ನವದೆಹಲಿ/ಬೆಂಗಳೂರು, (www.thenewzmirror.com);
ಪ್ರಧಾನಿ ನರೇಂದ್ರ ಮೋದಿನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ 50 ದಶಕಗಳಿಗೂ ಹೆಚ್ಚಿನ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ. ಹೊಸ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ, ನವ ಭಾರತದಲ್ಲಿ ನ್ಯಾಯವು ಈಗ ಎಲ್ಲರಿಗೂ ಸುಲಭವಾಗಿ ಕೈಗುಟವಂತಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಟ್ಟರು.
ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಎನ್ಎಫ್ಎಸ್ಯು) ನಡೆದ 5ನೇ ಅಂತಾರಾಷ್ಟ್ರೀಯ ಮತ್ತು 44ನೇ ಅಖಿಲ ಭಾರತ ಅಪರಾಧ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ದೂರದೃಷ್ಟಿವುಳ್ಳ ಪ್ರಧಾನಿಯಿಂದ ಮಾತ್ರ ಇಂಥ ಸಾಧನೆ ಎಂದು ತಿಳಿಸಿದರು.
ದೇಶದಲ್ಲಿ ಈ ಹಿಂದೆ ಬ್ರಿಟಿಷರು ಮಾಡಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡಿ ಹೊಸ ಕಾನೂನುಗಳನ್ನು ಜಾರಿಹೆ ತರುವ ನಿಟ್ಟಿನಲ್ಲಿ ಪ್ರಧಾನಿ ಹೆಜ್ಜೆ ಇಡುತ್ತಿದ್ದಾರೆ ಎಂದರು. ಹಿಂದಿನ ಕಾನೂನುಗಳು ಬ್ರಿಟಿಷ್ ಆಳ್ವಿಕೆಯನ್ನು ಭದ್ರಪಡಿಸಲು ಭಾರತೀಯರನ್ನು ಶಿಕ್ಷಿಸುವ ಗುರಿಯನ್ನು ಹೊಂದಿದ್ದವು, ಆದರೆ ಹೊಸ ಕಾನೂನುಗಳು ನ್ಯಾಯದ ಮೂಲಭೂತ ತತ್ತ್ವದೊಂದಿಗೆ ರಚಿಸಲ್ಪಟ್ಟಿವೆ ಎಂದು ಅಭಿಪ್ರಾಯ ಪಟ್ಟರು.
ಇನ್ನೂ ಮುಂದುವರೆದು ಹಿಂದಿನ ಕಾನೂನುಗಳಲ್ಲಿ ‘ಶಿಕ್ಷೆ’ ಎಂಬ ಪದವು ಗಮನಾರ್ಹವಾದ ಮಹತ್ವವನ್ನು ಪಡೆದರೆ, ಹೊಸ ಕಾನೂನುಗಳಲ್ಲಿ ‘ನ್ಯಾಯ’ ಎಂಬ ಪದವು ಮಹತ್ವ ಪಡೆದಿದೆ. ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ, ಅಪರಾಧ ಸ್ಥಳಕ್ಕೆ ವಿಧಿ ವಿಜ್ಞಾನ (ಫೋರೆನ್ಸಿಕ್ ಸೈನ್ಸ್) ಅಧಿಕಾರಿಯ ಕಡ್ಡಾಯ ಭೇಟಿ ನೀಡುವ ಜತೆಗೆ ತನಿಖೆಗಳನ್ನು ಸರಳಗೊಳಿಸಿ, ನ್ಯಾಯಾಧೀಶರ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಮಾಹಿತಿ ಹಂಚಿಕೊಡರು.
ತಂತ್ರಜ್ಞಾನದ ನೆರವಿನೊಂದಿಗೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸವಾಲುಗಳನ್ನು ನಿವಾರಿಸಿಕೊಂಡು, ಭಾರತದ ಕಾನೂನು ವ್ಯವಸ್ಥೆಯು ಮುಂದಿನ 5 ವರ್ಷಗಳಲ್ಲಿ ವಿಶ್ವದ ಅತ್ಯಂತ ಆಧುನಿಕ ನ್ಯಾಯ ವ್ಯವಸ್ಥೆಯಾಗಲಿದ್ದು, ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವಲ್ಲಿ ಸಿದ್ಧಹಸ್ತರಾಗಿರುವ ಗೃಹ ಸಚಿವ ಅಮಿತ್ ಶಾ ಮುಂದಿನ 5 ವರ್ಷಗಳಲ್ಲಿ, ಪ್ರತಿ ವರ್ಷಕ್ಕೆ 9,000 ಕ್ಕೂ ಹೆಚ್ಚು ವಿಧಿ ವಿಜ್ಞಾನ ಅಧಿಕಾರಿಗಳಿಗೆ ತರಬೇತಿ ನೀಡುವ ಯೋಜನೆಯನ್ನ ಹಾಕಿಕೊಂಡಿದ್ದಾರೆ.
ಮುಂಬರುವ ವರ್ಷಗಳಲ್ಲಿ ಮೂರು ಹೊಸ ಕಾನೂನುಗಳು ಆರಕ್ಷಣೆ ಮತ್ತು ನ್ಯಾಯದ ಯುಗಕ್ಕೆ ನಾಂದಿ ಹಾಡಲಿವೆ. ಮುಂದಿನ ವರ್ಷದಲ್ಲಿ, OESU ನ 9 ಕ್ಯಾಂಪಸ್ಗಳು ದೇಶದಾದ್ಯಂತ ತೆರೆಯಲ್ಪಟ್ಟು, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವಿಧಿ ವಿಜ್ಞಾನಕ್ಕೆ ಸಂಪನ್ಮೂಲಗಳನ್ನು ಸಿದ್ಧಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಈ ಬೆಳವಣಿಗೆಯಿಂದ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮುಂದಿನ 5 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ.
ಹೊಸ ಕಾನೂನುಗಳು ತನಿಖೆಗಳಲ್ಲಿ, ಕಾನೂನು ಕ್ರಮಗಳಲ್ಲಿ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ವಿಧಿ ವಿಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಯುವಕರಿಗೆ ಗಮನಾರ್ಹವಾದ ಉದ್ಯೋಗಾವಕಾಶಗಳ ಬಾಗಿಲನ್ನು ತೆರೆಯಲಿವೆ.
ಸ್ವಾತಂತ್ರ್ಯಾನಂತರ ನಾಲ್ಕೈದು ದಶಕಗಳಿಗೊಮ್ಮೆ ಒಂದು ಸರ್ಕಾರ ಪರಿವರ್ತನಾಶೀಲವಾಗಿ ಕೆಲಸ ಮಾಡುವುದನ್ನು ಜನ ನೋಡಿದ್ದರೆ, ಮೋದಿ ಸರ್ಕಾರವು ಕೇವಲ 10 ವರ್ಷಗಳಲ್ಲಿ 50 ದಶಕಗಳಿಗೂ ಹೆಚ್ಚಿನ ಸುಧಾರಣಾ ಕಾರ್ಯಗಳನ್ನು ಸಾಧಿಸಿದ್ದಕ್ಕೆ ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ರು.