ಬೆಂಗಳೂರು, (www.thenewzmirror.com) ;
ರಾಜಭವನ ಅಂದಾಕ್ಷಣ ನೆನಪಿಗೆ ಬರೋದು ರಾಜ್ಯಪಾಲರಿಗಾಗಿ ಸರ್ಕಾರ ನೀಡಿರುವ ಭವನ, ರಾಜ್ಯಪಾಲರು ಆ ಭವನದಲ್ಲಿ ಇದ್ದುಕೊಂಡೇ ರಾಜ್ಯವನ್ನ ಪಾಲನೆ ಮಾಡುವ ಕೆಲಸ ಮಾಡ್ತಾರೆ ಅನ್ನೋ ಮಾತು ಕೇಳಿ ಬರುತ್ತೆ.
ಆದೃ ರಾಜಭವನ ಕೇವಲ ರಾಜ್ಯಪಾಲರಿಗೆ ಅಷ್ಟೇ ಅಲ್ಲ ಅಲ್ಲಿ ಸಾರ್ವಜನಿಕರಿಗೂ ಪ್ರವೇಶ ನೀಡಬೇಕು ಅನ್ನೋ ಮಾತು ಇದೀಗ ಕೇಳಿಬರುತ್ತಿದೆ. ಈ ಕುರಿತಂತೆ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಚಾಮುಂಡಿ ಶಿವಕುಮಾರ್, ಕರ್ನಾಟಕ ವಿಧಾನ ಮಂಡಳದ ಅರ್ಜಿಗಳ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಸಾರ್ವಜನಿಕರಿಗೂ ಮುಕ್ತವಾಗಲಿ ಅಂತ ಮನವಿ ಮಾಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ಅರಮನೆಗಿಂತಲೂ 6 ದಶಕಗಳ ಹಿಂದೆಯೇ ರಾಜಭವನ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಸರ್ ಮಾರ್ಕ್ ಕಬ್ಬನ್ ರಾಜಭವನ ಎಂಬ ಪಾರಂಪಾರಿಕ ಕಟ್ಟಡವನ್ನ ನಿರ್ಮಾಣ ಮಾಡಿದ್ದರು. ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜರುಗಳೇ ಇಲ್ಲದಿರುವಾಗ ರಾಜಭವನ ಎಂಬ ಹೆಸರಿನಿಂದ ಕರೆಯುವುದು ಸೂಕ್ತವಲ್ಲ. ಅದನ್ನ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕೊಟ್ಟು ಅದನ್ನ ಜನಭವನ ಎಂಬ ಹೆಸರಿನಿಂದ ಕರೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಅವರಿಂದ ನಿರ್ಮಾಣವಾಯ್ತು.ಜನರ ಪ್ರವೇಶಕ್ಕೆ ರಾಜಭವನ ಮುಕ್ತವಾಗಬೇಕು.ರಾಜಭವನ ಎಂದಾಕ್ಷಣ ಅದರಲ್ಲಿರುವವರು ರಾಜರಾಗಬೇಕೆಂದೇನಿಲ್ಲ.ಅಥವಾ ಅಂಥಾ ಮನಸ್ತಿತಿ ಇರಿಸಿಕೊಳ್ಳಬೇಕೆಂದೇನಿಲ್ಲ. ಅವರು ಜನಪರವಾಗಿರಬೇಕು.ರಾಜಭವನ ಜನಭವನವಾಗಬೇಕು ಎನ್ನುವ ಆಶಯ ಅವರದ್ದಾಗಿತ್ತು.
ರಮಾದೇವಿ ರಾಜ್ಯಪಾಲರಾಗಿದ್ದಾಗ ಸಾರ್ವಜನಿಕರು ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜಭವನ ನೋಡಲು ಬಂದಾಗ ರಮಾದೇವಿ ಅವರೇ ಕೆಲವೊಮ್ಮೆ ಖುದ್ದಾಗಿ ರಾಜಭವನ ಕಟ್ಟಡದ ಇತಿಹಾಸ ಹಾಗೂ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸುತ್ತಿದ್ದರು. ಅದಾದ ನಂತರ ಆ ಸಂಪ್ರದಾಯ ಮುಂದುವರೆಯಲಿಲ್ಲ. ಕಾರಣ ರಮಾದೇವಿ ನಂತರ ಬಂದ ರಾಜ್ಯಪಾಲರು ರಾಜಭವನಕ್ಕೆ ಸಾರ್ವಜನಿಕರಿಗಡ ಅವಕಾಶ ನೀಡಲಿಲ್ಲ ಅಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಜನಸಾಮಾನ್ಯರ ತೆರಿಗೆ ಹಣದಿಂದ ರಾಜಭವನ ನಿರ್ವಹಣೆ ಮಾಡಲಾಗುತ್ತಿದೆ. ಹೀಗಿರುವಾಗ ಸಾರ್ವಜನಿಕರಿಹೆ ರಾಜಭವನ ನೋಡಲು ಯಾಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿರುವ ಶಿವಕುಮಾರ್, ಇದೊಂದು ವಿಪರ್ಯಾಸ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆನೇ ತೆರಿಗೆ ಹಣದಿಂದ ನಿರ್ವಹಣೆ ಮಾಡುತ್ತಿರುವ 18 ನೇ ಶತಮಾನದ ಐತಿಹಾಸಿಕ ಪಾರಂಪಾರಿಕೆ ಕಟ್ಟಡವನ್ನ ವೀಕ್ಷಿಸಲು ಸರ್ಕಾರಕ್ಕೆ ಆದೇಶ ಮಾಡುವಂತೆಯೂ ಕೋರಿಕೊಂಡಿದ್ದಾರೆ.
ಒಂದು ವೇಳೆ ಸಾರ್ವಜನಿಕರು, ವಿದ್ಯಾರ್ಥಿಗಳು ರಾಜಭವನ ಪ್ರವೇಶದಿಂದ ರಾಜ್ಯಪಾಲರಿಗೆ ಕಿರಿಕಿರಿ ಆಗುತ್ತದೆ ಎಂದಾದರೆ ಬೆಂಗಳೂರಿನಲ್ಲಿ ಹಲವಾರು ಸರ್ಕಾರಿ ಬಂಗಲೆಗಳಿವೆ. ಅಲ್ಲಿ ಘನತೆವೆತ್ತ ರಾಜ್ಯಪಾಲರಿಗೆ ವಸತಿ ಹಾಗೂ ಕಚೇರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಕೋರಿಕೊಂಡಿದ್ದಾರೆ.
ಈ ಪತ್ರದ ಮೂಲಕನಾದರೂ ಸಾರ್ವಜನಿಕರ ವೀಕ್ಷಣೆಯಿಂದ ದೂರವಾಗಿದ್ದ ರಾಜಭವನ ಇನ್ಮುಂದೆಯಾದರೂ ಹತ್ತಿರವಾಗುತ್ತಾ ಕಾದುನೋಬೇಕು.
ಈ ಬೆಳವಣಿಗೆಯಿಂದ ರಾಜ್ಯಪಾಲರಿಗೇನಾದ್ರೂ ಕಿರಿಕಿರಿ ಉಂಟಾಗುತ್ತಿದೆ ಎನ್ನುವುದಾದ್ರೆ ಅವರನ್ನೇ ಅಲ್ಲಿಂದ ಸ್ಥಳಾಂತರ ಮಾಡಿ,ಬೆಂಗಳೂರಿನಲ್ಲಿರುವ ಯಾವುದಾದ್ರೂ ಸರ್ಕಾರಿ ಬಂಗಲೆಗೆ ಶಿಫ್ಟ್ ಮಾಡಿ ಅದನ್ನೇ ರಾಜಭವನವನ್ನಾಗಿ ಮಾಡುವಂತೆ ಸರ್ಕಾರಕ್ಕೆ ಅವಕಾಶವಿದ್ದರೆ ಆ ನಿಟ್ಟಿನಲ್ಲಿ ಪರಿಶೀಲಿಸಿ ಎಂದು ಸಲಹೆ ಕೂಡ ಶಿವಕುಮಾರ್ ನೀಡಿದ್ದಾರೆ.
ಚಾಮುಂಡಿ ಶಿವಕುಮಾರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರದ ಬಗ್ಗೆ ಅನೇಕ ಸಾಮಾಜಿಕ ಕಾರ್ಯಕರ್ತರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರೆನಿಸಿಕೊಂಡವರು ಎಲ್ಲರಿಂದ ದೂರವಾಗಿ ದ್ವೀಪದಂತೆ ಜೀವನ ನಡೆಸುವುದು ಎಷ್ಟು ಸರಿ..ಜನರ ನಡುವೆ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು.ಈ ನಿಟ್ಟಿನಲ್ಲಿ ಬದಲಾವಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.ಬಹುಷಃ ಈ ಪತ್ರದ ಮೂಲಕವಾದ್ರೂ ರಾಜಭವನ ಜನ ಭವನವಾಗಿ ಪರಿವರ್ತಿತವಾಗಲಿ ಎನ್ನುವುದು ಎಲ್ಲರ ಆರೈಕೆ ಕೂಡ.