ಬೆಂಗಳೂರು, ( www.thenewzmirror.com);
ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿರುವ ನಲವತ್ತೊಂದು ಕಾರ್ಮಿಕರು 17 ದಿನಗಳ ಸುರಂಗವಾಸದ ಬಳಿಕ ಕೆಲವೇ ಕ್ಷಣಗಳಲ್ಲಿ ಹೊರಬಂದಿದ್ದಾರೆ. ಆ ಮೂಲಕ 17 ದಿನಗಳಿಂಸ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು, ಸಾಹಸ ಕಾರ್ಯಾಚರಣೆ ಕೊನೆಗೂ ಸುಖಾಂತ ಕಂಡಿದೆ.
ಸುರಂಗದೊಳಗೆ ಬಿದ್ದಿದ್ದ ಅವಶೇಷಗಳನ್ನು ಕೊರೆದ ಮಾರ್ಗದಲ್ಲಿ ಪೈಪ್ ಅಳವಡಿಸಿದ್ದು, ಅವುಗಳ ಮೂಲಕ ಕಾರ್ಮಿಕರನ್ನ ಹೊರಗಡೆ ತರಲಾಗಿದೆ. ಅವಶೇಷಗಳ ನಡುವೆ ಸಾಗಿಸಿದ್ದ ಪೈಪ್ ಮೂಲಕ ಮೊದಲ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಅದೇ ರೀತಿ ಉಳಿದ ಕಾರ್ಮಿಕರೂ ಅದೇ ಪೈಪ್ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದಾರೆ.
ದೊಡ್ಡ ದೊಡ್ಡ ಯಂತ್ರಗಳು ಕೈಕೊಟ್ಟ ಬಳಿಕ ನಡೆದ ಮಾನವ ಶ್ರಮದ ಪ್ರಯತ್ನದಿಂದ ಕಾರ್ಮಿಕರನ್ನು ರಕ್ಷಿಸಲಾಗಿದೆ.
https://youtu.be/l94nrRL6DJU?si=o3_AESr04PMJbtJi
ರಕ್ಷಿಸಲಾದ ಕಾರ್ಮಿಕರನ್ನು ಮೊದಲು ಚಿನ್ಯಾಲಿಸೌರ್‌ನಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ಅವರಿಗಾಗಿ 41 ಹಾಸಿಗೆಗಳ ವಿಶೇಷ ವಾರ್ಡ್ ಅನ್ನು ಸಿದ್ಧಪಡಿಸಿದ್ದು, ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸುಮಾರು 50 ಮೀಟರ್ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್ ಮೂಲಕ ಗಾಲಿ ಸ್ಟ್ರೆಚರ್ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದರ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.