ಬೆಂಗಳೂರು, (www.thenewzmirror.com);
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಈಗಾಗಲೇ ಜೈಲು ಸೇರಿದ್ದಾರೆ. ಹುಲಿ ಉಗುರಿನ ಪೆಂಡೆಂಟ್ ಅನ್ನ ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದಕ್ಕೆ ಈ ಶಿಕ್ಷೆಗೆ ಅವರು ಗುರಿಯಾಗಿದ್ದಾರೆ. ಇದೀಗ ಸಂತೋಷ್ ಆಯ್ತು ಮುಂದಿನ ಸರದಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇರಬಹುದಾ ಅನ್ನೋ ಆತಂಕ ಶುರುವಾಗಿದೆ.
ವರ್ತೂರು ಸಂತೋಷ್ ರೀತಿ ಸ್ಟಾರ್ ನಟನಿಗೆ ಕಾದಿದ್ಯಾ ಸಂಕಷ್ಟ. ಎದುರಾಗಿದ್ಯಾ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ನಟ ದರ್ಶನ್ ಕೊಲ್ಲೂರು ಮುಕಾಂಬಿಕಾ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ಅವರ ಕೊರಳಲ್ಲಿ ಹುಲಿ ಗುರುಗಿನ ಪೆಂಡೆಂಟ್ ಇರುವ ಫೋಟೋ ವೊಂದು ವೈರಲ್ ಆಗಿತ್ತು. ಇದು ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ1972 ರ ಅಡಿಯಲ್ಲಿ ಇದು ಅಕ್ಷಮ್ಯ ಅಪರಾಧ. ಹೀಗಾಗಿ ನಟ ದರ್ಶನ್ ಅವರನ್ನ ವಿಚಾರಣೆ ನಡೆಸಿ ಅಂತ ಜನತಾ ಪಕ್ಷದ ಮುಖಂಡ ನಾಗೇಶ್ ಒತ್ತಾಯ ಮಾಡಿದ್ದಾರೆ. ಈ ಕುರಿತಂತೆ ಅರಣ್ಯ ಇಲಾಖೆಗೆ ದೂರು ನೀಡಲಿದ್ದು, ಒಂದು ವೇಳೆ ಅರಣ್ಯ ಇಲಾಖೆ ದೂರನ್ನ ಪುರಸ್ಕಾರ ಮಾಡಿದ್ದೇ ಆದರೆ ನಟ ದರ್ಶನ್ ಗೆ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರಿಂದ ಈಗಾಗಲೇ ಬಿಗ್ ಬಾಸ್ ಮನೆಯಿಂದಲೇ ಅರಣ್ಯಾಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಸದ್ಯ 14 ದಿನ ಜೈಲು ಸೇರಿ, ವಿಚಾರಣೆ ಎದುರಿಸುತ್ತಿದ್ದಾರೆ.