ಬೆಂಗಳೂರು, (www.thenewzmirror.com) ;
ಇದು ಬಿಎಂಟಿಸಿಯಲ್ಲಿ ನಡೆಯುತ್ತಿರುವ ಬಹುದೊಡ್ಡ ವಂಚನೆ.., ಹಣದಾಸೆಗೆ ಕೆಲ ಸಿಬ್ಬಂದಿ ಯಾವ ರೀತಿ ಸಂಸ್ಥೆಗೆ ದ್ರೋಹ ಮಾಡುತ್ತಿದ್ದಾರೆ. Kknews Kannada ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಿಬ್ಬಂದಿಯ ಹಣದಾಹ ಬಟಾಬಯಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ -37 ರ ಚಾಲಕ , ಮಂಜುನಾಥ ಬಾಬು ಎಂಬುವವರ ಬಲಭಾಗದ ಕಣ್ಣಿನ ದೃಷ್ಟಿ ದೋಷದಿಂದ ಅವರಿಗೆ ಮಾಮವೀಯ ಆಧಾರದ ಮೇಲೆ ಸಂಸ್ಥೆಯ ವತಿಯಿಂದ ಕೆಂಗೇರಿ ಬಸ್ ನಿಲ್ದಾಣದಲ್ಲಿ ಒಂದು ಕೆಲಸ ನೀಡಲಾಗುತ್ತೆ. ಅದು ನಿಗಮದ ಚಾಲನಾ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯದ ಬಗ್ಗೆ ಧೃಡಕಾಯವಾಗಿರುವುದರ ಬಗ್ಗೆ ಮೆಡಿಕಲ್ ಟಿಪ್ಸ್ ನೀಡುವ ಕೆಲಸ.
ಚಾಲಕರಾಗಿದ್ದ ಮಂಜುನಾಥ್ ಬಾಬು ಅವರಿಗೆ ಹೆಚ್ಚು ಕಷ್ಟವಲ್ಲದ ಕೆಲಸ ಮಾಡಲು ಒಂದು ಕಚೇರಿಯನ್ನೂ ಕೊಟ್ಟು ಕೆಂಗೇರಿ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿತ್ತು.
ಆದರೆ ಅನ್ನ ನೀಡುತ್ತಿರುವ ಸಂಸ್ಥೆಗೆ ಮೋಸ ಮಾಡುತ್ತಿರುವ ಈ ವ್ಯಕ್ತಿ ಅನುಮತಿ ಇಲ್ಲದಿದ್ದರೂ ಆಯುರ್ವೇದ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತಂತೆ ಸಾಕಷ್ಟು ದೂರು ಕೇಳಿ ಬಂದ ಹಿನ್ನಲೆಯಲ್ಲಿ kknews kannada ಚಾನಲ್ ಸ್ಟಿಂಗ್ ಆಪರೇಷನ್ ಮಾಡಲು ಮುಂದಾಯ್ತು.
ಸಂಸ್ಥೆಯಲ್ಲಿ ಕೆಲಸ ಮಾಡುವ ಚಾಲಕರೊಬ್ಬರನ್ನ ಇವರ ಬಳಿ ಕಳುಹಿಸಿ ಸಮಸ್ಯೆಗಳನ್ನ ಹೇಳಲಾಯ್ತು. ಈ ವೇಳೆ ಮಂಜುನಾಥ್ ಬಾಬು ಸಂಸ್ಥೆ ತನಗೆ ಕೊಟ್ಟ ಜವಾಬ್ದಾರಿ ಮರೆತೇ ಬಿಟ್ರು. ಅವರ ಮುಂದೆ ಸಂಸ್ಥೆಯ ಹಿತ ಕಾಣಲಿಲ್ಲ ಬದಲಾಗಿ ಹಣವೊಂದೇ ಕಣ್ಣಿಗೆ ಕಂಡಿತ್ತು. ಹೀಗಾಗಿ ತಾನೇ ಸ್ವತಃ ಆಯುರ್ವೇದಿಕ್ ಮೆಡಿಸಿನ್ ಸಿದ್ದಪಡಿಸ್ತೀನಿ 18000₹ ಆಗುತ್ತೆ ನೀನು ಅಷ್ಟು ಕೊಡುವುದು ಬೇಡ ಬದಲಾಗಿ 12000₹ ಕೊಡು ಅಂತ ಕೇಳಿಯೇಬಿಟ್ರು.
ಅಷ್ಟೇ ಅಲ್ದೆ ಲೈಂಗಿಕ ಸಮಸ್ಯೆ ಇದೆ ಎಂದು ಹೇಳಿದ್ದಕ್ಕೆ ಒಂದು ಗುಳಿಗೆ ಕೊಡ್ತೀನಿ ಸಮಸ್ಯೆ ಎಲ್ಲಾ ಮಾಯವಾಗುತ್ತೆ ಅದಕ್ಕಾಗಿ 1500₹ ರೂ ಕೊಡು ಅಂತ ಕೇಳಿಯೇ ಬಿಟ್ರು ಅಸಾಮಿ. ಅಷ್ಟೇ ಅಲ್ದೆ ಹಣ ಕೊಟ್ರೆ ಮಾತ್ರ ಟ್ರೀಟ್ ಮೆಂಟ್ ಮಾಡೋದು ಇಲ್ಲಾಂದ್ರೆ ಇಲ್ಲ ಅಂತ ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಯೇ ಬಿಡೋದೆ..?
ನಿಯಮದ ಪ್ರಕಾರ ಬರುವ ಚಾಲಕರಿಗೆ ಹೆಲ್ತ್ ಟಿಪ್ಸ್ ನೀಡುವ ಕೆಲಸ ಮಾಡಬೇಕು. ಆದರೆ ಮಂಜುನಾಥ್ ಸಂಸ್ಥೆಯ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಖಾಸಗಿಯಾಗಿ ಆಯುರ್ವೇದ ಚಿಕಿತ್ಸೆ ಕೊಡಿಸುತ್ತೇನೆ ಎಂದು ಚಾಲನಾ ಸಿಬ್ಬಂದಿಗಳಿಂದ ಹಣದ ರೂಪದಲ್ಲಿ ಲಂಚವನ್ನು ಪಡೆಯುತ್ತಿರೋದು ಎಷ್ಟು ಸರಿ.
ಹೀಗೆ ಸಂಸ್ಥೆಯ ನಿಯಮಗಳನ್ನ ಗಾಳಿಗೆ ತೂರಿ ಚಿಕಿತ್ಸೆ ನೀಡುತ್ತಿರುವುದು ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ವಾ ಅಂತ ಏನಿಲ್ಲ. ವಿಚಾರಗಳು ಗೊತ್ತಿದ್ದರೂ ಸುನ್ನಿರೋದು ನೋಡಿದರೆ ಅವರಿಗೂ ಇಂತಿಷ್ಟು ಮಾಮೂಲಿ ಹೋಗುತ್ತಿದೆಯಾ ಎನ್ನುವ ಸಂಶಯ ಮೂಡುತ್ತಿದೆ.
ಕಳೆದ ಹಲವು ತಿಂಗಳಿನಿಂದ ಈ ರೀತಿ ಅನಧಿಕೃತವಾಗಿ ಆಯುರ್ವೇದಿಕ್ ಚಿಕಿತ್ಸೆ ನೀಡಿ ಸಾವಿರಗಟ್ಟಲೇ ಹಣ ವಸೂಲಿ ಮಾಡುತ್ತಿದ್ದರೂ ಸಂಸ್ಥೆಯ ಯಾವೊಬ್ಬ ಅಧಿಕಾರಿಯೂ ಇವರ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳದೆ ಇರುವುದು ದುರಾದೃಷ್ಟಕರ ಸಂಗತಿ.
ಈ ವಿಡಿಯೋ ನೋಡಿಯಾದರೂ ಸಂಸ್ಥೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.