ಬೆಂಗಳೂರು, ( www.thenewzmirror.com);
ದೇಶದಲ್ಲಿ ನಂಬರ್ ಸಾರಿಗೆ ಸಂಸ್ಥೆ ಅಂದ್ರೆ ಅದರು ಬಿಎಂಟಿಸಿ. ಆದ್ರೆ ಅಲ್ಲಿ ಕೆಲಸ ಮಾಡುವ ನೌಕರರನ್ನ ಹಿರಿಯ ಅಧಿಕಾರಿಗಳು ಮನಸೋ ಇಚ್ಛೆ ನಡೆಸಿಕೊಳ್ತಿದ್ದಾರೆ. ಅದರಲ್ಲೂ ನೌಕರರ ಮುಷ್ಕರ ನಡೆದ ನಂತರವಂತೂ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ಸಿಗೆ ಬಂದಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಅಧಿಕಾರಿ ವರ್ಗ ಮಾತ್ರ ಇದೆಲ್ಲಾ ಸುಳ್ಳು ಅಂತ ತಮ್ಮ ಬೆನ್ನನ್ನ ತಾವೇ ತಟ್ಟಿಕೊಳ್ಳುವ ಕೆಲ್ಸ ಮಾಡುತ್ತಿದೆ.
ಆದರೆ ಇದೆಲ್ಲಾ ನಿಜವಾಗ್ಲೂ ಡಿಪೋಗಳಲ್ಲಿ ನೌಕರರಿಗೆ ಕಿರುಕುಳ ಆಗ್ತಿದೆ ಅನ್ನೋದನ್ನ ದಾಖಲೆ ಸಮೇತ ಬಯಲು ಮಾಡುವ ಕೆಲಸವನ್ನ ನಿಮ್ಮ ನ್ಯೂಝ್ ಮಿರರ್ ಮಾಡುತ್ತಿದೆ. ಬಿಎಂಟಿಸಿ ಡಿಪೋ 20 ಬನಶಂಕರಿ ಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಇಬ್ಬರು ಬಿಲ್ ಕ್ಲರ್ಕ್ ಗಳಿಗೆ ( ವಿಷಯ ನಿರ್ವಾಹಕರು) ಆ ಡಿಪೋ ಮ್ಯಾನೇಜರ್ ಬ್ರಹ್ಮದೇವ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಅದೇ ಡಿಪೋ ಮ್ಯಾನೇಜರ್ ಗೆ ಬರೆದಿರುವ ಪತ್ರ ನ್ಯೂಝ್ ಮಿರರ್ ಗೆ ಲಭ್ಯವಾಗಿದೆ.
ಡಿಪೋಗಳಲ್ಲಿ ವಿಷಯ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಮಹೇಶ್ ಹಾಗೂ ಮಂಜುನಾಥ್ ಎಂಬುವವರಿಗೆ ಡಿಪೋ ಮ್ಯಾನೇಜರ್ ಧರ್ಮದೇವ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರಂತೆ. ಹೀಗಾಗಿ ಡಿಪೋದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಮನಸ್ಸಿಗೆ ನೆಮ್ಮದಿ ಬೇಕಾಗಿರುವುದರಿಂದ 10 ದಿನಗಳ ರಜೆ ನೀಡುವಂತೆಯೂ ನೊಂದ ನೌಕರರು ಕೋರಿಕೊಂಡಿದ್ದಾರೆ.
Employee Letter
ಡಿಪೋ ಮ್ಯಾನೇಜರ್ ಗೆ ಬರೆದಿರುವ ಪತ್ರದಲ್ಲಿ ಏನಿದೆ..?
ತಮ್ಮ ಅವಾಚ್ಯ ಶಬ್ದಗಳಿಂದ ಬೇಸರಗೊಂಡಿರುವ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಷಯ ನಿರ್ವಾಹಕರಾದ ಮಹೇಶ್ ಹಾಗೂ ಮಂಜುನಾಥ್ ಈ ಮೂಲಕ ಮನನೊಂದು ಹೇಳಿಕೆಯನ್ನ ಬರವಣಿಗೆ ಮುಖಾಂತರ ತಿಳಿಸಲು ಇಚ್ಚೆ ಪಡುತ್ತಿದ್ದೇವೆ. ಸಮಯಕ್ಕೆ ಸರಿಯಾಗಿ ವೇತನ ಬಿಲ್ಲುಗಳನ್ನ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕೆಲಸಗಳನ್ನ ನಿರ್ವಹಿಸುತ್ತಿದ್ದು, ಇದರ ಬಗ್ಗೆ ತಾವು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು ಕೆಲಸ ಕಾರ್ಯಗಳು ಮುಗಿದ ನಂತರ ರಜೆ ಪಡೆದು ಕರ್ತವ್ಯಕ್ಕೆ ಮರಳಿ ಬಂದಾಗ ತಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತೀರಿ ಆದ್ದರಿಂದ ತಮಗೆ ಇನ್ನು ಮುಂದೆ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ತೋರಿಸಲಾಗುತ್ತಿಲ್ಲ ಆದ್ದರಿಂದ ನಮಗೆ ರಜೆಯನ್ನ ಹತ್ತು ದಿನಗಳ ವರೆಗೆ ಮಾನಸಿಕ ಒತ್ತಡದಿಂದ ವಿಶ್ರಾಂತಿ ಪಡೆಯಲು ರಜೆ ಮಂಜೂರು ಮಾಡಿಕೊಡಬೇಕೆಂದು ಹಾಗೂ ತಮಗೆ ವಿಷಯ ನಿರ್ವಾಹಕರಿಂದ ಮುಕ್ತಿಗೊಳಿಸಿ ಬೇರೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ವಂದನೆಗೋಂದಿಗೆ ಮಹೇಶ್ ಹಾಗೂ ಮಂಜುನಾಥ್.
BMTC Depo 20 Manager Bhramadev
ಹೀಗೆ ಸುದೀರ್ಘ ಪತ್ರ ಬರೆದಿರುವ ಸಿಬ್ಬಂದಿಗಳು ನೆಮ್ಮದಿಗಾಗಿ ಹುಡುಕಾಡುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಇದೊಂದು ಡಿಪೋನಲ್ಲಿ ಮಾತ್ರವಲ್ಲ ಬಿಎಂಟಿಸಿಯ ಬಹುತೇಕ ಡಿಪೋಗಳಲ್ಲಿ ಇದೇ ರೀತಿಯ ಕಿರುಕುಳ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆಯಂತೆ. ಇಷ್ಟಿದ್ದರೂ ನಿಗಮದ ಎಂಡಿ ಮಾತ್ರ ಏನೂ ಆಗಿಲ್ಲ ಎನ್ನುವಂತೆ ಸುಮ್ಮನಿದ್ದಾರೆ. ಇದು ನೌಕರರ ಅಸಮಧಾನಕ್ಕೆ ಕಾರಣವಾಗಿದೆ. ನಮ್ಮ ಮೇಲೆ ಆಗುತ್ತಿರುವ ಕಿರುಕುಳವನ್ನ ನಿಲ್ಲಿಸಿ ಅಂತ ಮನವಿ ಮಾಡುತ್ತಿದ್ದಾರೆ.
ನೌಕರರ ಸಂಘಟನೆಗಳು ಹೇಳುವುದೇನು.?
ವೇತನ ಪರಿಷ್ಕರಣೆಗಾಗಿ ನಡೆಸಿದ ಬೃಹತ್ ಪ್ರತಿಭಟನೆ ನಂತರ ಸಣ್ಣಪುಟ್ಟ ವಿಚಾರಗಳಿಗೂ ನೌಕರರ ಮೇಲೆ ಕಿರುಕುಳ ನಿರಂತರವಾಗಿ ಆಗುತ್ತಿದೆ. ಸಣ್ಣ ಪುಟ್ಟದಕ್ಕೂ ನೊಟೀಸ್ ಕೊಡುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು, ತೀರಿ ಕೆಟ್ಟದಾಗಿ ನಡೆಸಿಕೊಳ್ಳೋದು ಆಗುತ್ತಿದೆ, ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬಹುತೇಕ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸೋ ಪ್ರಕರಣಗಳು ಆಗುತ್ತಿವೆ. ಇದಕ್ಕೆ ತಕ್ಷಣವೇ ನಿಲ್ಲಿಸಬೇಕೆಂದು ಮನವಿ ಮಾಡುತ್ತಿವೆ.
ಏನಿದು ವಿಷಯ ನಿರ್ವಾಹಕರು.?
ಡಿಪೋಗಳಲ್ಲಿ ಕೆಲಸ ಮಾಡುವ ಚಾಲಕರು ಹಾಗೂ ನಿರ್ವಾಹಕರ ವೇತನ ಆಗುವಂತೆ ನೋಡಿಕೊಳ್ಳುವ ಕೆಲ್ಸ ಇವರದ್ದಾಗಿರುತ್ತೆ. ಅಂದ್ರೆ ನಿರ್ವಾಹಕರು ಹಾಗೂ ಚಾಲಕರ ಹಾಜರಾತಿ, ಅವರ ರಜೆ, ಎಷ್ಟು ದಿನ ಕೆಲ್ಸ ಮಾಡಿದ್ದಾರೆ. ಅನ್ನೋದನ್ನ ಸಂಪೂರ್ಣ ವರದಿ ಸಿದ್ದಮಾಡಿ ಅದನ್ನ ಕೇಂದ್ರ ಕಚೇರಿಗೆ ಕೊಡುವ ಕೆಲ್ಸ ವಿಷಯ ನಿರ್ವಾಹಕರದ್ದು.
ಡಿಪೋ ಮ್ಯಾನೇಜರ್ ಹೇಳುವುದೇನು..?
ಡಿಪೋ 20 ರ ಮ್ಯಾನೇಜರ್ ವಿರುದ್ಧ ಕೇಳಿ ಬಂದ ಆರೋಪಕ್ಕೆ ಕುರಿತಂತೆ ನ್ಯೂಝ್ ಮಿರರ್ ಅವರನ್ನ ಸಂಪರ್ಕ ಮಾಡಿದಾಗಿ ನಾನು ನೌಕರರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಲ್ಲ ಇದೆಲ್ಲಾ ಸುಳ್ಳು ಅಂತ ಹೇಳಿದ್ದಾರೆ. ಮಹೇಶ್ ಹಾಗೂ ಮಂಜುನಾಥ್ ಬಿಲ್ ಕ್ಲರ್ಕ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅವು ಮಾಡುವ ಕೆಲ್ಸದಲ್ಲಿ ಶ್ರದ್ದೆ ಇಲ್ಲ. ಮನಸ್ಸಿಗೆ ಬಂದಂತೆ ಕೆಲ್ಸಕ್ಕೆ ಬರುವುದು, ಮನಸ್ಸಿಗೆ ಬಂದಂತೆ ಡಿಪೋಗೆ ಬರುವ ಕೆಲ್ಸ ಮಾಡುತ್ತಿದ್ದರು. ಹಾಗೆನೇ ಕೆಲಸದಲ್ಲಿ ಮೈಗಳ್ಳತನ ಮಾಡುತ್ತಿದ್ದರು. ಡಿಪೋ ಮ್ಯಾನೇಜರ್ ಆಗಿ ಯಾಕೆ ಹೀಗೆ ಮಾಡ್ತಾ ಇದ್ದೀರಾ.. ಅಂತ ಪ್ರಶ್ನೆ ಮಾಡಿದ್ದೆ ಅಷ್ಟೇ ಬಿಟ್ಟರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದೇನೆ ಅನ್ನೋದು ಸುಳ್ಳು ಅಂತ ಹೇಳ್ತಿದ್ದಾರೆ ಡಿಪೋ ಮ್ಯಾನೇಜರ್ ಬ್ರಹ್ಮದೇವ್.
ಸದ್ಯ ಡಿಪೋ ಮ್ಯಾನೇಜರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನುವ ಪ್ರಕರಣ ಸದ್ಯ ತನಿಖೆ ನಡೆಯುತ್ತಿದ್ದು, ಅಂತಿಮವಾಗಿ ನೊಂದ ನೌಕರರಿಗೆ ನ್ಯಾಯ ಸಿಗುತ್ತಾ..? ಇಲ್ಲ ಆಡಳಿತ ವರ್ಗ ಡಿಪೋ ಮ್ಯಾನೇಜರ್ ಅವ್ರದ್ದು ಏನೂ ತಪ್ಪಿಲ್ಲ ಅನ್ನೋ ವರದಿ ಬರುತ್ತಾ ಕಾದು ನೋಡಬೇಕು.