ದೆಹಲಿ, ( www.thenewzmirror.com) ;
ಸಂಸತ್‌ನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ವ್ಯಕ್ತಿಗಳು ಕಲಾಪ ನಡೆಯುತ್ತಿರುವಾಗಲೇ ಲೋಕಸಭೆ ಒಳಗೆ ನುಗ್ಗಿದ ಘಟನೆ ಬುಧವಾರ ನಡೆದಿದೆ. ಭಾರಿ ಬಿಗಿ ಭದ್ರತೆಯ ಸದನದಲ್ಲಿ ಈ ಘಟನೆ ಕೋಲಾಹಲಕ್ಕೆ ಕಾರಣವಾಗಿದೆ. ಸಂಸತ್ ಮೇಲಿನ ಉಗ್ರರ ದಾಳಿಗೆ 22 ವರ್ಷ ತುಂಬಿದ ಸಂದರ್ಭದಲ್ಲಿ ಬುಧವಾರದ ಕೃತ್ಯ, ಸಂಸತ್‌ನ ಭದ್ರತಾ ವೈಫಲ್ಯ ಪ್ರಶ್ನೆ ಹುಟ್ಟುಹಾಕಿದೆ.
ಖಲಿಸ್ತಾನಿ ಉಗ್ರರ ದಾಳಿ ಎಚ್ಚರಿಕೆ ಬೆನ್ನಲ್ಲೇ ಲೋಕಸಭೆಯಲ್ಲಿ ಆತಂಕದ ವಾತಾರವಣ ಸೃಷ್ಟಿಯಾಗಿತ್ತು. ದೆಹಲಿ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ನಡುವೆ ಭಾರಿ ಭದ್ರತಾ ವೈಫಲ್ಯ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತರು ಸದನದ ಒಳಗ್ಗೆ ನುಗ್ಗಿ ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ.


ಕಿಡಿಗೇಡಿಗಳು ಲೋಕಸಭೆಯಲ್ಲಿ ಜಿಗಿಯುತ್ತಾ ಸಾಗಿದ್ದಲ್ಲದೆ, ಹಳದಿ ಬಣ್ಣದ ಹೊಗೆಯನ್ನು ಕೂಡ ಸಿಡಿಸಿದ್ದಾರೆ. ಘಟನೆ ಸಂಬಂಧ 22 ವರ್ಷದ ಸಾಗರ್ ಎಂಬಾತನ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಡು ನೀಲಿ ಬಣ್ಣದ ಅಂಗಿ ಧರಿಸಿದ ಒಬ್ಬ ವ್ಯಕ್ತಿ, ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲು ಡೆಸ್ಕ್ ನಿಂದ ಹಾರುತ್ತಾ ಓಡುತ್ತಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಈಗಾಗಲೇ ಮೈಸೂರು ಮೂಲದ ಯುವಕನನ್ನ ವಶಕ್ಕೆ ಪಡೆಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇದೇ ವೇಳೆ ಸಂಸತ್ ಹೊರಗೆ ನಿಂತಿದ್ದ ಯುವತಿಯನ್ನೂ ವಶಕ್ಕೆ ಪಡೆದಿರೋದು ಗೊತ್ತಾಗಿದೆ.
2001ರಲ್ಲಿ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. 22ನೇ ವರ್ಷಾಚಣೆ ದಿನವೇ ಈ ದಾಳಿ ನಡೆದಿರೋದು ಹಲವು ಅನುಮಾನ ಹುಟ್ಟುಹಾಕುತ್ತಿದೆ. ಇನ್ನೊಂದು ಅಚ್ಚರಿ ಏನೆಂದರೆ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಪ್ರೇಕ್ಷಕರಾಗಿ ಸದನದ ಒಳಗೆ ಪ್ರವೇಶಿಸಿದ್ದರು. ಪ್ರತಾಪ್ ಸಿಂಹ ಅವರ ಪಿಎ ಕಡೆಯಿಂದ ಅವರು ಸಂಸತ್ ಒಳಗೆ ಬರಲು ಅನುಮತಿ ಪಡೆದಿದ್ದರು ಎಂದೂ ಹೇಳಲಾಗಿದೆ. ಮೈಸೂರಿನವರು ಎಂದು ಪಾಸ್ ಪಡೆದುಕೊಂಡಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೊಂಡಿದ್ದರೂ ಅನುಮಾನ ಮಾತ್ರ ಕಡಿಮೆಯಾಗಿಲ್ಲ.
ಇಬ್ಬರು ಅಪರಿಚಿತರು ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗ್ಗೆ ನುಗ್ಗಿ ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ. ಸ್ಪೀಕರ್ ಮುಂದಿರುವ 5ನೇ ಸಾಲಿನವರೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸಾಗರ್ ಎಂಬ ಹೆಸರಿನಲ್ಲಿ ಪಾಸ್ ಪಡೆದಿದ್ದ ಅಮೀನ್ ಅನ್ನೋ ಯುವಕ ಹಾಗೂ ಕೌರ್ ಅನ್ನೋ ಯುವತಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದಾರೆ.
ಇದೀಗ ಈ ದಾಳಿ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಸಂಸತ್ ಭವನದ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 13 ರಂದು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಡಿಸೆಂಬರ್ 13ರಂದೇ ಇಬ್ಬರು ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ.
2001 ಡಿಸೆಂಬರ್ 13 ರಂದು ಸಂಸತ್ ಭವನದ ಮೇಲೆ ಭೀಕರ ಭಯೋತ್ಪಾದಕರ ದಾಳಿ ನಡೆದಿತ್ತು. ಐವರು ಉಗ್ರರು ಗುಂಡಿನ ದಾಳಿ ನಡೆಸುತ್ತಾ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು.
ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ 40 ನಿಮಿಷ ಮುಂದೂಡಲಾಗಿತ್ತು.
ಸಂಸತ್‌ನಲ್ಲಿ ನಾಲ್ಕೈದು ಹಂತದ ಭದ್ರತಾ ತಪಾಸಣೆ ಇರುತ್ತದೆ. ಇಲ್ಲಿ ಸಂಸದರು ಕೂಡ ತಮ್ಮ ಮೊಬೈಲ್ ಫೋನ್‌ಗಳನ್ನು ಒಳಗೆ ಕೊಂಡೊಯ್ಯಲು ಅವಕಾಶವಿಲ್ಲ. ಒಳಗೆ ಪೆನ್ ಸಹ ಸಾಗಿಸಲು ಬಿಡುವುದಿಲ್ಲ. ಹೀಗಿರುವಾಗ ಅವರು ಕಲರ್ ಸ್ಮೋಕ್ ಕಡ್ಡಿಯನ್ನು ಒಳಗೆ ಕೊಂಡೊಯ್ದು, ಒಳಗೆ ಅದನ್ನು ಹೊತ್ತಿಸಿದ್ದು ಹೇಗೆ ಎಂಬುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.