ಬೆಂಗಳೂರು, (www.thenewzmirror com) ;
ಪ್ಯಾರೀಸ್ ನಲ್ಲಿ ನಡೆಯುತ್ತಿರೋ ಒಲಂಪಿಕ್ಸ್ ಆಗಸ್ಟ್ 11 ಕ್ಕೆ ಮುಕ್ತಾಯವಾಗಲಿದೆ. ಅಂಕಪಟ್ಟಿಯಲ್ಲಿ ಅಮೇರಿಕಾ ಅಗ್ರಸ್ಥಾನ ಪಡೆದಿದೆ. ಮೂಲಗಳ ಪ್ರಕಾರ ಭಾರತ 177, ಪಾಕಿಸ್ತಾನ 17 ಸ್ಪರ್ಧಾಳುಗಳನ್ನ ಒಲಂಪಿಕ್ಸ್ ಗೆ ಕಳುಹಿಸಿತ್ತು.
ಭಾರತದ ಚಿನ್ನದ ಬೇಟೆಗೆ ಪಾಕಿಸ್ತಾನ ಅಡ್ಡಗಾಲು ಹೇಗೆ ಹಾಕಿತ್ತು ಅನ್ನದ್ರ ಬೆನ್ನಲ್ಲೇ ಗೆದ್ದಿದ್ದು ಒಂದೇ ಒಂದು ಪದಕವಾದರೂ 6 ಪದಕಗಳನ್ನ ಗೆದ್ದ ಭಾರತಕ್ಕಿಂತ 8 ಸ್ಥಾನ ಅಂಕಪಟ್ಟಿಯಲ್ಲಿ ಮೇಲಿದೆ..!
India Below Pakistan in Paris Olympics Medal Table. pic.twitter.com/QVz5LKlbYU
— Gems of Engineering (@gemsofbabus_) August 9, 2024
ಒಂದೇ ಒಂದು ಪದಕ ಗೆದ್ದರೂ ಪಾಕಿಸ್ತಾನ ಭಾರತಕ್ಕಿಂತ ಮೇಲೆ ಹೇಗೆ ಸ್ಥಾನ ಪಡೆಯಿತು ಎನ್ನುವುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಆಗಸ್ಟ್ 9 ರ ವರೆಗೂ ಪಾಕಿಸ್ತಾನ ಒಂದೇ ಒಂದು ಪದಕವನ್ನೂ ಗೆದ್ದಿರಲಿಲ್ಲ ಆದರೆ ಪುರುಷರ ಜಾವಲಿನ್ ಥ್ರೋ ನಲ್ಲಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಬೀಗಿತ್ತು ಪಾಕಿಸ್ತಾನ. ಆ ಮೂಲಕ ಪಾಕ್ಗೆ 40 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಚಿನ್ನದ ಪದವೊಂದನ್ನು ಗೆದ್ದ ಸಾಧನೆ ಮಾಡಿತ್ತು. ಆದರೆ ಭಾರತ 6 ಪದಕ ಗೆದ್ದರೂ ಕೂಡ ಪದಕ ಪಟ್ಟಿಯಲ್ಲಿ ಪಾಕ್ಗಿಂತ ಕೆಳಗಿರಲು ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿರುವ ನಿಯಮ.
ಹೌದು ಅಂಕಪಟ್ಟಿಯಲ್ಲಿ ಎಷ್ಟು ಬೆಳ್ಳಿ, ಕಂಚು ಗೆದ್ದಿದ್ದರೂ ಚಿನ್ನದ ಪಕದವನ್ನ ಯಾವ ದೇಶ ಹೆಚ್ಚಿಗೆ ಪಡೆಯುತ್ತೋ ಆ ದೇಶ ಮೊದಲ ಸ್ಥಾನಕ್ಕೆ ಏರುತ್ತೆ. ಹೀಗಾಗಿನೇ ಒಂದೇ ಒಂದು ಚಿನ್ನದ ಪದಕ ಗೆದ್ದ ಪಾಕಿಸ್ತಾನ 53 ನೇ ಸ್ಥಾನದಲ್ಲಿದ್ದರೆ ಒಂದು ಬೆಳ್ಳಿ ಐದು ಕಂಚಿನ ಪದಕ ಗೆದ್ದ ಭಾರತ 64 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.