆಳವಣಿಗೆಗಳು ಈ ಗಾದೆಗೆ ಸೂಕ್ತವಾಗುತ್ತೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಈ ಗಾದೆ ಮಾತು ಹೇಳೊದಿಕ್ಕೂ ಒಂದು ಕಾರಣವಿದೆ. KSRTC ಯ ಶಿವಮೊಗ್ಗ ವಿಭಾಗದಲ್ಲಿ ಆಗುತ್ತಿರುವ ಘಟನೆಗಳು ಗಾದೆಯನ್ನ ಹೇಳುವಂತೆ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಯತೇಚ್ಛವಾಗಿ ಅಧಿಕಾರಿದ ದುರ್ಬಳಕೆ ಮಾಡಿಕೊಂಡು ನಮಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ ವರ್ತನೆ ಮಾಡುತ್ತಿದ್ದಾರೆ.
ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುವ ಬದಲು ಪ್ರಸ್ತುತ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಸ್ಥೆಯ ವಾಹನವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರ ಗೊತ್ತಿದ್ದರೂ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಅನ್ಬುಕುಮಾರ್ ಆ ಅಧಿಕಾರಿಯನ್ನ ರಕ್ಷಣೆ ಮಾಡುತ್ತಿದ್ದಾರೆ. ಈ ಕುರಿತ ದಾಖಲೆಗಳು ದಿ ನ್ಯೂಝ್ ಮಿರರ್ (thenewzmirror) ಗೆ ಲಭಿಸಿದೆ.
KSRTC ವತಿಯಿಂದ ಒಂದೊಂದು ವಿಭಾಗಕ್ಕೆ ಸರಕು ಸಾಮಾನುಗಳನ್ನ ಸಾಗಿಸೋಕೆ ಒಂದೊಂದು ಲಾರಿಯನ್ನ ನೀಡಲಾಗಿರುತ್ತದೆ. ಆ ವಾಹನ ಕೇವಲ ಸಂಸ್ಥೆಯ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬೇಕು. ಆದರೆ ಶಿವಮೊಗ್ಗ ವಿಭಾಗ್ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ ತಮ್ಮ ಸ್ವಂತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಿಗಮದ ವತಿಯಿಂದ ಯಾವುದೇ ಅನುಮತಿ ಪಡೆದಿಲ್ಲದಿದ್ದರೂ ಅವರ ವಿರುದ್ಧ ಕ್ರಮ ಮಾತ್ರ ಇದೂವರೆಗೂ ಆಗಿಲ್ಲ. ಶಿಕ್ಷೆ ನೀಡಬೇಕಾದ ಎಂಡಿ ಅವರನ್ನ ರಕ್ಷಿಸುತ್ತಿದ್ದಾರೆ. ವರ್ಗಾವಣೆ ಮಾಡಿ ಆದೇಶ ಮಾಡಿದ್ದರೂ ಅದನ್ನ ರದ್ದು ಮಾಡಿ ಮತ್ತದೇ ಜಾಗಕ್ಕೆ ನಿಯುಕ್ತಿ ಮಾಡಿದ್ದಾರೆ.
ವಿಜಯ್ ಕುಮಾರ್ ಸಂಸ್ಥೆಯ ಲಾರಿಯನ್ನ ತಮ್ಮ ಸ್ವಂತಕ್ಕೆ ಮನೆಯ ಸಾಮಾನುಗಳನ್ನು ಬೇರೆ ಮನೆಗೆ ಡಂಪ್ ಮಾಡಲು ಉಪಯೋಗಿಸುತ್ತಾರೆ. ಆದರೆ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಮಾಡಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರೂ ನೋ ಯೂಸ್. ಅಧಿಕಾರಿಗಳಿಗೆ ಒಂದು ನ್ಯಾಯ ಸಿಬ್ಬಂದಿಗಳಿಗೆ ಮತ್ತೊಂದು ನ್ಯಾಯಾವೇ ಸ್ವಾಮಿ ಎಂದು ಪ್ರಶ್ನೆ ಮಾಡ್ತಿದ್ದಾರೆ
ಸಂಸ್ಥೆಯ ಸಿಬ್ಬಂದಿ ತಮ್ಮ ತಮ್ಮ ಮನೆಯ ಸಾಮಾನುಗಳನ್ನು ಬೇರೆ ಬೇರೆ ಮನೆಗೆ ಡಂಪ್ ಮಾಡಲು ಸಂಸ್ಥೆಯ ವಾಹನಗಳನ್ನು ಬಳಸಿ ಕೊಳ್ಳಲು ಕೊಡುತ್ತಾರೆಯೇ, ಸಂಸ್ಥೆಯ ಮೇಲಾಧಿಕಾರಿಗಳಿಗೆ ಕೇಳಿದರೆ ಸಂಸ್ಥೆಗೆ ಹಣವನ್ನು ಪಾವತಿಸಿ ಅನುಮತಿ ಪಡೆದು ಉಪಯೋಗ ಪಡೆಯಬಹುದು ಎಂದು ಹೇಳುತ್ತಾರೆ, ಆದರೆ ಈವರೆಗೂ ಶಿವಮೊಗ್ಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಸ್ಥೆಗೆ ಯಾವುದೇ ಹಣವನ್ನು ಪಾವತಿಸಿ ಅನುಮತಿ ಪಡೆದುಕೊಂಡಿಲ್ಲ. ಅನುಮತಿ ನೀಡಿರುವುದಕ್ಕೆ ಯಾವುದೇ ದಾಖಲೆಗಳು ಇದೂವರೆಗೂ ಸಿಕ್ಕಿಲ್ಲ.
ಸಂಸ್ಥೆಯ ಲಾರಿ ಸಂಖ್ಯೆ.ಕೆ.ಎ 25 , ಎಫ್ -2616 ರ ವಾಹನವು ಯಾವ ದಿನಾಂಕದಂದು ಡಿ.ಸಿ. ಅಂದರೆ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ವಿಜಯ ಕುಮಾರ್ ರವರ ಮನೆಯ ಸಾಮಾನುಗಳನ್ನು ಕೊಂಡೊಯ್ಯುಲು ಭದ್ರತಾ ಶಾಖೆಯ ಭದ್ರತಾ ಸಿಬ್ಬಂದಿ ಯಾವುದೇ ಪುಸ್ತಕದಲ್ಲಿ ಎಂಟ್ರಿ ಮಾಡಿರುವುದಿಲ್ಲವೇಕೆ, ಅಂದರೆ ಇದು ಕಾನೂನು ಬಾಹಿರವಾಗಿ ರುವುದರಿಂದ ಭದ್ರತಾ ಸಿಬ್ಬಂದಿಗಳು ಅಧಿಕಾರಿಗಳ ಭಯದಿಂದ ಶಿಫಾರಸ್ಸು ಮಾಡಿದ ತಕ್ಷಣವೇ ಕಾನೂನು ಬಾಹಿರವಾಗಿ ಈವರೆಗೂ ಯಾವುದೇ ಪುಸ್ತಕದಲ್ಲಿ ಎಂಟ್ರಿ ಮಾಡಿರುವುದಿಲ್ಲ. ಹೀಗಿದ್ದರೂ ಅವರ ವಿರುದ್ಧ ಕ್ರಮ ಮಾತ್ರ ಇದೂವರೆಗೂ ಆಗಿಲ್ಲ. ಸದರಿ ವಿಷಯಗಳು ದಕ್ಷ/ಪ್ರಾಮಾಣಿಕ ಅಧಿಕಾರಿಯಾಗಿರುವ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಗೆ ತಿಳಿದಿದ್ದರೂ ಜಾಣ ಕುರುಡು ಅನ್ನುವಂತೆ ಇರುವುದನ್ನು ಗಮನಿಸಿದರೆ ಇವರು ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾದಂತೆ ಕಾಣಿಸುತ್ತದೆ.
ಪ್ರಸ್ತುತ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ ಕುಮಾರ್ ಅವರನ್ನ ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿ ಎರಡೇ ದಿನಗಳ ಒಳಗೆ ಆ ಆದೇಶ ರದ್ದು ಮಾಡಿ ಮತ್ತೆ ಶಿವಮೊಗ್ಗ ವಿಭಾಗಕ್ಕೆ ಮರುನಿಯುಕ್ತಿ ಮಾಡಲಾಗಿದೆ. ಎಲ್ಲಿದೆ ಸ್ವಾಮಿ ಕಾರ್ಮಿಕರಿಗೆ ನ್ಯಾಯ , ಎಲ್ಲಿದೆ ದಕ್ಷತೆ ಪ್ರಾಮಾಣಿಕತೆ ಪ್ರಬುದ್ಧತೆ ಸ್ವಾಮಿ, ದಯಮಾಡಿ ಅದಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಮನವಿ ಮಾಡ್ತಿದ್ದಾರೆ.