Namma Metro | ಚಾಲಕ ರಹಿತ ಮೊದಲ ಮೆಟ್ರೋ ಮಾರ್ಚ್‌ನಲ್ಲಿ ಓಡಾಡೋ ಸಾಧ್ಯತೆ..!

ಬೆಂಗಳೂರು, (www.thenewzmirror.com) :

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಚೈನೀಸ್ ನಿರ್ಮಿತ ಮೂಲ ಮಾದರಿಯು ಚೆನ್ನೈ ಬಂದರಿಗೆ ಆಗಮಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಈ ಮೆಟ್ರೋ ರೈಲು ಫೆಬ್ರವರಿ ಮಧ್ಯದ ವೇಳೆಗೆ ಹೆಬ್ಬಗೋಡಿ ಮೆಟ್ರೋ ರೈಲು ಡಿಪೋಗೆ ಶೀಘ್ರದಲ್ಲೇ ಬರಲಿದೆ.ಈ ಚಾಲಕ ರಹಿತ ಮೆಟ್ರೋ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿದೆ.

RELATED POSTS

ಫೆಬ್ರವರಿ 18 ರೊಳಗೆ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ.  ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ 216 ಬೋಗಿಗಳನ್ನು ಪೂರೈಸಲು 2019 ರಲ್ಲಿ ಚೀನಾದ ಸಂಸ್ಥೆಯು 1,578 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಡಿಪೋ ಮಟ್ಟದಲ್ಲಿ ಸರಣಿ ಪರೀಕ್ಷೆಗಳಿಗೆ ಒಳಗಾದ ನಂತರ ಮಾರ್ಚ್ ವೇಳೆಗೆ ಈ ಚಾಲಕ ರಹಿತ ಮೇನ್‌ಲೈನ್ ಟೆಸ್ಟಿಂಗ್‌ಗೆ ಸಿದ್ಧವಾಗಲಿದೆ.

ಫೆಬ್ರವರಿ ಅಂತ್ಯದ ವೇಳೆಗೆ ಅಥವಾ ಮಾರ್ಚ್ ಆರಂಭದಲ್ಲಿ, ನಾವು ಮೇನ್‌ಲೈನ್ ಟೆಸ್ಟಿಂಗ್‌ಗಾಗಿ ಸಿದ್ಧ ಮಾಡುತ್ತೇವೆ. ಅದಾದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಟೆಸ್ಟಿಂಗ್ ಮಾಹಿತಿಯನ್ನ ನೀಡಿ ಕ್ಲಿಯರೆನ್ಸ್ ಪಡೆಯಲು ಸಿದ್ಧತೆ ನಡೆಸಿದೆ ಬಿಎಂಆರ್ ಸಿಎಲ್.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist