ಬೆಂಗಳೂರು, ( www.thenewzmirror.com ) ;
ಕರ್ನಾಟಕ ರಾಜ್ಯ ಚುನಾವಣಾ ದಿನಾಂಕ ಹತ್ತಿರ ಬರುತ್ತಿದೆ. ಈಗಾಗಲೇ ಬಿಜೆಪಿ ಎರಡು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟಿಲ್ಟ್ಯನ್ನ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಕಂಡು ಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿ ಹೈ ಕಮಾಂಡ್ ಬಿಜೆಪಿಯ ಇಬ್ಬರು ಸಚಿವರಿಗೆ ಬಿಗ್ ಶಾಕ್ ಕೊಟ್ಟಿದೆ, ಅಂದ್ರೆ ಒಬ್ಬರಿಗೆ ಕನಕಪುರ ಹಾಗೂ ಮತ್ತೊಬ್ಬರಿಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಈ ಇಬ್ಬರೂ ಸಚಿವರು ಬೆಂಗಳೂರಿನ ಉಸ್ತುವಾರಿ ಬೇಕೆಂದು ಪರೋಕ್ಷವಾಗಿ ಪಟ್ಟು ಹಿಡಿದಿದ್ದರು.
ಕಂದಾಯ ಸಚಿವರಾಗಿರುವ ಆರ್. ಅಶೋಕ್ ಹಾಗೂ ವಸತಿ ಸಚಿವರಾಗಿರುವ ವಿ. ಸೋಮಣ್ಣ ಇಬ್ಬರೂ ಬೆಂಗಳೂರು ಉಸ್ತುವಾರಿ ತಮಗೇ ನೀಡುವಂತೆ ಪಟ್ಟು ಹಿಡಿದಿದ್ದರು. ಅದೆಷ್ಟರ ಮಟ್ಟಿಗೆ ಪಟ್ಟು ಹಿಡಿದಿದ್ದರು ಅಂದ್ರೆ ಅವರಿಗಿಂತ ನಾನೇ ಹಿರಿಯ.., ಇವರಿಗಿಂತ ನಾನೇ ಹಿರಿಯ ಅನ್ನುವಷ್ಟರ ಮಟ್ಟಿಗೆ ವಾಗ್ದಾಳಿ ನಡೆಸುತ್ತಿದ್ದರು.
ಕರೋನಾ ಸಮಯಲದಲ್ಲಿ ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಹಿಂದೇಟು ಹಾಕುತ್ತಿದ್ದ ಈ ಇಬ್ಬರು ಸಚಿವರು ಉಸ್ತುವಾರಿ ಮಾತ್ರ ತಮಗೇ ಬೇಕು ಅಂತ ಪಟ್ಟು ಹಿಡಿದಿದ್ದು ಸ್ವತಃ ಸಿಎಂಗೆ ಸಂಕಷ್ಟ ತಂದೊಡ್ಡಿತ್ತು.
ಹೀಗಾಗಿ ಸಿಎಂ ಆಗಿದ್ದ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳೀಯೇ ಇಟ್ಟುಕೊಂಡ್ರು.
ಇದು ಹಳೆ ಕಥೆಯಾದರೆ, ಇಬ್ಬರಿಬ್ಬರಲ್ಲಿ ಯಾರು ಬೆಂಗಳೂರು ಉಸ್ತುವಾರಿಗೆ ಬೆಸ್ಟ್ ಅನ್ನೋತನ್ನ ಸಾಬೀತು ಪಡಿಸೋಕೆ ಒಂದು ಟಾಸ್ಕ್ ವೊಂದನ್ನ ನೀಡಿದೆ, ಆ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಬೆಂಗಳೂರು ಉಸ್ತುವಾರಿ ಸಿಗಲಿದೆ.
ಪದ್ಮನಾಭನಗರದಲ್ಲಿ ಸತತ ಗೆಲುವಿನ ನಗೆ ಬೀರುತ್ತಿದ್ದ ಆರ್ ಅಶೋಕ್ ಗೆ ಪದ್ಮನಾಭನಗರದ ಜತೆಗೆ ಕನಕಪುರದಲ್ಲೂ ಹೈ ಕಮಾಂಡ್ ಟಿಕೇಟ್ ನೀಡಿದೆ. ಕನಕಪುರ ಬಂಡೆಯ ತವರು ಕ್ಷೇತ್ರವಾಗಿರುವ ಕನಕಪುರದಲ್ಲಿ ಅಶೋಕ್ ಗೆಲುವು ಅಷ್ಟು ಸುಲಭವಲ್ಲ.., ಬಂಡೆಯನ್ನ ಒಡೆಯೋಕೆ ಅಶೋಕ್ ಯಾವ ಉಳಿ ಪ್ರಯೋಗ ಮಾಡ್ತಾರೆ.., ಅನ್ನೋದಷ್ಟೇ ಕುತೂಹಲ.
ಮತ್ತೊಂದ್ಕಡೆ ಗೋವಿಂದರಾಜನಗರದಲ್ಲಿ ಗೆದ್ದು ಸಚಿವರಾಗಿದ್ದ ವಿ. ಸೋಮಣ್ಣನಿಗೆ ಗೋವಿಂದರಾಜನಗರ ಕ್ಷೇತ್ರದ ಬದಲು ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರುವ ವರುಣ ಹಾಗೂ ಚಾಮರಾಜದಲ್ಲಿ ಟಿಕೆಟ್ ನೀಡಲಾಗಿದೆ. ಚಾಮರಾಜನಗರದಲ್ಲಿ ಸೋಮಣ್ಣ ಗೆಲುವು ಸಾಧ್ಯವಿದ್ದರೂ ವರುಣದಲ್ಲಿ ಅಷ್ಟು ಸುಲಭವಾಗಿಲ್ಲ. ಕಾರಣ ಅಲ್ಲಿ ನಿಂತಿರೋದು ಮಾಜಿ ಸಿಎಂ ಸಿದ್ಧರಾಮಯ್ಯ. ಟಗರು ವಿರುದ್ಧ ಗೆಲ್ಲೋಕೆ ಸೋಮಣ್ಣ ಯಾವ ರೀತಿ ಗೆಲ್ಲುತ್ತಾರೋ ಕಾದು ನೋಡಬೇಕು.
ಇನ್ನು ಕಾಂಗ್ರೆಸ್ ನಲ್ಲಿ ಸಿಎಂ ಅಂತಿರೋ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವ್ರನ್ನ ಕಟ್ಟಿ ಹಾಕೋಕೆ ಬಿಜೆಪಿ ಹೈ ಕಮಾಂಡ್ ಈ ತಂತ್ರ ರೂಪಿಸಿದೆ ಅಂತ ಹೇಳುತ್ತಿದ್ದರೂಇದರಲ್ಲಿ ಯಾರಿಗೆ ಗೆಲುವು ಸಿಗಲಿದೆ ಅನ್ನೋದು ಮೇ 13 ರಂದು ಗೊತ್ತಾಗಲಿದೆ.
ಅದೇನೇ ಇರ್ಲಿ ಒಂದೇ ಕಲ್ಲಿಗೆ ಎರಡು ಹಣ್ಣ ಹೊಡೆಯೋ ಕೆಲ್ಸ ಮಾಡಿರುವ ಬಿಜೆಪಿ ಹೈ ಕಮಾಂಡ್ ಇಬ್ಬರು ಸಚಿವರಿಗೆ ಅಗ್ನಿ ಪರೀಕ್ಷೆ ಕೊಟ್ಟಿದೆ, ಈ ಅಗ್ನಿ ಪರೀಕ್ಷೆಯಲ್ಲಿ ಸಾಮ್ರಾಟ್ ಗೆಲ್ತಾರೋ ಇಲ್ಲ ಸೋಮಣ್ಣ ಗೆಲ್ತಾರೋ ಗೊತ್ತಿಲ್ಲ.. ಯಾರು ಈ ಅಗ್ನಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಆಗಿ ಪಾಸ್ ಆಗ್ತಾರೋ ಅವ್ರೇ ಬೆಂಗಳೂರು ಉಸ್ತುವಾರಿಯಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.