ಬೆಂಗಳೂರು, (www.thenewzmirror.com) ;
ಮೂಡ ಹಗರಣದಲ್ಲಿ ಈಗಾಗಲೇ ಆತಂಕಕ್ಕೆ ಒಳಗಾಗಿರುವ ಸಿಎಂ ಸಿದ್ದರಾಮಯ್ಯ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಬಿಎಂಪಿ ಗೆ ಉದ್ದೇಶಪೂರ್ವಕವಾಗಿ 68 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ವಂಚಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ವಿರುದ್ಧ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್ ದಾಖಲು ಮಾಡಿದ್ದಾರೆ.
2013-2018 ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ಧರಾಮಯ್ಯ ಅವರ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಪಾಲಿಕೆ ಒಡೆತನದ 493 ಬಸ್ ತಂಗುದಾಣ (Bus Shelter) ಗಳನ್ನು ಬಳಸಿಕೊಂಡಿದ್ದರು. ಇದರ ತೆರಿಗೆ ₹ 68,14,90,236 ಪಾವತಿಸದೆ ವಂಚಿಸಿದ್ದಾರೆ ಅಂತ ದೂರು ದಾಖಲಾಗಿದೆ.
2015-2017 ರ ಎರಡು ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ಯ 493 ಬಸ್ ಶೆಲ್ಟರ್ ಗಳನ್ನು ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, ನಯಾಪೈಸೆಯಷ್ಟೂ ಜಾಹಿರಾತು ಶುಲ್ಕ ಪಾವತಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ACB ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳ ಸಹಿತ ದೂರನ್ನ ಈ ಹಿಂದೆ ಎನ್. ರಮೇಶ್ ನೀಡಿದ್ದರು.
ಬಿಬಿಎಂಪಿ ವಾರ್ಷಿಕ 10 ಸಾವಿರ ಕೋಟಿಯಷ್ಟು ಹಣವನ್ನ ಅಧಿಕಾರಿ / ನೌಕರರ ವೇತನಗಕ್ಕೆ, ಉದ್ಯಾನವನಗಳು / ಬೀದಿ ದೀಪಗಳು / ಹದಗೆಟ್ಟ ರಸ್ತೆಗಳ ದುರಸ್ತಿ ನಿರ್ವಹಣೆ ಕಾರ್ಯಗಳಿಗೆಂದು ವೆಚ್ಚ ಮಾಡುತ್ತಿದೆ. ಇಂಥ ಸಂಧರ್ಭದಲ್ಲಿ 68 ಕೋಟಿ ಪಾವತಿಸದೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಆರ್ ರಮೇಶ್ ACB, ಲೋಕಾಯುಕ್ತದಲ್ಲಿ ದೂರುಗಳು ದಾಖಲು ಮಾಡುತಿದ್ದಂತೆ 2017 ರ ಜುಲೈ ನಲ್ಲಿ ಬಿಬಿಎಂಪಿ ಯ ಅಂದಿನ ವಿಶೇಷ ಆಯುಕ್ತರು (ಹಣಕಾಸು) ₹ 12,98,45,470 ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ Demand Notice ಅನ್ನು ನೀಡಿದ್ದರು.
ಹೀಗಿದ್ದರೂಸಿದ್ದರಾಮಯ್ಯ ಸರ್ಕಾರ ಈ Demand Notice ಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿರಲಿಲ್ಲ ಎಂದು ಆರೋಪಿಸಿರೋ ರಮೇಶ್, ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ, ಸಿದ್ದರಾಮಯ್ಯರ ಪ್ರಭಾವ ಮತ್ತು ಒತ್ತಡಗಳಿಗೆ ಒಳಗಾಗಿ ಲೋಕಾಯುಕ್ತ ಪೋಲೀಸರು ಸಿದ್ದರಾಮಯ್ಯ ಸರ್ಕಾರವು ಬಿಬಿಎಂಪಿ ಗೆ ₹ 68,14,90,236 ಗಳಷ್ಟು ಜಾಹಿರಾತು ಶುಲ್ಕವನ್ನು ವಂಚಿಸಿದ್ದ ಹಗರಣಕ್ಕೆ ಸಂಬಂಧಿಸಿದಂತೆ ನನೀಡಿದ್ದ ದೂರನ್ನು ಯಾವುದೇ ಸೂಚನೆ ಇಲ್ಲದೆಯೇ 2024 ರ ಜುಲೈ 26 ರಂದು ಮುಕ್ತಾಯಗೊಳಿಸಿದ್ರು ಅಂತ ರಮೇಶ್ ದೂರಿದ್ದಾರೆ.
ಈ ಮಹಾ ವಂಚನೆಯ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಸಹಿತವಾಗಿ ದೂರನ್ನು ನೀಡಿದ್ದರೂ ಕೂಡ ಪಕ್ಷಪಾತ ಧೋರಣೆಯಿಂದ ಮತ್ತು ಸಿದ್ದರಾಮಯ್ಯ ನವರ ಒತ್ತಡಕ್ಕೆ ಒಳಗಾಗಿ ಸದರಿ ಪ್ರಕರಣವನ್ನು ಮುಕ್ತಾಯಗೊಳಿಸಿರುವ ಲೋಕಾಯುಕ್ತ ಪೋಲೀಸರ ನಡೆಯನ್ನು ವಿರೋಧಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಲ್ಲಿ ಖಾಸಗಿ ದೂರನ್ನ ರಮೇಶ್ ದಾಖಲು ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, 2015 ರಿಂದ 2017 ರ ಅವಧಿಯಲ್ಲಿ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ M.ಲಕ್ಷ್ಮಿನಾರಾಯಣ್, ಮತ್ತು ಮಣಿವಣ್ಣನ್ ಅವರುಗಳ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ PCR ದಾಖಲಿಸಲಾಗಿದೆ. ಆ ಮೂಲಕ ಸಿದ್ದರಾಮಯ್ಯಗೆ ಮೂಡ ಸಂಕಷ್ಟ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.