ಬೆಂಗಳೂರು, (www.thenewzmirror.com);
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರೀಸ್ ಒಲಂಪಿಕ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡು ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಶನಿವಾರ ಭಾರತಕ್ಕೆ ಆಗಮಿಸಿದ್ದರು. ನವದೆಹಲಿಗೆ ಬಂದಿಳಿದಿದ್ದ ವಿನೇಶ್ಗೆ ಭರ್ಜರಿ ಸ್ವಾಗತವನ್ನುಇ ಕೋರಲಾಗಿತ್ತು. ಈ ವೇಳೆ ವಿನೇಶ್ ಪೋಗಟ್ ನ ಅಭಿಮಾನಿಗಳು ಹಾಗೆನೇ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ರೈತನಾಯಕರು, ಬಜರಂಗ್ ಪೂನಿಯ, ಸಾಕ್ಷಿ ಮಲಿಕ್ ಸೇರಿ ಸಾವಿರಾರು ಮಂದಿ ಅದ್ಧೂರಿ ಸ್ವಾಗತಕೋರಿದ್ರು.
ವಿಮಾನ ನಿಲ್ದಾಣದಿಂದ ವಿನೇಶ್ ತವರಾದ ಹರಿಯಾಣ ಬಲಾಲಿಗೆ ಕಾರ್ನಲ್ಲಿ ಮೆರವಣಿ ಮಾಡುವ ಮೂಲಕ ಕರೆದೊಯ್ಯಲಾಗಿತ್ತು. ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ವೇದಿಕೆ ಮೇಲೆನೇ ಪ್ರಜ್ಞೆ ತಪ್ಪಿದ ವೀಡಿಯೋ ಇದೀಗ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ವಿನೇಶ್ ಏಕಾಏಕಿ ಮೂರ್ಛೆ ಹೋಗಿ ತಾವು ಕುಳಿತಿದ್ದ ಕುರ್ಚಿಗೆ ಒರಗಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪಕ್ಕದಲ್ಲೇ ಇದ್ದ ಭಜರಂಗ್ ಪೂನಿಯಾ ವಿನೇಶ್ಗೆ ನೀರು ಕೊಟ್ಟು ಉಪಚರಿಸಿದ್ದಾರೆ.
ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.