ನಕಲಿ ಅಭ್ಯರ್ಥಿಗಳ ಪತ್ತೆಗೆ ಹೊಸ ಪ್ರಯತ್ನ, ಪ್ರಯೋಗಾರ್ಥ ಯಶಸ್ಸು:ಕೆ.ಇ.ಎ. ರೂಪಿಸಿದ ಮೊಬೈಲ್ ಆಧರಿತ ಪರೀಕ್ಷಾ ಅಭ್ಯರ್ಥಿ ದೃಢೀಕರಣ

RELATED POSTS

ಬೆಂಗಳೂರು(thenewzmirror.com): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಎಂಜಿನಿಯರಿಂಗ್ ತಂಡವು ಸ್ವತಃ ಸಿದ್ಧಪಡಿಸಿದ ಎಐ ತಾಂತ್ರಿಕತೆಯ ಮೊಬೈಲ್ ಆಧರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ಶನಿವಾರ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಮೊತ್ತಮೊದಲ ಬಾರಿಗೆ ಯಶಸ್ವಿಯಾಗಿ ಬಳಸಲಾಗಿದೆ. ಇದು, ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ತೊಡೆದು ಹಾಕಲಿದೆ.

ವಿಧಾನ ಪರಿಷತ್ ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇನ್ನಿತರ ಹುದ್ದೆಗಳಿಗೆ ನಾಲ್ಕು ದಿನಗಳ ಪರೀಕ್ಷೆಯು ಶನಿವಾರ ಆರಂಭವಾಗಿದ್ದು, ಇದರಲ್ಲಿ ಕೆಇಎ ಎಂಜಿನಿಯರಿಂಗ್ ತಂಡದವರು ಅಭಿವೃದ್ಧಿಪಡಿಸಿರುವ  ಈ ತಾಂತ್ರಿಕತೆಯನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆಪ್ ಬಳಸಿ ಅವರ ಮುಖದ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ಇದು, ತಕ್ಷಣವೇ ಕೆಇಎ ಸರ್ವರ್ ನೊಂದಿಗೆ ಆನ್ ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಹಾಕಿದ್ದ ಭಾವಚಿತ್ರದೊಂದಿಗೆ ತಾಳೆ ನೋಡಿ, ಅಭ್ಯರ್ಥಿಯ ನೈಜತೆಯನ್ನು ತತ್ ಕ್ಷಣವೇ ದೃಢಪಡಿಸುತ್ತದೆ. ಇದರಿಂದ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ವಿವರಿಸಿದ್ದಾರೆ.

ಶನಿವಾರ ಬೆಳಿಗ್ಗೆ 74 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 267 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಈ ತಾಂತ್ರಿಕ ವ್ಯವಸ್ಥೆಯ ಮೊದಲ ದಿನದ ಪ್ರಯೋಗ ಯಶಸ್ವಿಯಾಗಿದ್ದು, ಇನ್ನು ಮುಂದೆ ಇತರ ಪರೀಕ್ಷೆಗಳಿಗೂ ಇದರ ಬಳಕೆಯನ್ನು ವಿಸ್ತರಿಸಲಾಗುವುದು ಎಂದೂ ಪ್ರಸನ್ನ ಹೇಳಿದ್ದಾರೆ.

ವೆಬ್ ಸೈಟ್ ನಲ್ಲಿ ಓಎಂಆರ್ ಶೀಟ್:

ಇಂದು ನಡೆದ ವಿಧಾನ ಪರಿಷತ್ತಿನ ನೇಮಕಾತಿ ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಓಎಂಆರ್ ಶೀಟ್ ಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವ ಕೆಲಸವನ್ನೂ ಇದೇ ಮೊದಲು ಮಾಡಲಾಯಿತು. ಇದು ಪಾರದರ್ಶಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು, ಯಾರು ಬೇಕಾದರೂ ಓಎಂಆರ್ ಶೀಟ್ ಗಳನ್ನು ನೋಡಬಹುದು. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ಪ್ರಸನ್ನ ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist