ಬೆಂಗಳೂರು/ಮೈಸೂರು, (www.thenewzmirror.com) ;
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. 414 ನೇ ನಾಡಹಬ್ಬ ದಸರಾ (Mysuru Dasara 2023) ಮೆರವಣಿಗೆ ಇಂದು ವೈಭವಯುತವಾಗಿ ನಡೆಯುತ್ತಿದೆ. ಇದಕ್ಕಾಗಿ ಇಡೀ ಮೈಸೂರು ಸಜ್ಜಾಗಿದ್ದು, ಇಡೀ ನಾಡಿನ ದೃಷ್ಟಿ ಇವತ್ತು ಮೈಸೂರಿನತ್ತ ನೆಟ್ಟಿದೆ.
1.46ರಿಂದ 2.08ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜದ ಪೂಜೆ ನೆರವೇರಿದ್ದು, ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು, ಕಲಾತಂಡಗಳ ಅದ್ದೂರಿ ಮೆರವಣಿಗೆ ಆರಂಭವಾಗಿದೆ.
ಸಂಜೆ 4.40ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮೀನ ಮಹೂರ್ತದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡಿ ಮೂರ್ತಿಯನ್ನು ಹೊತ್ತ ಅಭಿಮನ್ಯು ಆನೆ ರಾಜಬೀದಿಯಲ್ಲಿ ಸಾಗಲಿದೆ. ಕ್ಯಾಪ್ಟನ್ ಅಭಿಮನ್ಯುಗೆ 14 ಆನೆಗಳು ಸಾಥ್ ನೀಡಲಿವೆ. ಈ ಕ್ಷಣಕ್ಕೆ ಅಂದಾಜು 5 ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಲಿದ್ದಾರೆ.
ಈ ಬಾರಿ ಯಾವ ರೀತಿ ನಾಡ ಹಬ್ಬ ಇರಲಿದೆ ಎನ್ನುವ LIVE ಕವರೇಜ್