KSRTC ಬಸ್ಸಿನಲ್ಲೇ‌ ಹೆರಿಗೆ | ಮಾನವೀಯತೆ ಮೆರೆದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ

ಬೆಂಗಳೂರು, (www.thenewzmirror.com );

ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೆರಿಗೆ ಮಾಡಿಸಿಸ್ದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ ಸಲ್ಲಿಸಲಾಯ್ತು.

RELATED POSTS

ಇತ್ತೀಚೆಗೆ KSRTC ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 21 ವರ್ಷದ ಫಾತೀಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಮೀಪ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಮಾರ್ಗ ಮದ್ಯೆ ಬಸ್ ನಿಲ್ಲಿಸಿ ಬಸ್ ನಲ್ಲೇ ಹೆರಿಗೆ ಮಾಡಿಸಿಅನವೀಯತೆ ಮೆರೆದಿದ್ಸ ಚಿಕ್ಕಮಗಳೂಎಉ ವಿಭಾಗದ ಸಿಬ್ಬಂದಿಗಳಾದ ಎಸ್.  ವಸಂತಮ್ಮ ಹಾಗೂ ಹೆಚ್. ಬಿ. ಕುಮಾರಸ್ವಾಮಿಗೆ ನಿಗಮದ ವತಿಯಿಂದ ಇಂದು ಗೌರವ ಸಲ್ಲಿಸಲಾಯ್ತು.

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಮಾನವೀಯತೆ ಮೆರೆದ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಿದ್ದಲ್ಲದೆ ಸಾಲು ಹೊದಿಸಿ ಗೌರವ ಸಲ್ಲಿಸಲಾಯ್ತು.

ಈ ವೇಳೆ ಮಾತನಾಡಿದ ಎಂಡಿ ಸತ್ಯವತಿ, ನಿಗಮದ ಚಾಲನಾ ಸಿಬ್ಬಂದಿಗಳು ಬಸ್ಸುಗಳಲ್ಲಿ  ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಉತ್ತಮ ನಡೆವಳಿಕೆ ತೋರಿ ಅವರ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ನಿರ್ವಾಹಕಿ ವಸಂತಮ್ಮ ಯಾವುದೇ ರೀತಿಯಲ್ಲಿ ಹಿಂಜರಿಯದೆ  ಧೈರ್ಯದಿಂದ ಸಕಾಲದಲ್ಲಿ ಮಹಿಳೆ ಮತ್ತು ಮಗುವನ್ನು ಕಾಪಾಡಲೇಬೇಕು ಎಂಬ ಸದುದ್ದೇಶದಿಂದ,  ಹತ್ತಿರದಲ್ಲಿ ಆಸ್ಪತ್ರೆ ಇಲ್ಲದ ಕಾರಣ ಅವರಿಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿ ಮಗು ಮತ್ತು ತಾಯಿಯ ಪ್ರಾಣವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಈ‌ ರೀತಿಯ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು‌ ನುರಿತ ವೈದ್ಯಕೀಯ ಸಿಬ್ಬಂದಿಗಳ ಉಸ್ತುವಾರಿ ಅಗತ್ಯವಿದ್ದಾಗ್ಯೂ ಸಹ , ವಸಂತಮ್ಮ ರವರು ವಿವರಿಸಿದಂತೆ, ಸಮಯವಾಗಲಿ ಅಥವಾ ಆಸ್ಪತ್ರೆಯ ಸೌಲಭ್ಯವಾಗಲಿ ಆ‌ ಕ್ಷಣಕ್ಕೆ  ಲಭ್ಯವಾಗದ ಕಾರಣ ಅವರ ಕಾಳಜಿ ಮತ್ತು ಕ್ರಮ ಅನುಕರಣೀಯ.

ಈ ರೀತಿಯ ಎಷ್ಟೋ ಸಂದರ್ಭಗಳಲ್ಲಿ ಜನರು ನಮಗ್ಯಾಕೆ ಇದೆಲ್ಲ ನಮ್ಮ ಮೇಲೆ ಏನಾದರೂ ಅಪವಾದ / ಕ್ರಮ ತೆಗೆದುಕೊಂಡು ಬಿಡುತ್ತಾರೆ ಎಂದು ಯೋಚಿಸಿ ಸಹಾಯ ಮಾಡಲು ಮುಂದೆ ಬರುವುದಿಲ್ಲ, ಇದರಿಂದ ಅದೆಷ್ಟೋ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ವಸಂತಮ್ಮರವರು ಆ ರೀತಿಯ ಯಾವುದೇ ಯೋಚನೆ ಮಾಡದೆ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅದರೊಡನೆ ಸದರಿ ಪ್ರಯಾಣಿಕರು ಅಸ್ಸಾಂ ಮೂಲದವರಾಗಿದ್ದು, ತೀರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನಿಸಿ, ಪ್ರಯಾಣಿಕರಿಂದ ಹಣ ಸಂಗ್ರಹಿಸಿ ನೀಡಿರುವುದು ಇವರ ಮಾನವೀಯ ಅಂತಃಕರಣವನ್ನು ಬಿಂಬಿಸುತ್ತದೆ, ಇವರ ಈ ಕಾರ್ಯವು ಅನನ್ಯವೆಂದು  ತಿಳಿಸಿ ಅವರಿಗೆ ಶುಭ ಹಾರೈಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist