ಬೆಂಗಳೂರು, (www.thenewzmirror.com) ;
ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ TATA ಮೋಟಾರ್ಸ್ (Tata Motors) ತನ್ನ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಭಾರೀ ರಿಯಾಯಿತಿ ನೀಡಿದೆ. ಫೆಸ್ಟಿವಲ್ ಆಫ್ ಕಾರ್ಸ್ ಅಭಿಯಾನದ ಅಂಗವಾಗಿ TATA ತನ್ನ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ 3 ಲಕ್ಷದವರೆಗೆ ಇಳಿಕೆ ಮಾಡಿದೆ. ಮುಂದಿನ ತಿಂಗಳು ಅಂತ್ಯದವರೆಗೂ ಈ ದರ ಇರಲಿದೆ ಅಂತ TATA ತಿಳಿಸಿದೆ.
ಎಲೆಕ್ಟ್ರಿಕ್ ಕಾರುಗಳ ವಿಚಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ TATA ಕಂಪನಿ ಇದೀಗ ತನ್ನ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ರಿಯಾಯಿತಿ ನೀಡಿದ್ದು, ಇತರ ಕಾರು ತಯಾರಿಕಾ ಕಂಪನಿಗಳಿಗೆ ಠಕ್ಕರ್ ಕೊಟ್ಟಿದೆ. ಟಾಟಾ ಕಂಪನಿ ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ ಅಂತ ತಿಳಿಸಿದೆ.
ಯಾವ್ಯಾವ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ದರ ಕಡಿತ…?
TATA ಪಂಚ್ ಇವಿ
TATA ಪಂಚ್ ಇವಿಯಲ್ಲಿ 1.20 ಲಕ್ಷದ ವರೆಗೂ ಕಡಿತ ಮಾಡಲಾಗಿದೆ. ಬೆಲೆ ಕಡಿತ ನಂತರ ಪಂಚ್ ಇವಿ ಕಾರಿನ ಬೆಲೆ 9,99,000 – 14,28,999 ರೂಪಾಯಿಗೆ ಸಿಗಲಿದೆ.
TATA ಟಿಯಾಗೋ ಇವಿ
TATA ಟಿಯಾಗೋ ಇವಿ ವಾಹನದ ಮೇಲೆ 80 ಸಾವಿರದ ವರೆಗೂ ಕಡಿತ ಮಾಡಿದ್ದು, ಬೆಲೆ ಕಡಿತದ ನಂತರ 7,99,000 – 11,49,000 ರೂಪಾಯಿಗೆ ಸಿಗಲಿದೆ.
TATA ನೆಕ್ಸಾನ್ ಇವಿ
TATA ನೆಕ್ಸಾನ್ ಇವಿ ಕಾರಿನ ಬೆಲೆಯಲ್ಲಿ ಮೂರು ಲಕ್ಷದ ವರೆಗೂ ಕಡಿತಮಾಡಲಾಗಿದೆ. ಬೆಲೆ ಕಡಿತದ ನಂತರ TATA ನೆಕ್ಸಾನ್ ಇವಿ 12,49,900 – 16,99,900 ರೂಪಾಯಿಗೆ ಸಿಗಲಿದೆ.
ಉಚಿತ ಪವರ್ ಚಾರ್ಜಿಂಗ್
TATA ತನ್ನ ಇವಿ ಕಾರಿಗಳ ಬೆಲೆಯಲ್ಲಿ ಭಾರೀ ಕಡಿತ ಮಾಡಿದ ನಂತರ ದೇಶಾದ್ಯಂತ 5,500 ಟಾಟಾ ಪವರ್ ಚಾರ್ಜಿಂಗ್ ಪಾಯಿಂಟ್ ಗಳಲ್ಲಿ 6 ತಿಂಗಳು ಉಚಿತ ಚಾರ್ಜಿಂಗ್ ಸೌಲಭ್ಯವನ್ನೂ ನೀಡಿದೆ. ಈ ಕೊಡುಗೆಯೂ ಅಕ್ಟೋಬರ್ 31 ವರೆಗೂ ಇರಲಿದೆ ಅಂತ ಕಂಪನಿ ತಿಳಿಸಿದೆ.