ಬೆಂಗಳೂರು, (www.thenewzmirror.com) ;
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಗೆ ಮನೆಯೂಟದ ಬದಲು ಜೈಲೂಟವೇ ಗತಿಯಾಗಿದೆ. ಕಾರಣ ಮನೆಯೂಟ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಮನೆಯೂಟ ನೀಡುವ ಅರ್ಜಿಯನ್ನ ತಿರಸ್ಕಾರ ಮಾಡಿ, ಆದೇಶ ಹೊರಡಿಸಿದೆ.
ಆರೋಪಿಗೆ ಜೈಲಿನಲ್ಲಿ ಇರುವಾಗ ಮನೆಯ ಊಟ ಪಡೆಯಬಹುದು. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ ಎಂದು ನಟ ದರ್ಶನ್ ಪರ ವಕೀಲರು ವಾದಿಸಿದ್ದರು. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ. ಕೊಲೆಯ ಆರೋಪಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ವಾದಿಸಿದ್ದರು.
ಮನೆಯೂಟ, ಬಟ್ಟೆ, ಹಾಸಿಗೆ, ಪುಸ್ತಕ ನೀಡುವಂತೆ ಕೋರಿ ನಟ ದರ್ಶನ್ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಸಲ್ಲಿಸಿರುವ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ, ಮನೆಯೂಟ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಕೊಲೆ ಆರೋಪಿಗಳಿಗೆ ಮನೆಯೂಟ, ಬಟ್ಟೆ, ಹಾಸಿಗೆ ನೀಡಲು ಅವಕಾಶವಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ.