ಬೆಂಗಳೂರು, (www.thenewzmirror.com) ;
ಗ್ಯಾರಂಟಿಗಳಿಗೆ ಅನುದಾನ ಒದಗಿಸುವಲ್ಲಿ ಪರದಾಡುತ್ತಿರುವ ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಿಎಂಗೆ ಪತ್ರ ಬರೆದಿದ್ದು, ಜುಲೈ 29ರ ವರೆಗೂ ಡೆಡ್ ಲೈನ್ ಕೊಟ್ಟಿದೆ. ಅಷ್ಟರೊಳಗೆ ಮನವಿಗೆ ಸ್ಪಂದನೆ ಮಾಡದಿದ್ರೆ ರಾಜ್ಯಾದ್ಯಂತ ಕೆಲಸಕ್ಕೆ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಸಿಎಂಗೆ ಪತ್ರ ಬರೆದಿದ್ದು, ಏಳನೆ ವೇತನ ಜಾರಿ, ಹಳೆ ಪಿಂಚಣಿ ಜಾರಿ ಮಾಡಬೇಕು, ಆರೋಗ್ಯ ಸಂಜೀವನಿ ಸೇರಿದಂತೆ ಒಟ್ಟು ಐದು ಬೇಡಿಕೆಗಳನ್ನ ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ಹಲವು ಬಾರಿ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಹೀಗಿದ್ದರೂ ಸರ್ಕಾರ ಬೇಡಿಕೆ ಈಡೇರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಹೀಗಾಗಿ ಜುಲೈ 29ರೊಳಗೆ ಬೇಡಿಕೆಗಳನ್ನ ಈಡೇರಿಸದಿದ್ದರೆ ರಾಜ್ಯಾದ್ಯಂತ ಎಲ್ಲ ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನ ಸ್ಥಗಿತಗೊಳಿಸಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.
ನೌಕರರ ಸಂಘದ ಬೇಡಿಕೆಗಳು
– ಏಳನೇ ವೇತನ ಆಯೋಗದ ವರದಿ ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು
– ಹೊಸ ಪಿಂಚಣಿ (NPS)ಪದ್ದತಿಯನ್ನು ರದ್ದು ಪಡಿಸಿ ಹಳೆ ಪಿಂಚಣಿ (OPS) ಜಾರಿ ತರಬೇಕು
– ಸುಮಾರು 14 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ಮಾಡದೆ ಇರುವುದರಿಂದ ಪಾಲಿಕೆ ನೌಕರರು ಆಡಳಿತ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದಾರೆ. ಇದರಿಂದ ಕೂಡಲೇ ವೃಂದ ಮತ್ತು ನೇಮಕಾತಿ ನಿಯಾಮಾವಳಿ ಕರಡು ಅಧಿಸೂಚನೆ ಹೊರಡಿಸಬೇಕು
– ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರಿಗೆ ಸಹ ಕೆಜಿಐಡಿ ಮತ್ತು ಸಾಮಾನ್ಯ ಭವಷ್ಯ ನಿಧಿ (ಜಿಪಿಎಫ್) ಅನ್ನು ಜಾರಿ ಮಾಡಬೇಕು
– ಕರ್ನಾಟಕ ರಾಜ್ಯ ಮಹಾನಗ ಪಾಲಿಕೆ ನೌಕರರಿಗೆ ಆರೋಗ್ಯ ಸಂಜೀವನಿ ಯೋಜನೆ ಜಾರಿ ಮಾಡಬೇಕು