ಬ್ರಿಡ್ಜ್ ಟೌನ್ , (www.thenewzmirror.com ) ;
ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ
ಬಹು ನಿರೀಕ್ಷಿತ ಟಿ20 ವಿಶ್ವಕಪ್ ಅನ್ನ ಭಾರತ ಮುಡಿಗೇರಿಸಿಕೊಂಡಿದೆ. ಬ್ರಿಡ್ಜ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್ ಗಳ ಜಯಗಳಿಸುವ ಮೂಲಕ ವಿಶ್ವಕಪ್ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿದೆ. ಆ ಮೂಲಕ 13 ವರ್ಷಗಳ ಬಳಿಕ ಟ್ರೋಫಿಯನ್ನ ಎತ್ತಿ ಹಿಡಿದಂತಾಗಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು ಸೋಲು ಕಂಡಿದೆ.
ದಕ್ಷಿಣ ಆಫ್ರಿಕಾ ಪರ ಹೆಂಡ್ರಿಕ್ಸ್ 4 ರನ್ ಗಳಿಸಿ ಔಟಾದರೆ ಮಾರ್ಕ್ರಾಮ್ ಸಹ 4 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಬ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 31 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇನ್ನು ಡಿಕಾಕ್ 39 ರನ್ ಗಳಿಸಿದ್ದಾಗ ಅರ್ಷ ದೀಪ್ ಔಟ್ ಮಾಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ಲಾಸೆನ್ 52 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು. ಆದರೆ ಪಂದ್ಯ ಸೋತಿದೆ.
ಮೊದಲ ಓವರ್ ನಲ್ಲಿ 15 ರನ್ ಗಳ ಭರ್ಜರಿ ಆರಂಭ ಪಡೆದರೂ ಭಾರತಕ್ಕೆ ಎರಡನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಆಘಾತ ನೀಡಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಾರಾಜ್ ಒಂದೇ ಓವರ್ ನಲ್ಲಿ 9 ರನ್ ಗಳಿಸಿದ್ದ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ತಾಳ್ಮೆಯ ಆಟವಾಡಿದ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 106 ರನ್ ಗಳ ಜೊತೆಯಾಟ ನೀಡಿದರು.
47 ರನ್ ಗಳಿಸಿದ್ದ ಅಕ್ಷರ್ ಪಟೇಲ್ ರನ್ ಔಟ್ ಗೆ ಬಲಿಯಾದರು. ನಂತರ ಬಂದ ಶಿವಂ ದುಬೆ 27 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ನಾರ್ಟ್ಜೆ ತಲಾ 2 ವಿಕೆಟ್ ಪಡೆದಿದ್ದಾರೆ.
ಭಾರತ ಕ್ರಿಕೆಟ್ ತಂಡ ನೀಡಿದ್ದ 177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಟೀಂ ಇಂಡಿಯಾದ ಬೌಲರ್ ಜಸ್ಪ್ರಿತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಗೆ ಕೇವಲ 4 ರನ್‌ಗಳಿಗೆ ಫೆವಿಲಿಯನ್ ಹಾದಿ ತೋರಿಸಿದ್ರು. ನಂತರ ಒಂದನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕ ಐಡೆನ್ ಮಾಕರಮ್ ಆಟ ಕೂಡ ಹೆಚ್ಚು ಹೊತ್ತು ನಡೆಯಲೇ ಇಲ್ಲ.
5 ಎಸೆತಗಳಲ್ಲಿ 4 ರನ್ ಗಳಿಸಿ ಆಡುತ್ತಿದ್ದ ಮಾಕ್ರಮ್ ಅವರನ್ನು ಅರ್ಶದೀಪ್ ಸಿಂಗ್ ಬಲಿ ಪಡೆದ್ರು. ನಂತರ ಕ್ವಿಂಟಾನ್ ಡಿಕಾಕ್ ಹಾಗೂ ಸ್ತುಬ್ ದಕ್ಷಿಣ ಆಫ್ರಿಕಾ ತಂಡಕ್ಕೆ ನೆರವಾದ್ರು. ಈ ಜೋಡಿ ಮೂರನೇ ವಿಕೆಟ್‌ಗೆ 58 ರನ್ ಜೊತೆಯಾಟ ಆಡಿತ್ತು. ಆದರೆ 31೩೧ ರನ್ ಗಳಿಸಿ ಆಡುತ್ತಿದ್ದ ಸ್ತುಬ್ ಅವರನ್ನು ಅಕ್ಷರ್ ಪಟೇಲ್ ಬೌಲ್ಡ್ ಮಾಡಿದ್ರು.
ಸಾಲು ಸಾಲು ವಿಕೆಟ್ ಉರುಳುತ್ತಿದ್ದರೂ ಕೂಡ ಕ್ವಿಂಟಾನ್ ಡಿಕಾಕ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದರು, ೩೧ ಎಸೆತಗಳಲ್ಲಿ ೩೯ ರನ್‌ಗಳಿಸಿ ಆಡುತ್ತಿದ್ದಾಗ ಅರ್ಶದೀಪ್ ಸಿಂಗ್ ಅವರ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ರು. ಹೆನ್ರಿಚ್ ಕ್ಲಸೇನ್ ಹಾಗೂ ಡೇವಿಡ್ ಮಿಲ್ಲರ್ ಒಂದಿಷ್ಟು ಹೊತ್ತು ವಿಕೆಟ್‌ಗೆ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಯತ್ನಿಸಿದ್ರು.
ಆದರೆ ಭಾರತೀಯ ಬೌಲರ್‌ಗಳು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಭರ್ಜರಿ ಆದರ್ಶ ಶತಕ ಸಿಡಿಸಿದ್ದ ಕ್ಲಸೇನ್ ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ಔಟಾದ್ರು, ನಂತರ ಬಂದ ಜಾನ್‌ಸೇನ್ ಅವರನ್ನು ಬೂಮ್ರಾ ಔಟ್ ಮಾಡಿದ್ರು. ಡೇವಿಡ್ ಮಿಲ್ಲರ್ ಅಂತಿಮ ಹಂತದ ವರೆಗೂ ತಂಡವನ್ನು ಗೆಲ್ಲಿಸಲು ಶ್ರಮಿಸಿದ್ರೂ ಕೂಡ ಭಾರತೀಯ ಬೌಲರ್‌ಗಳ ಮುಂದೆ ಯಾವುದೇ ಆಟ ನಡೆಯಲಿಲ್ಲ.
ಅಂತಿಮ ಓವರ್‌ನಲ್ಲಿ ದಾಳಿಗೆ ಇಳಿದ ಹಾರ್ದಿಕ್ ಪಾಂಡ್ಯ ಡೇವಿಡ್ ಮಿಲ್ಲರ್ ಅವರನ್ನು ಬಲಿ ಪಡೆದ್ರು, ಆದರೆ ಕ್ರೀಸ್‌ಗೆ ಬಂದ ರಬಾಡ ಮೊದಲ ಎಸೆತದಲ್ಲಿಯೇ ಬೌಂಡರಿ ಸಿಡಿಸಿದ್ರು. ಆದರೆ ಮಾರಕ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಿಶ್ವಕಪ್ ಗೆಲುವು ತಂದು ಕೊಟ್ರು. ಈ ಮೂಲಕ ವಿಶ್ವಕಪ್ ಜಯಿಸಿದ ನಾಯಕ ಅನ್ನೋ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಭಾರತ ತಂಡ : ವಿರಾಟ್ ಕೊಹ್ಲಿ (76), ಅಕ್ಷರ್ ಪಟೇಲ್ (47), ಶಿವಂ ದುಬೆ (27 ), ರೋಹಿತ್ ಶರ್ಮಾ (9) , ಹಾರ್ದಿಕ್ ಪಾಂಡ್ಯ (6), ನಿಟ್ರೋಜೆ 26/2, ಕೇಶವ್ ಮಹಾರಾಜ 23/2, ರಬಾಡಾ 36/1, ಜಾನ್‌ಸೇನ್ 49/1
ದಕ್ಷಿಣ ಆಫ್ರಿಕಾ ತಂಡ : ಹೆನ್ರಿಚ್ ಕ್ಲಸೇನ್ ( 52 ), ಕ್ವಿಂಟಾನ್ ಡಿಕಾಕ್ (39 ), ಟಿ ಸ್ತುಬ್ (31 ), ಡೇವಿಡ್ ಮಿಲ್ಲರ್ (21 ) ಹಾರ್ದಿಕ್ ಪಾಂಡ್ಯ 19/3 ಅರ್ಶದೀಪ್ ಸಿಂಗ್ 20/2, ಜಸ್ಪ್ರಿತ್ ಬೂಮ್ರಾ 18/2, , ಅಕ್ಷರ್ ಪಟೇಲ್ 49/1