ಬೆಂಗಳೂರು,(www.thenewzmirror.com) ;
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರೋ ಹಾಸನದ ಸಂಸದ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಲೋಕಸಭೆ ಮತದಾನ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದ ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿ, ವೀಡಿಯೋ ಒಂದನ್ನ ಬಿಟ್ಟಿದ್ದಾರೆ.
ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವೀಡಿಯೋ ಮಾಡಿರುವ ಪ್ರಜ್ವಲ್ ರೇವಣ್ಣ, ನಾನು ವಿದೇಶಕ್ಕೆ ತೆರಳುವುದು ಏ.26 ರಂದೇ ಪೂರ್ವನಿಗದಿಯಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೆರ ಅಲ್ದೆ ಲೈಂಗಿಕ ದೌರ್ಜನ್ಯ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಎದುರು ಇದೇ 31ರಂದು ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ವೀಡಿಯೋದಲ್ಲಿ ಕೇಳುವ ಆಡಿಯೋ ಎಲ್ಲಿಯದ್ದು.?
ಹತ್ರತ್ರ ಎರಡೂವರೆ ನಿಮಿಷದ ಕ್ಷಮೆ ಕೇಳುವ ವೀಡಿಯೋ ನಡುವೆ ಒಂದು ಆಡಿಯೋ ಕೇಳುತ್ತೆ. ಆ ಆಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದರೆ ಅದು ಅವರು ಎಲ್ಲಿದ್ದಾರೆ ಎನ್ನುವ ಸುಳಿವು ಕೊಡುತ್ತೆ ಅನ್ನೋ ಚರ್ಚೆಗಳು ಶುರುವಾಗಿವೆ.
ಇದೇ ವೇಳೆ ಮಾಜಿ ಪ್ರಧಾನಿ, ತಾತ ಎಚ್.ಡಿ. ದೇವೇಗೌಡ ಪತ್ರ, ಕುಮಾರಸ್ವಾಮಿ ಅವರ ಮನವಿಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ತಂದೆ-ತಾಯಿ, ತಾತನಿಗೆ ಕ್ಷಮೆಕೋರುತ್ತೇನೆ, ಜನತೆ, ಜೆಡಿಎಸ್ ಕಾರ್ಯಕರ್ತರಿಗೂ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ನಾನೇ ಶುಕ್ರವಾರ (ಮೇ 31) ಖುದ್ದಾಗಿ ಬೆಳಿಗ್ಗೆ 10 ಗಂಟೆಗೆ ಎಸ್ ಐಟಿ ಮುಂದೆ ಬಂದು ನಾನು ಉತ್ತರ ಕೊಡುತ್ತೇನೆ. ಸರಿಯಾದ ಉತ್ತರ ಕೊಡುವ ಪ್ರಯತ್ನವನ್ನ ಮಾಡುತ್ತೇನೆ, ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಈ ಸುಳ್ಳು ಪ್ರಕರಣಗಳಿಂದ ಆಚೆ ಬರುವ ಕೆಲಸವನ್ನ ನಾನು ನ್ಯಾಯಾಲಯದ ಮೂಲಕ ಮಾಡಿಕೊಳ್ಳುತ್ತೇನೆ, ನನ್ನ ಮೇಲೆ ದೇವರ ಆಶೀರ್ವಾದ ಹಾಗೂ ನಾಡಿನ ಜನರ, ಕುಟುಂಬದ ಆಶೀರ್ವಾದವಿರಲಿ. ಎಸ್ ಐಟಿ ಮುಂದೆ ಬಂದು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಇತ್ತೀಚೆಗೆ ಬಹಿರಂಗ ಪತ್ರ ಪ್ರಕಟಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿದ್ದರು. ತಕ್ಷಣ ಬಂದು ವಿಚಾರಣೆ ಎದುರಿಸುವಂತೆ ತಾಕೀತು ಮಾಡಿದ್ದರು. ಅಲ್ಲದೆ, ಮತ್ತೊಂದೆಡೆ ಪ್ರಜ್ವಲ್ ಅವರು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ಬಗ್ಗೆ ಪ್ರಜ್ವಲ್ ಅವರಿಗೂ ನೋಟಿಸ್ ಜಾರಿ ಮಾಡಿತ್ತು.