ಬೆಂಗಳೂರು (www.thenewzmirror.com) ;
ದೇಶದಲ್ಲೇ ಅತ್ಯಂತ ಸುರಕ್ಷಿತ ಸ್ಥಳ ಅಂದ್ರೆ ಅದು ಲೋಕಸಭೆ ಅಂತ ಹೇಳಲಾಗುತ್ತಿತ್ತು. ಆದರೆ ಈ ಸ್ಥಳದಲ್ಲಿ ಪದೆ ಪದೇ ಆಗುತ್ತಿರುವ ದಾಳಿಗಳು ಹಾಗೂ ಭದ್ರತಾ ವೈಫಲ್ಯಗಳನ್ನ ಗಮನಿಸುತ್ತಾ ಹೋದರೆ ನಿಜವಾಗ್ಲೂ ಸೇಫ್(ಸುರಕ್ಷಿತ) ಸ್ಥಳ ಆಗಿಲ್ವಾ ಎನ್ನುವ ಅನುಮಾನ ಕಾಡತೊಡಗಿದೆ.
ಸಂಸತ್ (Lok Sabha) ಭವನದಲ್ಲಿ ಭಾರೀ ಭದ್ರತಾ (Secuirty Breach) ಲೋಪವಾಗಿದೆ. ಕಲಾಪ ನಡೆಯುತ್ತಿದ್ದ ವೇಳೆ ಆಗಂತುಕರು ಲೋಕಸಭೆಗೆ ನುಗ್ಗಿ ದಾಂಧಲೆಯನ್ನ ಹತ್ತಿರದಿಂದ ಕಣ್ಣಾರೆ ಕಂಡ ಲೋಕಸಭಾ ಸದಸ್ಯರು ತಮ್ಮ ಪ್ರಾಣವನ್ನ ಉಳಿಸಿಕೊಳ್ಳೋಕೆ ದಿಕ್ಕಾಪಾಲಾಗಿ ಓಡಿದ್ದ ದೃಶ್ಯ ಕಂಡು ಬರುತ್ತಿತ್ತು.
ಹಾಗಂದ ಮಾತ್ರಕ್ಕೆ ಲೋಕಸಭೆಯಲ್ಲಿ ಈ ರೀತಿ ಭದ್ರತಾ ವೈಫಲ್ಯ ಆಗಿದ್ದು ಇದೇ ಮೊದಲಲ್ಲ. ಇವತ್ತಿಗೆ ಸರಿಯಾಗಿ ೨೨ ವರ್ಷದ ಹಿಂದೆ ಅಂದರೆ 2001ರಲ್ಲಿ ಲೋಕಸಭೆಯಲ್ಲಿ ಅಟ್ಯಾಕ್ ನಡೆದಿತ್ತು. 2001 ಅಂದ್ರೆ 22 ವರ್ಷಗಳ ಹಿಂದೆ ಡಿಸೆಂಬರ್ 13, 2001 ರ ಬೆಳಿಗ್ಗೆ ಐವರು ಭಯೋತ್ಪಾದಕರು 11:40 ರ ಸುಮಾರಿಗೆ ಸಂಸತ್ ಭವನಕ್ಕೆ ಕಾರಿಗೆ ಗೃಹ ಸಚಿವರ ನಕಲಿ ಸ್ಟಿಕರ್ ಅಂಟಿಸಿಕೊಂಡು ಎಂಟ್ರಿಯಾಗಿದ್ದರು.
ಕಾರಿನ ಮೇಲೆ ಅಂಟಿಸಿದ್ದ ಸ್ಟಿಕರ್ ನಕಲಿ ಎಂದು ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕಾರನ್ನ ಹಿಂದಕ್ಕೆ ತಿರುಗಿಸುವಂತೆ ಸೂಚಿಸಿದ್ದರು. ಹೀಗೆ ಆಗುತ್ತಿದ್ದಂತೆ ಕಾರಿನಿಂದ ಕೆಳಗಿಳಿದಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ನ ಭಯೋತ್ಪಾದಕರ ಕೃತ್ಯಕ್ಕೆ ದೆಹಲಿ ಪೊಲೀಸರು ಸೇರಿದಂತೆ 9 ಮಂದಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ದೆಹಲಿ ಪೊಲೀಸ್‌ನ ಏಳು ಪೊಲೀಸರು, ಇಬ್ಬರು ಸಂಸತ್ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಕಾರ್ಮಿಕರು ಹುತಾತ್ಮರಾಗಿದ್ದರು. ಬಳಿಕ ಭದ್ರತಾ ಪಡೆಗಳ ಕಾರ್ಯಚರಣೆ ವೇಳೆ ಎಲ್ಲಾ ಐವರು ಉಗ್ರರನ್ನು ಹತ್ಯೆಯಾಗಿದ್ದರು.
ಅಟ್ಯಾಕ್ ಸಮಯದಲ್ಲಿ, ಮಂತ್ರಿಗಳೂ ಸೇರಿದಂತೆ 100 ಕ್ಕೂ ಹೆಚ್ಚು ಸಂಸದರು ಸಂಸತ್ತಿನ ಒಳಗೆ ಉಪಸ್ಥಿತರಿದ್ದರು. ಸುಮಾರು 30 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು, ಎಂಟು ಮಂದಿ ಭದ್ರತಾ ಸಿಬ್ಬಂದಿ ಮತ್ತು ಓರ್ವ ತೋಟಗಾರ ಮೃತಪಟ್ಟಿದ್ದರು. 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.