ಬೆಂಗಳೂರು, (www.thenewzmirror.com) :
ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರ ಹೊಸ ಕಾರು ಅಫಘಾತವಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಾರ್ಚ್ 13 ರ ಸಂಜೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಕುಣಿಗಲ್ ನಿಂದ ಕುರುಡಿಹಳ್ಳಿಗೆ ಸಾಗುತ್ತಿದ್ದ ಸಂತೋಷ್ ಕಾರು ಅದೇ ಮಾರ್ಗದಲ್ಲಿ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಕಾರಿನ ಭಾಗ ಡಿಕ್ಕಿ ಆಗಿದ್ದರಿಂದ ಆಟೋ ಸಂಪೂರ್ಣ ನುಚ್ಚುಗುಜ್ಜಾಗಿತ್ತು. ಘಟನೆಯಲ್ಲಿ ಆಟೋ ಚಾಲಕ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಅವ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಇತ್ತೀಚೆಗೆ ಹೊಸ ಕಾರನ್ನ ಖರೀದಿ ಮಾಡಿದ್ದರು. ಅಷ್ಟೇ ಅಲ್ದೇ ಸಾಮಾಜಿಕ ಜಾಲತಾಣದಲ್ಲಿ ಆ ವೀಡಿಯೋವನ್ನೂ ಪೋಸ್ಟ್ ಮಾಡಿದ್ದರು. ಇದೀಗ ಅದೇ ಕಾರು ಅಫಘಾತವಾಗಿದ್ದು, ಓರ್ವನ ಸಾವಿಗೆ ಕಾರಣವಾಗಿದೆ.
ತುಮಕೂರಿನಲ್ಲಿ ಶೂಟಿಂಗ್ ಮುಗಿಸಿ ಮಂಡ್ಯಕ್ಕೆ ತೆರಳೋ ವೇಳೆ ಅಪಘಾತ ನಡೆದಿತ್ತು. ರಾತ್ರಿ ಏಳು ಗಂಟೆ ವೇಳೆಯಲ್ಲಿ ಆಗಿರುವ ಅಪಘಾತ ನಡೆದಿತ್ತು. ಆಟೋ ಡ್ರೈವರ್ ಏಕಾಏಕಿ ನಮ್ಮ ಕಾರಿಗೆ ಬಂದು ಡಿಕ್ಕಿ ಹೊಡೆದ್ದಾರೆ ಎಂದು ಸಂತೋಷ್ ಹೇಳಿಕೆ ಕೊಟ್ಟಿದ್ದರು. ಇದೀಗ ಆಟೋ ಚಾಲಕನ ಸಾವಾಗಿದ್ದು, ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.