BIG Exclusive | ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿದ್ಯಾ ಸಾವಿರಾರು ಕೋಟಿ ಅಕ್ರಮ?, ನಿವೃತ್ತ ಅಧಿಕಾರಿಗೆ ಎಂಡಿ ಹುದ್ದೆ ಕೊಟ್ಟು ತಪ್ಪು ಮಾಡಿದ್ರಾ ಸಚಿವ ರಾಜಣ್ಣ, ಸಚಿವರ ವಿರುದ್ಧ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಪತ್ರ..!

ಬೆಂಗಳೂರು, (www.thenewzmirror.com) ;

ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಅಕ್ರಮ ಇನ್ನು ಜೀವಂತ ಇರುವಾಗಲೇ ಅಪೆಕ್ಸ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ಭ್ರಷ್ಟಚಾರ ನಡೆದಿರೋ ಕುರಿತಂತೆ ಸಮಗ್ರ ತನಿಖೆಗೆ ಆಗ್ರಹಿಸಿ ಇದೀಗ ರಾಜ್ಯಪಾಲರಿಗೆ ದೂರು ದಾಖಲಾಗಿದೆ. ಇದೆ ಬೆನ್ನಲ್ಲೇ ನ್ಯಾಯಾಲಯ ಕೂಡ ತಕ್ಷಣವೇ ಕ್ರಮ ಕೈಗೊಳ್ಳಿ ಅಂತ ರಾಜ್ಯ ಸರ್ಕಾರಕ್ಕೆ ಕೋರ್ಟ್ ಕೂಡ ಸೂಚನೆ ಕೊಟ್ಟಿದೆ.

RELATED POSTS

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಭಾರೀ ಸದ್ದು ಮಾಡುತ್ತಿರುವ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮವನ್ನೂ ಮೀರಿಸುವಂತಹ ಮಹಾ ಭ್ರಷ್ಟಚಾರ ರಾಜ್ಯ ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿದ್ಯಾ ಎನ್ನುವ ಅನುಮಾನ ಮೂಡುತ್ತಿದೆ. ಅಷ್ಟೇ ಅಲ್ದೇ ಈ ಕುರಿತಂತೆ ಸಹಕಾರಿ ಸಚಿವ ರಾಜಣ್ಣ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ 2023 ರ ಆಗಸ್ಟ್ 29 ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ದೇ ಲೋಕಾಯುಕ್ತದಿಂದ ಸಮಗ್ರ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.

ಸಹಕಾರ ಸಚಿವ ಕೆ.ಎನ್. ರಾಜಣ್ಣ

ಸಾಲ ನೀಡುವಾಗ ಸಹಕಾರಿ ನಿಯಮಾವಳಿಗಳು ಹಾಗೂ ಬ್ಯಾಂಕ್ ನ ಉಪ ನಿಯಮಗಳ ಪ್ರಕಾರ ಟ್ರಸ್ಟ್ ಗಳಿಗೆ, ಸಂಸ್ಥೆಗಳಿಗೆ ಭದ್ರತಾ ಹಣ ಪಡೆದು ಅವ್ರ ಸ್ಥಿರಾಸ್ತಿ ಹಾಗೂ ಚರಾಸ್ತಿ ಆಧಾರದ ಮೇಲೆ ಸಾಲ ನೀಡಬೇಕು. ಆದ್ರೆ ಖಾಸಗಿ ವ್ಯಕ್ತಿಗಳಿಗೆ, ಟ್ರಸ್ಟ್ ಗಳಿಗೆ, ಸಂಸ್ಥೆಗಳಿಗೆ ಭದ್ರತಾ ಹಣ ಪಡೆಯದೆ ಸುಮಾರು 2 ಸಾವಿರ ಕೋಟಿ ಸಾಲ ನೀಡಲಾಗಿದೆ. ಹಾಗೆನೇ ಕಳೆದ ವರ್ಷ ಆಗಸ್ಟ್ 10 ರಂದು ಸಿ.ಎನ್. ದೇವರಾಜು ಅವರನ್ನ 11 ತಿಂಗಳ ಅವಧಿಗೆ ಸೇವಾ ಗುತ್ತಿಗೆ ಆಧಾರದ ಮೇಲೆ ಅಪೆಕ್ಸ್ ಬ್ಯಾಂಕಿನ ಎಂಡಿ ಹುದ್ದೆಗೆ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬ್ಯಾಂಕಿನಲ್ಲಿ ಹಲವು ಅನುಭವಿ ಅಧಿಕಾರಿಗಳು ಹಾಗೂ ಹಿರಿಯ ಐಎಎಸ್ ಅಧಿಕಾರಿಗಳಿದ್ದರೂ ನಿವೃತ್ತರಾಗಿದ್ದ ದೇವರಾಜು ಅವ್ರನ್ನ ನೇಮಿಸುವ ಉದ್ದೇಶ ಏನಿತ್ತು. ಇದರ ಹಿಂದೆ ಹಲವು ಅನುಮಾನಗಳಿದ್ದುತನಿಖೆ ನಡೆಸುವಂತೆ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.

Apex Bank MD ದೇವರಾಜು

ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಹಾಗೆನೇ ಸಾಲದ ಅವಧಿ ಮೀರಿದ್ದರೂ ವಸೂಲಿ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನೂ ಕೈಗೊಂಡಿರದ ಬಗ್ಗೆ ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದ್ದು, ದೇವರಾಜು ಅವರನ್ನ ಎಂಡಿ ಹುದ್ದೆಗೆ ನೇಮಿಸಿದ ಸಚಿವ ರಾಜಣ್ಣ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆಯೂ ದಿನೇಶ್ ಕಲ್ಲಹಳ್ಳಿ ಒತ್ತಾಯ ಮಾಡಿದ್ದಾರೆ.

ಇನ್ನೊಂದು ಆತಂಕದ ವಿಚಾರವೆಂದರೆ ಸಾಲ ಪಡೆದ ಸಂಸ್ಥೆಗಳು, ಟ್ರಸ್ಟ್ ಗಳು ಮೂಲ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದೆ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಗೊತ್ತಿದ್ರೂ ಸುಮ್ಮನಿರೋದು ಹಲವು ಅನುಮಾನಗಳಿಗೆ ದಾರಿಮಾಡಿಕೊಡುತ್ತಿದ್ದು, ಸಹಕಾರಿ ಸಚಿವ ರಾಜಣ್ಣ, ಅಂದಿನ ಸಿಇಓ ಆಗಿದ್ದ ದೇವರಾಜ್, ಹಾಗೂ ಸಿಜಿಎಂ ಆಗಿದ್ದ ಜಂಗಮಪ್ಪ ವಿರುದ್ಧ ತನಿಖೆ ನಡೆಸಿ ಅಂತ ಮನವಿ ಮಾಡಿದ್ದು, ಈ ಹಿಂದೆ ಮುಖ್ಯಕಾರ್ಯದರ್ಶಿಗೆ ದಾಖಲೆ ಸಮೇಅನುಮಾನವಿದ್ದು ಕೂಡಲೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಿ ತನಿಖೆಗೆ ಒಳಪಡಿಸಿ ಭ್ರಷ್ಟಚಾರ ತಡೆ ಅಧಿನಿಯಮ 1988 ರ ಪ್ರಕರಣ 19 ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973 ರ ಪ್ರಕರಣ 197 ರ ಅಡಿ ಮಂಜೂರಾತಿ/ಅನುಮತಿ ನೀಡುವಂತೆ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ ವರ್ಷಗಳೇ ಕಳೆಯುತ್ತಿದ್ದರೂ ಯಾವುದೇ ಕ್ರಮ ವಹಿಸದ ಹಿನ್ನಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ರು ದಿನೇಶದ ಕಲ್ಲಹಳ್ಳಿ, ದಿನೇಶ್ ಅವ್ರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೂರು ತಿಂಗಳೊಳಗೆ ಕ್ರಮ ಕೈಗೊಂಡು ವರದಿ ನೀಡಿ ಅಂತ ರಾಜ್ಯ ಸರ್ಕಾರಕ್ಕೆ ಇದೇ ತಿಂಗಳ 2 ರಂದು ಸೂಚನೆ ಕೊಟ್ಟಿದೆ.

ಕಳೆದ ಒಂದು ವರ್ಷದಿಂದ ಅಪೆಕ್ಸ್ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ತನಿಖೆಗೆ ಮೀನಾಮೇಷ ಏಣಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ಕೋರ್ಟ್ ಬಿಸಿ ಮುಟ್ಟಿಸಿದೆ. ಅಷ್ಟೇ ಅಲ್ದೇ ರಾಜ್ಯಪಾಲರಿಗೆ ಬಂದಿರುವ ಲಿಖಿತ ದೂರಿನ ಆಧಾರದ ಮೇಲೆ ಸಚಿವ ರಾಜಣ್ಣ ವಿರುದ್ಧವೂ ತನಿಖೆ ನಡೆಸುತ್ತಾ ಕಾದು ನೋಡಬೇಕು. ಒಂದು ವೇಳೆ ತನಿಖೆ ನಡೆದಿದ್ದೇ ಆದ್ರೆ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗುವುದಲ್ಲದೆ ಹಣ ನುಂಗಿದ ಹೆಗ್ಗಣಗಳಿಗೆ ಸಂಕಟ ಕಟ್ಟಿಟ್ಟ ಬುತ್ತಿ.ತ ನೀಡಿದ್ದ ದೂರನ್ನ ಉಲ್ಲೇಖಿಸಿ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist