ಬೆಂಗಳೂರು, (www.thenewzmirror.com) :
ಕಳೆದ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಲೀಕತ್ವದ ರಾಕ್ ಲೈನ್ ಮಾಲ್ ಗೆ ಬಿಬಿಎಂಪಿ ಸೀಝ್ ಮಾಡಿದ್ದಾರೆ.
ಬಿಬಿಎಂಪಿಯ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ರಾಕ್‌ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಇಂದು ಪಾಲಿಕೆ ಕಂದಾಯ ಅಧಿಕಾರಿಗಳು ಈಗ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಿದ್ದಾರೆ.
ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ತೆರಿಗೆ ಪಾವತಿ ಮಾಡುವಂತೆ ಹಲವು ಬಾರಿ ಡಿಮಾಂಡ್ ನೋಟೀಸ್ ಕೂಡ ನೀಡಲಾಗಿತ್ತು. ಹೀಗಿದ್ದರೂ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಇಂದು ಕ್ರಮ ಕೈಗೊಂಡಿದ್ದಾರೆ.
ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಅವರ ನೇತೃತ್ವದಲ್ಲಿ ಸೀಝ್ ಮಾಡಿದ್ದು ಬಾಕಿ ಇರುವ ಸಂಪೂರ್ಣ ಕಟ್ಟಿದ ಬಳಿಕವೇ ಮಾಲ್ ಓಪನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.