ಬೆಂಗಳೂರು(thenewzmirror.com): ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಎರಡನೇ ಸ್ಟೇ ವೇಕೇನ್ಸಿ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದ್ದು ಅರ್ಹರು ಮಾರ್ಚ್ 4ರವರೆಗೆ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ 5ರೊಳಗೆ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ
2024ನೇ ಸಾಲಿನ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತೆಯನ್ನು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ “5th Percentile” ಎಂದು ಎನ್. ಬಿ.ಇ.ಎಂ.ಎಸ್ ಅಧಿಕೃತವಾಗಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ನೋಂದಣಿ ಮಾಡಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಮಾ.5ರೊಳಗೆ ಪಾವತಿಸಬಹುದಾಗಿದೆ. ಎರಡನೇ ಸೈ ವೇಕೆನ್ಸಿ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ .
ಇಲ್ಲಿಯವರೆಗೆ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಮಾ. 3ರಿಂದ 5ರವರೆಗೆ ಕೆಇಎ ನಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಬಳಿಕ ಫೆ.6ರೊಳಗೆ ₹5 ಲಕ್ಷ ಠೇವಣಿ ಇಟ್ಟವರಿಗೆ ಮಾತ್ರ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.