ಬೆಂಗಳೂರು, (www.thenewzmirror.com) ;
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಯಕನಾಗಿ ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಆ ಮೂಲಕ ಮೋದಿಯ 3.0 ಆಡಳಿತಕ್ಕೆ ಇದ್ದ ಆತಂಕ ದೂರ ಅಗಿದ್ದು, ಜೂನ್ 9ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಸಭೆ ಚುನಾವಣೆ ಪ್ರಕಟವಾದ ಬಳಿಕ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನೂತನ ಸಂಸದರಿಗೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎನ್ ಡಿಎ ನಾಯಕರೆಲ್ಲರೂ ಭಾಗಿಯಾಗಿದ್ದರು. ಬಿಜೆಪಿ ನೇತೃತ್ವದ ಎನ್ ಡಿಎಯ ಹೊಸದಾಗಿ ಆಯ್ಕೆಯಾದ ಸದಸ್ಯರು ಇಂದು ಸೇರಿದ್ದ ಸಭೆಯಲ್ಲಿ ನರೇಂದ್ರ ಮೋದಿಯವರನ್ನು ತಮ್ಮ ನಾಯಕರಾಗಿ (ಪ್ರಧಾನಿ) ಆಯ್ಕೆ ಮಾಡಿದ್ದಾರೆ. ಸಭೆ ಆರಂಭವಾಗ್ತಿದ್ದಂತೆ NDA ನಾಯಕರಾಗಿ ನರೇಂದ್ರ ಮೋದಿ ಹೆಸರನ್ನು ರಾಜನಾಥ ಸಿಂಗ್ ಪ್ರಸ್ತಾಪಿಸಿದ್ರು.
ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಆಂಧ್ರ ಪ್ರದೇಶ ಮಾಜಿ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು, ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೇರಿದಂತೆ ಮಿತ್ರ ಪಕ್ಷಗಳ ನಾಯಕರು ವೇದಿಕೆ ಸ್ವೀಕರಿಸಿದರು. ವೇದಿಕೆಯಲ್ಲಿ ಅನುಪ್ರಿಯಾ ಪಟೇಲ್, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಏಕನಾಥ್ ಶಿಂಧೆ, ಅಜಿತ್ ಪವಾರ್, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಎಚ್ ಡಿ ಕುಮಾರಸ್ವಾಮಿ, ಪವನ್ ಕಲ್ಯಾಣ್, ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಇದ್ದರು.
ರಾಜನಾಥ್ ಸಿಂಗ್ ಮಂಡಿಸಿದ ಪ್ರಸ್ತಾಪಿಸಿದ ಹೆಸರನ್ನ ಎನ್ ಡಿಎ ನಾಯಕರೆಲ್ಲರೂ ಅನುಮೋದಿಸಿದ್ರು.