ಸುಳ್ಳು ಸುದ್ದಿ ನಂಬಬೇಡಿ, ನಾನು ಆರೋಗ್ಯವಾಗಿದ್ದೇನೆ: ವದಂತಿಗಳಿಗೆ ಬ್ರೇಕ್ ಹಾಕಿದ ನಟ ದೊಡ್ಡಣ್ಣ

ಬೆಂಗಳೂರು(www.thenewzmirror.com): “ದೇವರ ದಯೆ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ನೂರು ವರ್ಷ ಚೆನ್ನಾಗಿರುತ್ತೇನೆ. ದಯವಿಟ್ಟು ನನ್ನ ಸಾವಿನ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ” ಎಂದು ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಕಿಡಿಗೇಡಿಗಳಿಗೆ ಕೈಮುಗಿದು ವಿನಂತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ನಿಧನದ ವದಂತಿಗಳಿಗೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

RELATED POSTS

ಲೈಕ್ಸ್ ಮತ್ತು ವ್ಯೂಸ್‌ಗಳಿಗಾಗಿ ಜೀವಂತವಿರುವ ವ್ಯಕ್ತಿಗಳ ಬಗ್ಗೆ ಇಂತಹ ಅಪಪ್ರಚಾರ ಮಾಡುವುದು ಅತಿ ದೊಡ್ಡ ವಿಕೃತಿ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಆತಂಕ ಮೂಡಿಸಿದ ಎಡಿಟೆಡ್ ಪೋಸ್ಟರ್‌ಗಳು:

ಸಾಮಾಜಿಕ ಜಾಲತಾಣಗಳ ಕೆಲವು ಪೇಜ್‌ಗಳಲ್ಲಿ ದೊಡ್ಡಣ್ಣ ಅವರ ನಿಧನದ ಸುಳ್ಳು ಪೋಸ್ಟರ್‌ಗಳು ವೈರಲ್ ಆಗಿದ್ದವು. ಇದನ್ನು ನಿಜವೆಂದು ನಂಬಿದ ಚಿತ್ರರಂಗದ ಗಣ್ಯರು, ಆಪ್ತರು ಮತ್ತು ಸಾವಿರಾರು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಬೆಳಗ್ಗಿನಿಂದಲೇ ದೊಡ್ಡಣ್ಣ ಅವರ ಮೊಬೈಲ್‌ಗೆ ನಿರಂತರವಾಗಿ ಫೋನ್ ಕರೆಗಳ ಮಹಾಪೂರವೇ ಹರಿದುಬಂದಿತ್ತು.

ಮನೆಯಲ್ಲೇ ಆರಾಮಾಗಿದ್ದೇನೆ:

ಈ ಗೊಂದಲಕ್ಕೆ ತೆರೆ ಎಳೆದ ನಟ ದೊಡ್ಡಣ್ಣ, “ನಾನು ಮನೆಯಲ್ಲಿ ನೆಮ್ಮದಿಯಾಗಿ ಟಿವಿ ನೋಡುತ್ತಾ ಕಾಫಿ ಕುಡಿಯುತ್ತಿದ್ದೇನೆ. ಆದರೆ ಬೆಳಗ್ಗೆ ಎದ್ದ ತಕ್ಷಣ ನನ್ನ ಸಾವಿನ ಪೋಸ್ಟರ್ ನೋಡಿ ನನಗೇ ಆಘಾತವಾಯಿತು. ಮುಖ ತೊಳೆಯಲೂ ಪುರುಸೊತ್ತಿಲ್ಲದಂತೆ ಫೋನ್ ಕರೆಗಳು ಬರುತ್ತಿವೆ. ದಯವಿಟ್ಟು ಇಂತಹ ಕಿಡಿಗೇಡಿ ಕೃತ್ಯಗಳನ್ನು ಯಾರೂ ನಂಬಬೇಡಿ ಮತ್ತು ಬೇರೆಯವರಿಗೂ ಶೇರ್ ಮಾಡಬೇಡಿ” ಎಂದು ಕಳಕಳಿಯಿಂದ ಕೇಳಿಕೊಂಡಿದ್ದಾರೆ.

ಸೈಬರ್ ಪೊಲೀಸ್ ಕ್ರಮಕ್ಕೆ ಆಗ್ರಹ:

ಕನ್ನಡ ಚಿತ್ರರಂಗದ ಹಿರಿಯ ನಟರೊಬ್ಬರ ಬಗ್ಗೆ ಈ ರೀತಿ ಪದೇ ಪದೇ ಸಾವಿನ ಸುಳ್ಳು ಸುದ್ದಿ ಹರಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹ ಸುಳ್ಳು ಪೋಸ್ಟ್‌ಗಳನ್ನು ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿತ್ರಪ್ರೇಮಿಗಳು ಒತ್ತಾಯಿಸಿದ್ದಾರೆ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist