ನವದೆಹಲಿ, (www,thenewzmirror.com) :
2024 ರ ಲೋಕಸಭೆ ಚುನಾವಣೆಗೆ ನಾಳೆ ದಿನಾಂಕ ನಿಗಧಿಯಾಗಲಿದೆ. ನಾಳೆ ಮಧ್ಯಾಹ್ನ 1.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಡೆಯಲಿದೆ. ದೆಹಲಿಯಲ್ಲಿರುವ ವಿಗ್ಯಾನ್ ಭವನದಲ್ಲಿ ಗೋಷ್ಠಿ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ದಿನಾಂಕ ಘೋಷಣೆ ಮಾಡಲಿದ್ದಾರೆ.