ಅರುಣಾಚಲ ಇಂದಿಗೂ ಭಾರತದ ಭಾಗವೇ ; ಅಮಿತ್ ಶಾ

ಬೆಂಗಳೂರು, (www.thenewzmirror.com )  ;

ಅರುಣಾಚಲ ಪ್ರದೇಶ ಭಾರತ ಭಾಗವೇ, ಇದರ ಸುದ್ದಿಗೆ ಬಂದರೆ ಪರಿಣಾಮ‌ ನೆಟ್ಟಗಿರೋದಿಲ್ಲ ಅಂತ ಚೀನಾಗೆ ಖಡಕ್ ಎಚ್ಚರಿಕೆ ರವಾನೆ ಮಾಡಿದ್ದಾರೆ ಅಮಿತ್ ಶಾ

ಅಖಂಡ ಭಾರತ ನಿರ್ಮಾಣದಲ್ಲಿ ನಿರತರಾಗಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅರುಣಾಚಲ ಪ್ರವಾಸದ ವೇಳೆ ಗಡಿಗೆ ಹೊಂದಿಕೊಂಡಿರುವ ಕೊನೆಯ ಗ್ರಾಮವಾದ ಕಿಬಿಥೂದಿಂದ ಚೀನಾಕ್ಕೆ ಬಲವಾದ ಸಂದೇಶ ನೀಡುತ್ತಾ, ಅರುಣಾಚಲ ಪ್ರದೇಶವು ಇಂದಿಗೂ ಭಾರತದ ಭಾಗವಾಗಿದೆ ಮತ್ತು ಮುಂದೆಯೂ ಭಾಗವಾಗಿಯೇ ಉಳಿಯಲಿದೆ ಎಂದು ಹೇಳಿದರು.

RELATED POSTS

ಈ ನವ ಭಾರತವು ಸೂಜಿ ಮೊನೆಯಷ್ಟು ಅತಿಕ್ರಮಣವನ್ನು ಒಪ್ಪುವುದಿಲ್ಲ – ಭಾರತದ ಗಡಿಯನ್ನು ಯಾರೋ ಅತಿಕ್ರಮಿಸುವ ಕಾಲ ಕಳೆದಿದೆ, ಈಗ ಯಾರೂ ಅದರ ಸಮಗ್ರತೆಯ ಮೇಲೆ ಕಣ್ಣು ಹಾಕುವ ಧೈರ್ಯ ಮಾಡಲಾರರು ಎಂದು ಘರ್ಜಿಸಿದರು. 

ಗಡಿ ಭದ್ರತೆಗೆ ಬದ್ಧರಾಗಿರುವ ಶಾ ಅವರ ನೀತಿಗಳು ಗಡಿ ಪ್ರದೇಶಗಳಲ್ಲಿ ಒಂದು ತುಂಡು ಭೂಮಿಯನ್ನು ಸಹ ತ್ಯಾಗ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೊಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅರುಣಾಚಲದ ಕೊನೆಯ ಗಡಿ ಗ್ರಾಮವಾದ, ಸೂರ್ಯನ ಮೊದಲ ಕಿರಣಗಳು ಬೀಳುವ ಕಿಬಿಥೂದಲ್ಲಿ ಕನಸಿನ ಯೋಜನೆಯಾದ ‘ವೈಬ್ರೆಂಟ್ ವಿಲೇಜ್ ಯೋಜನೆಗೆ’ ಚಾಲನೆ ನೀಡಿದರು.  ಈ ಯೋಜನೆ ಮೂಲಕ, ಗಡಿ ಪ್ರದೇಶಗಳಲ್ಲಿ ಉತ್ತಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ, ಹಳ್ಳಿಗಳಿಂದ ವಲಸೆ ಸಮಸ್ಯೆಯೂ ಕೊನೆಗೊಳ್ಳಲಿದೆ.

ಕಟ್ಟಕಡೆಯ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಿಬಿಥೂಗೆ ದೇಶದ ಮೊದಲ ಗ್ರಾಮ ಎಂಬ ಹೆಗ್ಗಳಿಕೆ ನೀಡಿ ಅಲ್ಲಿಂದಲೇ ‘ವೈಬ್ರಂಟ್ ವಿಲೇಜ್ ಪ್ರೋಗ್ರಾಂ’ ಆರಂಭಿಸಿದ್ದು, ಕರ್ಮಯೋಗಿ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸರ್ಕಾರದ ನೀತಿಗಳನ್ನು  ಸಮಾಜದ ಕೊನೆಯ ಹಂತದಲ್ಲಿರುವವರಿಗೆ ತಲುಪಿಸಲು ಎಷ್ಟು ಪ್ರಯಾಸ ಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.  4800 ಕೋಟಿ ವೆಚ್ಚದಲ್ಲಿ ಜಾರಿಗೆ ತಂದಿರುವ ಈ ಕಾರ್ಯಕ್ರಮವು ದೇಶಾದ್ಯಂತ 2967 ಗಡಿ ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಕಳೆದ 9 ವರ್ಷಗಳಿಂದ ಅರುಣಾಚಲ ಪ್ರದೇಶ ಸೇರಿದಂತೆ ಇಡೀ ಈಶಾನ್ಯ ಭಾರತವು ಅಭೂತಪೂರ್ವ ಪುನಶ್ಚೇತನಕ್ಕೆ ಸಾಕ್ಷಿಯಾಗಿರುವುದು ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ದಕ್ಷ ನೀತಿಗಳ ಪರಿಣಾಮವಾಗಿದೆ.  ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ಗಡಿಗೆ ಹೊಂದಿಕೊಂಡಿರುವ ಕೊನೆಯ ಹಳ್ಳಿಯವರೆಗೂ ರಸ್ತೆಗಳ ನಿರ್ಮಾಣ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ಅಲ್ಲಿನ ನಿವಾಸಿಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದು ಮುಖ್ಯ ಉದ್ದೇಶ.

ಅರುಣಾಚಲ ಪ್ರವಾಸ ಮುಗಿಸಿ ವಾಪಸಾದ ಬಳಿಕ  ಅಮಿತ್ ಶಾ ಅವರು ತಮ್ಮ ಟ್ವೀಟ್‌ನಲ್ಲಿ ನಿಸರ್ಗದ ಮಡಿಲಲ್ಲಿರುವ ಅರುಣಾಚಲದ ಸೊಬಗನ್ನು ವಿಡಿಯೋ ಮಾಧ್ಯಮದ ಮೂಲಕ ವಿವರಿಸುತ್ತಾ, ಅಲ್ಲಿನ ಅಭಿವೃದ್ಧಿ ಕಾಮಗಾರಿಗಳು, ರಸ್ತೆ ಸಂಪರ್ಕ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರು. ಇದು ಈ ಈರ್ವರು ಈಶಾನ್ಯದ ಅಭಿವೃದ್ಧಿಯಲ್ಲಿ ಯಾವುದೇ ಕಮ್ಮಿ ಮಾಡುವುದಿಲ್ಲ ಎಂಬುದನ್ನು ಹೇಳುತ್ತದೆ.

ಈ ದೇಶದ ಬಹುಮುಖ್ಯ  ಸಾಂವಿಧಾನಿಕ ಹುದ್ದೆಯಲ್ಲಿರುವ ಅಮಿತ್ ಶಾರವರು ಭಾರತ ಮತ್ತು ಚೀನಾದ ಗಡಿಗೆ ಹೊಂದಿಕೊಂಡಿರುವ ಮೊದಲ ಗ್ರಾಮದಲ್ಲಿ ರಾತ್ರಿಯಿಡಿ ಕಳೆಯುತ್ತಾ ಐಟಿಬಿಪಿಗೆ (ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್) ಉತ್ತೇಜನ ನೀಡಿದ್ದು ಬಹುಶಃ ದೇಶದ ಇತಿಹಾಸದಲ್ಲಿ ಇದೇ ಮೊದಲು. ಸೈನಿಕರು, ಶಾರೊಂದಿಗೆ ಸಂವಾದ ನಡೆಸಿದರು ಮತ್ತು ಅವರೊಂದಿಗೆ ಕುಳಿತು ಭೋಜನ ಸವಿದರು.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಸರ್ಕಾರಗಳು ಈಶಾನ್ಯದ ಆರ್ಥಿಕ ಅಭಿವೃದ್ಧಿಗೆ ಯಾವುದೇ ಪ್ರಯತ್ನಗಳನ್ನು ಮಾಡದಿದ್ದದ್ದು,  ಈಶಾನ್ಯ ಭಾರತಕ್ಕೆ, ವಿಶೇಷವಾಗಿ ಗಡಿಯುದ್ದಕ್ಕೂ ಇರುವ ಈ ಪ್ರದೇಶಗಳಿಗೆ ದುರದೃಷ್ಟಕರ ಕಾಲಘಟ್ಟವಾಗಿತ್ತು.  ಇಡೀ ಈಶಾನ್ಯವು ಉಗ್ರಗಾಮಿ ಚಟುವಟಿಕೆಗಳು, ಒಳನುಸುಳುವಿಕೆ, ಮಾದಕವಸ್ತು ಕಳ್ಳಸಾಗಣೆ, ಭ್ರಷ್ಟಾಚಾರದಿಂದ ತತ್ತರಿಸತೊಡಗಿತ್ತು. ಆದರೆ ಭಾರತದ ರಾಜಕಾರಣಕ್ಕೆ ನವ ದಿಶೆ ನೀಡಿ, ನವ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಅಮಿತ್ ಶಾ ಅವರ ‘ದೈವಿಕ’ ನೀತಿಗಳಿಂದಾಗಿ ಇಂದು ಇಡೀ ಈಶಾನ್ಯ ರಾಜ್ಯಗಳು ಅಭಿವೃದ್ಧಿ ಹಾಗೂ ಶಾಂತಿಯ ಪಥದತ್ತ ಸಾಗುತ್ತಿವೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist