ಬೆಂಗಳೂರು , (www.thenewzmirror.com ) ;
ರಾಜ್ಯ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ 40% ಕಮೀಷನ್ ಆರೋಪ ಹೊತ್ತಿದ್ದ ಬಿಜೆಪಿ ಸರ್ಕಾರದ ಭಾಗವಾಗಿದ್ದ ಸಚಿವರೂ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ನಿರೀಕ್ಷೆಗೂ ಮೀರಿ ತಮ್ಮ ಸಂಪತ್ತು ಏರಿಕೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಐವರು ಸಚಿವರು ಮತ್ತು ಅವರ ಪತ್ನಿಯರ ಸಂಪತ್ತು ಗಮರ್ನಾಹ ಏರಿಕೆಯಾಗಿದೆ.
2018ರ ಚುನಾವಣೆಗೆ ಹೋಲಿಸಿದರೆ 2023 ರಲ್ಲಿ ಸಚಿವರು ಹಾಗೂ ಅವರ ಪತ್ನಿಯರ ಸಂಪತ್ತಿನಲ್ಲಿ ಗಣನೀಯ ಏರಿಕೆ ಕಂಡಿದೆ. 2023ರ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಮೂರರಿಂದ ಎಂಟು ಪಟ್ಟು ಏರಿಕೆ ಕಂಡಿದೆ.
ಬೊಮ್ಮಾಯಿ ಸಂಪುಟದ ಸದಸ್ಯರ ಪೈಕಿ ಐವರು ಸಚಿವರ ಆಸ್ತಿ ಜನತೆಯ ಹುಬ್ಬೇರಿಸುವಂತೆ ಮಾಡಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಸಾಕಷ್ಟು ಅವ್ಯವಹಾರದ ಆರೋಪ ಕೇಳಿ ಬಂದಿದ್ದ ಹಾಗೂ ಗುತ್ತಿಗೆದಾರರು ಮಾಡಿದ್ದ ಆರೋಪದಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಅವರ ಕುಟುಂಬದ ಆಸ್ತಿ ಗಮನಿಸಿದರೆ ಹಲವು ಪ್ರಶ್ನೆಗಳನ್ನ ಹುಟ್ಟಿಹಾಕುತ್ತಿದೆ.
ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳಲ್ಲಿ ಆಸ್ತಿ ವಿವರಗಳ ಪ್ರಕಾರ, 2018ರಲ್ಲಿ 1.11 ಕೋಟಿಯಿದ್ದ ಸುಧಾಕರ್ ಅವರ ಚರಾಸ್ತಿ, 2023ರಲ್ಲಿ 2.79 ಕೋಟಿಗೆ ಏರಿಕೆಯಾಗಿದೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಜಿಎ ಅವರ ಸ್ಥಿರಾಸ್ತಿಯಲ್ಲಿ ಭಾರಿ ಏರಿಕೆ ಕಂಡಿದೆ. 2018ರಲ್ಲಿ 1.17 ಕೋಟಿ ರೂಪಾಯಿಗಳಿದ್ದ ಸ್ಥಿರಾಸ್ತಿ 2023ರ ವೇಳೆಗೆ 16.1 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿ 14.92 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ.
ಸಚಿವರ ಅಫಿಡವಿಟ್ ಪ್ರಕಾರ ಆಸ್ತಿ ವಿವರ
ಸಚಿವ 1
ಡಾ.ಕೆ ಸುಧಾಕರ್
ವರ್ಷ – 2023
ಚರಾಸ್ತಿ – 2.79 ಕೋಟಿ ರೂ. (ಪತ್ನಿ ಡಾ. ಪ್ರೀತಿ ಜಿಎ 6.59 ಕೋಟಿ)
ಸ್ಥಿರಾಸ್ತಿ – 2.66 ಕೋಟಿ ರೂ. (ಪತ್ನಿ 16.1 ಕೋಟಿ, 2022ರ ಸೆಪ್ಟೆಂಬರ್ 1ರಂದು ಸದಾಶಿವನಗರದಲ್ಲಿ 14.92 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದಾರೆ)
ಖರ್ಚು-ವೆಚ್ಚ – ರೂ 1.6 ಕೋಟಿ (ಪತ್ನಿ 19.06 ಕೋಟಿ)
ವರ್ಷ – 2018
ಚರಾಸ್ತಿ – ರೂ 1.11 ಕೋಟಿ (ಪತ್ನಿ 10.76 ಕೋಟಿ)
ಸ್ಥಿರಾಸ್ತಿ – ರೂ 2.34 ಕೋಟಿ (1.17 ಕೋಟಿ)
ಖರ್ಚು-ವೆಚ್ಚ – ರೂ 15.94 ಲಕ್ಷ (ಪತ್ನಿ 10.7 ಕೋಟಿ)
===================
ಸಚಿವ 2
ಸಿ.ಸಿ ಪಾಟೀಲ್
ವರ್ಷ – 2023
ಚರಾಸ್ತಿ – 3.28 ಕೋಟಿ ರೂ.
ಸ್ಥಿರಾಸ್ತಿ – 7.2 ಕೋಟಿ ರೂ.
ಖರ್ಚು-ವೆಚ್ಚ – 3.22 ಕೋಟಿ ರೂ.
ವರ್ಷ- 2018
ಚರಾಸ್ತಿ – 94.36 ಲಕ್ಷ ರೂ.
ಸ್ಥಿರಾಸ್ತಿ – 4.47 ಕೋಟಿ ರೂ.
ಖರ್ಚು-ವೆಚ್ಚ – 1.09 ಕೋಟಿ ರೂ.
=======================
ಸಚಿವ 3
ಮುರುಗೇಶ್ ನಿರಾಣಿ
ವರ್ಷ – 2023
ಚರಾಸ್ತಿ – 27.22 ಕೋಟಿ ರೂ. (ಪತ್ನಿ ಕಮಲಾ ನಿರಾಣಿ 38.35 ಕೋಟಿ)
ಸ್ಥಿರಾಸ್ತಿ – 8.6 ಕೋಟಿ ರೂ. (23.85 ಕೋಟಿ)
ಖರ್ಚು-ವೆಚ್ಚ – 22.62 ಕೋಟಿ ರೂ. (47.56 ಕೋಟಿ)
ವರ್ಷ – 2018
ಚರಾಸ್ತಿ – 16 ಕೋಟಿ ರೂ. (ಹೆಂಡತಿ 11.58 ಕೋಟಿ)
ಸ್ಥಿರಾಸ್ತಿ – 4.58 ಕೋಟಿ (20.3 ಕೋಟಿ)
ಖರ್ಚು-ವೆಚ್ಚ – 8.31 ಕೋಟಿರೂ. (15.23 ಕೋಟಿ)
=========================
ಸಚಿವ 4
ಎಸ್.ಟಿ ಸೋಮಶೇಖರ್
ವರ್ಷ – 2023
ಚರಾಸ್ತಿ – 5.46 ಕೋಟಿ ರೂ.
ಸ್ಥಿರಾಸ್ತಿ – 8.91 ಕೋಟಿ ರೂ.
ಖರ್ಚು-ವೆಚ್ಚ – 1.22 ಕೋಟಿ ರೂ.
2018
ಚರಾಸ್ತಿ – 67.83 ಲಕ್ಷ ರೂ.
ಸ್ಥಿರಾಸ್ತಿ – 8.14 ಕೋಟಿ ರೂ.
ಖರ್ಚು-ವೆಚ್ಚ – 92 ಲಕ್ಷ ರೂ.
==========================
ಸಚಿವ 5
ವಿ ಸುನಿಲ್ ಕುಮಾರ್
ವರ್ಷ – 2023
ಚರಾಸ್ತಿ – 1.59 ಕೋಟಿ ರೂ. (ಪತ್ನಿ 1.42 ಕೋಟಿ)
ಸ್ಥಿರಾಸ್ತಿ – 4.03 ಕೋಟಿ ರೂ.
ಖರ್ಚು-ವೆಚ್ಚ – 45.15 ಲಕ್ಷ ರೂ.
ವರ್ಷ – 2018
ಚರಾಸ್ತಿ – 53.27 ಲಕ್ಷ ರೂ. (62.29 ಲಕ್ಷ)
ಸ್ಥಿರಾಸ್ತಿ – 1.68 ಕೋಟಿ ರೂ.
ಖರ್ಚು-ವೆಚ್ಚ – 69.43 ಲಕ್ಷ ರೂ.