ಬೆಂಗಳೂರು, (www.thenewzmirror.com) ;
ಆರೋಗ್ಯ ತಪಾಸಣೆ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ‘ಸ್ಮಾರ್ಟ ಕ್ಲಿನಿಕ್’ ಗೆ ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಚಾಲನೆ ನೀಡಲಾಯಿತು.
ಬಿಬಿಎಂಪಿ ಮಾಜಿ ಮೇಯರ್ ಬಿ ಎಸ್ ಸತ್ಯನಾರಾಯಣ(ಕಟ್ಟೆ ಸತ್ಯ) ನೂತನ ಸ್ಮಾರ್ಟ್ ಕ್ಲಿನಿಕ್ ಉದ್ಘಾಟಿಸಿದರು.
ಸುಮಾರು ಅರವತ್ತು ಖಾಯಿಲೆಗಳನ್ನು ತಪಾಸಣೆ ಮಾಡುವ ಹಾಗೂ ವೈದ್ಯರ ಸಲಹೆ ನೀಡುವ ಸ್ಮಾರ್ಟ್ ಕ್ಲಿನಿಕ್ ಬಗ್ಗೆ ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು. ಕಡಿಮೆ ಸಮಯ ಮತ್ತು ಖರ್ಚಿನಲ್ಲಿ, ‘ರೆಸ್ಟೋ ಜನ್ ಲೈಫ್’ ಸ್ಮಾರ್ಟ್ ಕ್ಲಿನಿಕ್ ನಲ್ಲಿ ನಿಖರವಾಗಿ ಖಾಯಿಲೆಗಳನ್ನು ತಪಾಸಣೆ ಮಾಡಿಸಿಕೊಳ್ಳಬಹುದಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ಎರಡನೇ ಅಭಿಪ್ರಾಯ ತಿಳಿಯಲು ಇದು ಸಹಕಾರಿ ಆಗಿದೆ ಎಂದು ಸತ್ಯನಾರಾಯಣ ಹೇಳಿದರು.
ರೆಸ್ಟೋ ಹೆಲ್ತ್ ಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಕಟ್ಕೆ ಮಾತನಾಡಿ, ಮುಂದಿನ ಒಂದುವರೆ ವರ್ಷದಲ್ಲಿ ಹದಿನೆಂಟು ಸ್ಮಾರ್ಟ್ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆಯ ಮಾಜಿ ಸದಸ್ಯ ಎನ್ ಆರ್ ರಮೇಶ್, ಮಾಜಿ ಪಾಲಿಕೆ ಸದಸ್ಯ ಎನ್ ಆರ್ ರಮೇಶ್, ಸಹಾಯಕ ಔಷಧಿ ನಿಯಂತ್ರಣ ಅಧಿಕಾರಿಗಳಾದ ಎ ಎಂ ಸ್ಯಾನೋಫರ್, ಸಿ ಮಂಜುಳಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.