ರಾಜ್ಯದಲ್ಲಿ ಈವೆಂಟ್ ಮಾಡುವವರಿಗೊಂದು ಗುಡ್ ನ್ಯೂಸ್..!ಬೆಂಗಳೂರಿನಲ್ಲಿ ಶ್ರೇಯಸ್ ಮೀಡಿಯಾ ಶಾಖೆ ಶುಭಾರಂಭ.!

ಬೆಂಗಳೂರು, (www.thenewzmirror.com);

ದಕ್ಷಿಣ ಭಾರತದ ನಂಬರ್ 1 ಸಿನಿಮಾ ಪ್ರಚಾರ ಕಂಪನಿಯಾಗಿ ಹೊರಹೊಮ್ಮಿರುವ  ಶ್ರೇಯಸ್ ಮೀಡಿಯಾ ಭಾರತದಲ್ಲಿ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ.  ಈಗಾಗಲೇ ಹೈದ್ರಾಬಾದ್ ನಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಕೊಟ್ಟಿರುವ ಶ್ರೇಯಸ್ ಕಂಪನಿ, ಶ್ರೇಯಸ್ ಲೈವ್ ನಡಿ ಇದೀಗ ಬೆಂಗಳೂರಿನಲ್ಲಿಯೂ ಹೊಸ ವೆಂಚರ್ ಪ್ರಾರಂಭ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಶುಭಾರಂಭಗೊಂಡ ಶ್ರೇಯಸ್ ಮೀಡಿಯಾದ ಹೊಸ  ಶಾಖೆಯನ್ನ ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಉದ್ಘಾಟಿಸಿದರು. Biz-Bash ಸಹಯೋಗದೊಂದಿಗೆ ಶ್ರೇಯಸ್ ಕೆಲಸಕ್ಕೆ ಸಾಥ್ ಕೊಟ್ಟಿದೆ.

RELATED POSTS

ಈ ವೇಳೆ ಮಾತನಾಡಿದ ನಿರ್ದೇಶಕ ಮಾರುತಿ, ಕಳೆದ 20 ವರ್ಷಗಳಿಂದ ಶ್ರೇಯಸ್ ಹಾಗೂ ನಾನು ಗೆಳೆಯರು. ಬೆಂಗಳೂರಿನಲ್ಲಿಂದು ಶ್ರೇಯಸ್ ಲೈವ್ ಪ್ರಾರಂಭಿಸಿದ್ದಾರೆ. ಹೈದ್ರಾಬಾದ್ ನಲ್ಲಿ 2000 ಸಾವಿರಕ್ಕೂ ಹೆಚ್ಚು ಇವೆಂಟ್ ಗಳನ್ನು ನಡೆಸಿದ್ದಾರೆ. ಕನ್ನಡದಲ್ಲಿ ಈಗ ಸೇವೆ ಪ್ರಾರಂಭಿಸಿದ್ದು, ನಾನು ಶ್ರೇಯಸ್ ಲೈವ್ ಲಾಂಚ್ ಮಾಡಿರೋದು ಸಂತೋಷವಾಗಿದೆ. ಇಲ್ಲಿಯೂ ಶ್ರೇಯಸ್ ಮೀಡಿಯಾ ರಾಕ್ ಆಗ್ಲಿ ಎಂದು ಶುಭಾಷಯ ತಿಳಿಸಿದರು.

ಶ್ರೇಯಸ್ ಮೀಡಿಯಾದ ಸಂಸ್ಥಾಪಕ ಶ್ರೇಯಸ್ ಶ್ರೀನಿವಾಸ್, ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರೀಯಲ್ಲಿ 2000ಕ್ಕೂ ಹೆಚ್ಚು  ಇವೆಂಟ್ ಗಳನ್ನು ಶ್ರೇಯಸ್ ಮೀಡಿಯಾ ಯಶಸ್ವಿಯಾಗಿ ನಡೆಸಿದೆ. ಈಗ ಶ್ರೇಯಸ್ ಲೈವ್ ನಡಿ ಡಿಫರೆಂಟ್ ಇವೆಂಟ್ ನಡೆಸಲು ಪ್ಲಾನ್ ಹಾಕಿಕೊಂಡಿದ್ದೇವೆ. ಗ್ಲೋಬಲ್ ಸೌತ್ ಇಂಡಿಯನ್ ಮ್ಯೂಸಿಕ್ ಅವಾರ್ಡ್, ಏಷ್ಯಾನ್ ಬ್ಯುಸಿನೆಸ್ ಚಾಪಿಂಯನ್ ಅವಾರ್ಡ್, ಮ್ಯೂಸಿಕಲ್ ಕನ್ಸರ್ಟ್ ಹೀಗೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದ್ದೇವೆ.  ಪ್ರತಿ ವಾರ ಬೆಂಗಳೂರಿನಲ್ಲಿ ಇವೆಂಟ್ ಆಯೋಜಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಶ್ರೇಯಸ್ ಲೈವ್ ನ ಅನಾವರಣ ಕಾರ್ಯಕ್ರಮದಲ್ಲಿ ಶ್ರೇಯಸ್ ಗ್ರೂಪ್ ನ ಅಧ್ಯಕ್ಷ ಜಿ.ಶ್ರೀನಿವಾಸ್ ರಾವ್ ಮತ್ತು ಬಿಜ್-ಬಾಶ್ ಎಂಟರ್ ಟೈನ್ ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಕಳೆದ 13 ವರ್ಷಗಳಿಂದ ಸಿನಿಮಾ ಹಾಗೂ ಮಾಧ್ಯಮದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಶ್ರೇಯಸ್ ಮೀಡಿಯಾ 2100ಕ್ಕೂ ಹೆಚ್ಚು ಇವೆಂಟ್ ಗಳನ್ನು ಯಶಸ್ವಿಯಾಗಿ ನಡೆಸಿದೆ. 1200ಕ್ಕೂ ಹೆಚ್ಚು ಸಿನಿಮಾಗಳ ಪ್ರಚಾರದ ಜೊತೆಗೆ ಮಾರ್ಕೆಂಟಿಂಗ್ ವಿಭಾಗದಲ್ಲಿಯೂ ತನ್ನದೇ  ರೀತಿಯಲ್ಲಿ ಛಾಪೂ ಮೂಡಿಸಿದೆ.

ಕೆಜಿಎಫ್, ಪುಷ್ಪ, ಆದಿಪುರುಷ, ಆರ್ ಆರ್ ಆರ್ , ಸಾಹೋ ಸೇರಿದಂತೆ ಹಲವರು ದೊಡ್ಡ ದೊಡ್ಡ ಸಿನಿಮಾಗಳ ಇವೆಂಟ್ ಆಯೋಜಿಸಿ ಶ್ರೇಯಸ್ ಮೀಡಿಯಾ ಸಕ್ಸಸ್ ಕಂಡಿದೆ.  ಬ್ರ್ಯಾಂಡ್ ಪೊಸಿಷನಿಂಗ್, ಟೆಲಿವಿಷನ್, ಡಿಜಿಟಲ್ ಮೀಡಿಯಾ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಈ ಕಂಪನಿ ಪರಿಣತಿಯನ್ನು ಹೊಂದಿದೆ. ಇತ್ತೀಚೆಗೆ ಶ್ರೇಯಸ್ ಮೀಡಿಯಾ ಬಾಲಿವುಡ್ ಸಿನಿರಂಗ ಪ್ರವೇಶಿಸಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist