ಬೆಂಗಳೂರು,(www.thenewzmirror com) ;
ಒಡಿಶಾ ರಾಜ್ಯದಲ್ಲಿ ಇನ್ಮುಂದೆ ಹೊಸ ಮದ್ಯದಂಗಡಿಗೆ ಅವಕಾಶ ನೀಡದಿರಲು ಕಾನೂನು ಸಚಿವ ಪೃಥ್ವಿರಾಜ್ ತೀರ್ಮಾನ ಮಾಡಿದ್ದಾರೆ. ಆ ಮೂಲಕ ಮದ್ಯ ಉದ್ಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.
ಒಡಿಶಾ ಮಾರುಕಟ್ಟೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದೆ ಎನ್ನಲಾಗುತ್ತದೆ. ತೆರಿಗೆ ರಹಿತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಇದರ ಉದ್ದೇಶವಾಗಿದೆ. ಅಬಕಾರಿ ನಿಯಮಗಳಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಲೋಪದೋಷಗಳನ್ನು ಗುರುತಿಸಲು ಮತ್ತು ಮುಚ್ಚುವ ಗುರಿಯನ್ನು ಸಚಿವಾಲಯ ಹೊಂದಿದೆ ಎಂದಿದ್ದಾರೆ.
ಅಬಕಾರಿ ನೀತಿಯನ್ನು ಸ್ಪಷ್ಟಪಡಿಸುವ ಮೂಲಕ ಒಡಿಶಾದಲ್ಲಿ ಯಾವುದೇ ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಬಕಾರಿ ಸಚಿವರು ವಿವರಿಸಿದ್ದಾರೆ. ಕಾನೂನು ಮತ್ತು ಕಾರ್ಯ ಸಚಿವಾಲಯಗಳ ಜವಾಬ್ದಾರಿಗಳನ್ನು ಹೊಂದಿರುವ ಹರಿಚಂದನ್, ಅಕ್ರಮ ಮದ್ಯ ಮಾರಾಟವನ್ನು ತಡೆಯಲು ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
2025ರಲ್ಲಿ ರಾಜ್ಯದಲ್ಲಿ ಅಬಕಾರಿ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಕಾಣಲಿದೆ. ಆದ್ದರಿಂದ ಒಡಿಶಾದಲ್ಲಿ ಯಾವುದೇ ಹೊಸ ಮದ್ಯದ ಅಂಗಡಿಗಳು ಅಥವಾ ಅಕ್ರಮ ಮದ್ಯ ಮಾರಾಟ ಇರುವುದಿಲ್ಲ ಎಂದು ಹರಿಚಂದನ್ ಹೇಳಿದ್ದಾರೆ.