ಬೆಂಗಳೂರು/ಹೊಸದೆಹಲಿ (www.thenewzmirror.com);
2024 ರ ಏಪ್ರಿಲ್ 16 ರಂದು ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಯ್ತಾ ಎನ್ನುವ ಪ್ರಶ್ನೆಗಳ ನಡುವೆ ಚುನಾವಣಾ ಆಯೋಗ ಕೊಟ್ಟ ಸ್ಪಷ್ಟನೆ ಎಲ್ಲದಕ್ಕೂ ಉತ್ತರ ಸಿಕ್ಕಿದೆ.
Lok Sabha Election 2024 ಇಷ್ಟರಲ್ಲಿಯೇ ದಿನಾಂಕ ಘೋಷಿಸಲಾಗುತ್ತದೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಮಹತ್ವದ ಸಂದೇಶವೊಂದನ್ನು ಚುನಾವಣಾ ಆಯೋಗ (Election commission) ತನ್ನ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ಹರಿಬಿಟ್ಟಿದೆ. ಆ ಮಾಹಿತಿ ಆಧಾರದ ಪ್ರಕಾರ ಚುನಾವಣೆ ಪರಿಶೀಲನೆ ಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದೆ.
ಏಪ್ರಿಲ್ 16ನ್ನು ಲೋಕಸಭೆ ಚುನಾವಣೆ ಮತದಾನದ ಹಂತಗಳ ಆರಂಭದ ದಿನಾಂಕ ಎಂದು ನಿಗದಿಪಡಿಸಲಾಗಿದೆಯೇ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೆಲವು ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಿವೆ. ಏಪ್ರಿಲ್ 16 ಚುನಾವಣಾ ಆಯೋಗದ ಅಧಿಕಾರಿಗಳು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಪರಿಶೀಲನೆಗಾಗಿ ಈ ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಗೊಂದಲಗಳಿಗೆ ತೆರೆ ಎಳೆದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಿಸಲಿದೆ ಎಂಬ ಊಹೆ ದಟ್ಟವಾಗಿ ಹರಡಿದೆ. ಇತ್ತೀಚೆಗೆ ಆಯೋಗದ ದಿಲ್ಲಿ ಕಚೇರಿ ಈ ಕುರಿತ ಪ್ಲಾನಿಂಗ್‌ಗಾಗಿ ತನ್ನ ಅಧಿಕಾರಿಗಳಿಗೆ ಸರ್ಕ್ಯುಲರ್ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಅನುಮಾನ ಮೂಡಿತ್ತು.