ಬೆಂಗಳೂರು, (www.thenewzmirror.com) :
ಉಪಕಾರ ಮಾಡಿದ್ದರೂ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಉಪಕಾರ ಮಾಡಿದ್ರೆ ಏನಾಗುತ್ತೇ ನೋಡಿ ಇರಲಿ ಎಲ್ಲವನ್ನೂ ಎದುರಿಸೋಣ ಎಂದು ತಮ್ಮ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ.
ತಮ್ಮ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ತಾಯಿ ಮಗಳು ಅನ್ಯಾಯವಾಗಿದೆ ಎಂದು ಬಂದಿದ್ದರು. ಆ ವೇಳೆ ಉಪಕಾರ ಮಾಡಿದ್ರೆ ನನ್ನ ವಿರುದ್ದವೇ ಕೇಸ್ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ತಾಯಿ ಮಗಳು ಅನೇಕ ಸಲ ಇಲ್ಲಿಗೆ ಬಂದು ಹೋಗಿದ್ರು. ನನಗೆ ಅನ್ಯಾಯವಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ನನ್ನ ಬಳಿಗೆ ಬಂದಿದ್ದರು ಅದಾದ ಮೇಲೆ ನನ್ನ ಮೇಲೆ ಏನೇನೋ ಮಾತನಾಡಿದರು. ಅಮೇಲೆ ಕಮಿಷನರ್ ಬಳಿ ಕಳುಹಿಸಿಕೊಟ್ಟೆ ಎಂದು ತಿಳಿಸಿದರು.
ಯಾರೋ ಒಬ್ಬಹೆಣ್ಣುಮಗಳು ದೂರು ಕೊಟ್ಟಿದ್ದಾರೆ ಎದುರಿಸೋಣ ಬಿಡಿ. ಈ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ರಾಜಕೀಯ ಪ್ರೇರಿತ ಎಂದು ಹೇಳಲು ಇಷ್ಟಪಡಲ್ಲ. ಕೇಸ್ ಅನ್ನು ಕಾನೂನಿನ ಪ್ರಕಾರ ಎದುರಿಸುತ್ತೇನೆ ಎಂದು ಬಿಎಸ್ ವೈ ತಿಳಿಸಿದರು.
ಇದರ ಬೆನ್ನಲ್ಲೇ ಸರ್ಕಾರ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಿ ಆದೇಶಿಸಿದೆ.