ಬೆಂಗಳೂರು, (www.thenewzmirror.com) ;
ಅಂತರಾಷ್ಟ್ರೀಯ ತನ್ನ ಹೆಸರನ್ನ ಗುರ್ತಿಸಿಕೊಂಡಿರುವ ನಗರ ಅಂದ್ರೆ ಬೆಂಗಳೂರು, ಐಟಿ, ಬಿಟಿ, ಸಿಲಿಕಾನ್ ವ್ಯಾಲಿ ಅಂತೆಲ್ಲ ಕರೆಸಿಕೊಳ್ಳುತ್ತಿರೋ ಬೆಂಗಳೂರನ್ನ ಇದೀಗ ರಸ್ತೆ ಗುಂಡಿಗಳ ಸಿಟಿ ಅಂತ ಕರೆಸಿಕೊಳ್ಳೋ ಹಂತಕ್ಕೆ ಬಂದಿದ್ಯಾ ಅನ್ನೋ ಪ್ರಶ್ನೆ ಉದ್ಭವವಾಗ್ತಿದೆ. ಇದಕ್ಕೆ ಕಾರಣ ನಗರದ ಬಹುತೇಕ ರಸ್ತೆಗಳಲ್ಲಿ ಕಾಣಸಿಗುವ ರಸ್ತೆ ಗುಂಡಿಗಳು.
ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತಿದ್ರೂ ರಸ್ತೆ ಗುಂಡಿಗಳ ನಡುವೆನೇ ವಾಹನ ಓಡಿಸೋ ಸ್ಥಿತಿ ನಿರ್ಮಾಣವಾಗಿರೋದಕ್ಕೆ ವಾಹನ ಸವಾರರು ಬಿಬಿಎಂಪಿಗೆ ಹಿಡಿಶಾಪ ಹಾಕ್ತಿದ್ದಾರೆ. ಮತ್ತೊಂದ್ಕಡೆ ಆಮ್ ಆದ್ಮಿ ಪಾರ್ಟಿ ರಸ್ತೆ ಗುಂಡಿ ಅದ್ರಿಂದ ಆಗ್ತಿರೋ ರಸ್ತೆ ಅಫಗಾತಗಳ ಸಂಖ್ಯೆಯನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಪಾಲಿಕೆ ಗಮನ ಸೆಳೆಯೋ ಕೆಲ್ಸ ಮಾಡಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ 2 ಕಿಲೋಮೀಟರ್ ಮರ್ಕಂ ರಸ್ತೆ ಗರುಡಾ ಮಾಲ್ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗಳಿದ್ದು, ಅದನ್ನ ತಪ್ಪಿಸೋ ನಿಟ್ಟಿನಲ್ಲಿ ಪದೇ ಪದೇ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ಬಿಡಿಎ ಅಧ್ಯಕ್ಷರೂ ಆಗಿರುವ ಎನ್. ಎ. ಹ್ಯಾರೀಸ್ ಗೆ ಗೊತ್ತಿದ್ದರೂ ಮುಚ್ಚಿಸುವ ಕೆಲ್ಸ ಮಾಡ್ತಿಲ್ಲ. ಹಾಗೆನೇ ಬಿಬಿಎಂಪಿ ಅಧಿಕಾರಿಗಳು ಈ ರಸ್ತೆಯಲ್ಲಿ ಓಡಾಟ ನಡೆಸಿದ್ರೂ ಅವ್ರ ಕಣ್ಣಿಗೆ ಗುಂಡಿಗಳಿರುವುದು ಕಾಣಿಸುತ್ತಿಲ್ಲ. ಹೀಗಾಗಿ ಅವರ ಗಮನ ಸೆಳೆಯೋ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸುರಕ್ಷಿತ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರ ಹಾಗೂ ಬಿಬಿಎಂಪಿಯನ್ನು ಒತ್ತಾಯಿಸಿ ರಸ್ತೆಗುಂಡಿಗಳಿಗೆ ಪೂಜಾ ಕೈಂಕರ್ಯಗಳನ್ನ ಮಾಡುವ ಕೆಲಸ ಮಾಡಿದ್ರು.
ಆಮ್ ಆದ್ಮಿ ಮುಖಂಡರಾದ ಅನಿಲ್ ನಾಚಪ್ಪ, ಶಿವಕುಮಾರ್, ಮೋಹನ್ ಕುಮಾರ್ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ರಸ್ತೆ ಗುಂಡಿಗೆ ವಿಧಿವಿಧಾನದ ಪ್ರಕಾರ ಪೂಜೆ ನೆರವೇರಿಸಿದ್ರು.