Mithun Chakraborty | ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Mithun Chakraborty The prestigious Dadasaheb Phalke Award for veteran actor Mithun Chakraborty

ಬೆಂಗಳೂರು, (www.thenewzmirror.com) ;

ಹಿರಿಯ ನಟ ಮಿಥುನ್ ಚಕ್ರವರ್ತಿ ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರ ಪ್ರಯಾಣ ಹಾಗೂ ಸಿನಿ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

RELATED POSTS

ಈ ಸಂಬಂಧ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಮಿಥುನ್ ಚಕ್ರವರ್ತಿ ಅವರ ಗಮನಾರ್ಹ ಸಿನಿ ಜರ್ನಿ ಈಗಿನ ಮತ್ತು ಬರುವ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆ ಗಮನಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತೀರ್ಪುಗಾರರ ಆಯ್ಕೆ ಸಮಿತಿಯು ಅವರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಈ ಗೌರವವನ್ನು ಅಕ್ಟೋಬರ್ 08 ರಂದು ನಡೆಯುವ ನ್ಯಾಷನಲ್ ಫಿಲಂ ಅವಾರ್ಡ್​ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಿಥುನ್ ಚಕ್ರವರ್ತಿ ಜನಿಸಿದ್ದು 1950ರಲ್ಲಿ. ಮಿಥುನ್ ಚಕ್ರವರ್ತಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1976ರಲ್ಲಿ. ಅಂದರೆ 26ನೇ ವಯಸ್ಸಿಗೆ ಅವರು ಹೀರೋ ಆದರು. ‘ಮೃಗಯಾ’ ಅವರ ನಟನೆಯ ಮೊದಲ ಸಿನಿಮಾ. ಅವರಿಗೆ ಮೊದಲ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ಸುರಕ್ಷಾ’, ‘ಡಿಸ್ಕೋ ಡ್ಯಾನ್ಸರ್’, ‘ಡ್ಯಾನ್ಸ್ ಡ್ಯಾನ್ಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಕನ್ನಡದ ‘ದಿ ವಿಲನ್’ ಸಿನಿಮಾದಲ್ಲಿ ಅವರು ನಟಿಸಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist