ಬೆಂಗಳೂರು, (www.thenewzmirror.com) ;
ದಕ್ಷಿಣ ಭಾತರದಲ್ಲಿಯೇ ಪ್ರಪ್ರಥಮ ಹವಾನಿಂತ್ರಿತ ಮಾರ್ಕೇಟ್ ಉದ್ಘಾಟನೆಗೊಂಡಿದೆ. ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಿರುವ ಭೂಗತ ಹವಾನಿಯಂತ್ರಿತ ಮಾರ್ಕೇಟ್ ಫುಲ್ ಹೈಟೆಕ್ ಆಗಿ ನಿರ್ಮಿಸಲಾಗಿದೆ.
ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, 16ನೇ ಶತಮಾನದ ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನ ಹೆಸರನ್ನು ಇಡಲಾಗಿದೆ. ಆರಂಭದಲ್ಲಿ ಪಾಲಿಕೆ ಬಜಾರ್ ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ವು. ಅವೆಲ್ಲವನ್ನೂ ಬದಿಗೊತ್ತಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವ್ರ ಪರಿಶ್ರಮದ ಫಲವಾಗಿ ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆಗೊಂಡಿದೆ.
ಪ್ರತಿ ಅಂಗಡಿಯು ಸುಮಾರು ಒಂಬತ್ತು ಚದರ ಮೀಟರ್ ಜಾಗ ಹೊಂದಿದೆ. ಬಿಬಿಎಂಪಿ 2017-18ನೇ ಸಾಲಿನಲ್ಲಿ 5 ಕೋಟಿ ಹಾಗೂ 2021-22 ರಲ್ಲಿ ಹೆಚ್ಚುವರಿಯಾಗಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಪಾಲಿಕೆ ಬಜಾರ್ ಒಟ್ಟು136 ಮೀಟರ್ ಉದ್ದ ಮತ್ತು 11 ಮೀಟರ್ ಅಗಲವಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ ಮಳಿಗೆಗಳನ್ನು ಕಾಣಬಹುದಾಗಿದೆ. ಮಾರುಕಟ್ಟೆಗೆ ಮಳೆನೀರು ನುಗ್ಗದಂತೆ ಅದರ ಸುತ್ತ ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸಿ ಮಳೆ ನೀರನ್ನು ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿಯುವಂತೆ ಮಾಡಲಾಗಿದೆ.
ಹೈಟೆಕ್ ಮಾರ್ಕೇಟ್ ನಲ್ಲಿ ಒಟ್ಟು 79 ಅಂಗಡಿಗಳಿವೆ. ಇಡೀ ಮಾರುಕಟ್ಟೆಗೆ ಸಂಪೂರ್ಣ ಗ್ರಾನೈಟ್ ನಲ್ಲಿ ಪ್ಲೋರಿಂಗ್ ಮಾಡಲಾಗಿದ್ದು, ಸೆನ್ಸರ್ ಹೊಂದಿದ 3 ಗ್ಲಾಸ್ ಸ್ಲೈಡಿಂಗ್ ಡೋರ್‌ಗಳು, 2 ಎಸ್ಕಲೇಟರ್‌ಗಳ ಜತೆಗೆ ಗೂಡ್ಸ್ ಲಿಫ್ಟ್ ಸೌಲಭ್ಯ ಒದಗಿಸಲಾಗಿದೆ. ಒಂದು ಎಲೆಕ್ಟ್ರೀಕಲ್ ರೂಂ, ಒಂದು ಸ್ಟೋರ್ ಹಾಗೂ ಆಫೀಸ್ ರೂಂ, ಒಟ್ಟು 8 ಎಂಟ್ರಿ ಎಕ್ಸಿಟ್ ಪಾಯಿಂಟ್ ಗಳಿದ್ದು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಪ್ರತಿ ಅಂಗಡಿಗಳಲ್ಲೂ ಅಗ್ನಿ ನಿಯಂತ್ರಕಗಳಿದ್ದು, ಉತ್ತಮ ಗಾಳಿ, ಬೆಳಕು ಬರುವಂತೆ ನಿರ್ಮಿಸಲಾಗಿದೆ.
ಶಾಸಕ ಎಂ.ಕೃಷ್ಣಪ್ಪರ ಕನಸಿನ ಯೋಜನೆ
ಕೃಷ್ಣದೇವರಾಯ ಪಾಲಿಕೆ ಬಜಾರ್ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವ್ರ ಕನಸಿನ ಯೋಜನೆ. ಇಲ್ಲಿನ ಬೀದಿವ್ಯಾಪಾರಿಗಳು ಬಿಸಿಲು ಗಾಳಿ ಮಳೆಯಲ್ಲಿ ವ್ಯಾಪಾರ ಮಾಡುತ್ತಿದ್ರು. ಹೀಗಾಗಿ ವ್ಯಾಪಾರಿಗಳೆಲ್ಲ ಸೇರಿ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಬೇಡಿಕೆ ಇಟ್ಟಿದ್ದರು. ಸಿದ್ದರಾಮಯ್ಯ 2017 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಹಂತದಲ್ಲಿ ಐದು ಕೋಟಿ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಕೃಷ್ಣಪ್ಪ ಯಶಸ್ವಿಯಾಗಿದ್ದರು.
ಪಾಲಿಕೆ ಬಜಾರ್ ನ ವಿಶೇಷತೆಗಳು..,
– ದಕ್ಷಿಣ ಭಾರತದ ಪ್ರಪ್ರಥಮ ಹವಾನಿಯಂತ್ರಿತ ಮಾರುಕಟ್ಟೆ.
– ಯೋಜನೆಯ ಅಂದಾಜು ಮೊತ್ತ 13 ಕೋಟಿ ರೂ.(2017-18ನೇ ಸಾಲಿನಲ್ಲಿ 5 ಕೋಟಿ, 2021-22ನೇ ಸಾಲಿನಲ್ಲಿ 8 ಕೋಟಿ ರೂ)
– ವಿಜಯನಗರ ಬಸ್/ಮೇಟ್ರೊ ನಿಲ್ದಾಣದ ಬಳಿ.
– ಪಾಲಿಕೆ ಬಜಾರ್‌ನ ಒಟ್ಟು ವಿಸ್ತೀರ್ಣ:- 1165 ಚ.ಮೀ.
– ಬಜಾರ್‌ನ ಉದ್ದ: 136 ಮೀ.
– ಬಜಾರ್‌ನ ಅಗಲ: ಅಂದಾಜು 11 ಮೀ.
– ಪ್ರತಿ ಮಳಿಗೆಯ ವಿಸ್ತೀರ್ಣ: ಸರಾಸರಿ 9 ಚ.ಮೀ
– ಮಳಿಗೆಗಳ ಸಂಖ್ಯೆ:- 79