ಬೆಂಗಳೂರು, (www.thenewzmirror.com) ;
ರಾಜ್ಯದ ಮಹಿಳೆಯರಿಗೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀಯ ಕಂತು ಪಾವತಿಯಾಗಿಲ್ಲ. ಅದರಲ್ಲೂ ಲೋಕಸಮರ ಮುಗಿಯುತ್ತಿದ್ದಂತೆ ಯೋಜನೆ ಸ್ಥಗಿತಗೊಳ್ಳುತ್ತಾ ಎನ್ನುವ ಅನುಮಾನಗಳ ನಡುವೆ ಆಗುತ್ತಿರೋ ಈ ಬೆಳವಣಿಗೆ ಇದಕ್ಕೆ ಇಂಬು ನೀಡುತ್ತಿದೆ.
ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಐದು ವರ್ಷ ನಾವು ಕೊಟ್ಟ 5 ಗ್ಯಾರಂಟಿಗಳನ್ನ ಮುಂದುವರೆಸುತ್ತೀವಿ ಅಂತ ಹೇಳಿತ್ತು. ಆದರೆ ಕಳೆದ 2 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಯ ಮಹಿಳೆಯರಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಇವತ್ತು ಹಣ ಬರುತ್ತೆ ನಾಳೆ ಹಣ ಬರುತ್ತೆ ಅಂತ ಜಾತಕ ಪಕ್ಷಿಯಂತೆ ಮಹಿಳೆಯರು ಕಾದಿದ್ದೇ ಬಂತು ಬಿಟ್ಟರೆ ಹಣ ಮಾತ್ರ ಬಂದಿಲ್ಲ ಅಂತ ಮಹಿಳೆಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಗೃಹಲಕ್ಷ್ಮಿ ಹಣ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದೆವು, 2 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರುತ್ತಿಲ್ಲ, ಹಣ ಬರದೇ ಸಾಕಷ್ಟು ತೊಂದರೆಯಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ, ಗ್ಯಾರಂಟಿ ಯೋಜನೆಯಿಂದ ದಿನನಿತ್ಯ ವಸ್ತುಗಳ ಎಲ್ಲಾ ಬೆಲೆ ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.