ಬೆಂಗಳೂರು, (www.thenewzmirror.com ) ;
ಕರ್ನಾಟಕ ರಾಜ್ಯದಲ್ಲಿ ಪ್ರಚಂಡ ಬಹುಮತ ಗಳಿಸಿರುವ ಕಾಂಗ್ರೆಸ್ ಮುಂದಿನ 5 ವರ್ಷ ಆಡಳಿತ ನಡೆಸಲಿದೆ. ದೆಹಲಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿದ್ದ ಹೈ ಡ್ರಾಮ ಮುಕ್ತಾಯವಾಗಿದ್ದು ಇನ್ದೆ ರಾಜ್ಯದಲ್ಲಿ ಜೋಡೆತ್ತುಗಳ ಸರ್ಕಾರ ಆಡಳಿತಕ್ಕೆ ಬರಲಿದೆ.
AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು, ನಮ್ಮಲ್ಲೊ ಯಾವುದೇ ಗೊಂದಲಗಳಿಲ್ಲ ಅನ್ನೋದನ್ನ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ವೇಣುಗೋಪಾಲ್ ಅವ್ರ ನಿವಾಸದಲ್ಲಿ ಉಪಹಾರ ಕೂಟದ ಬಳಿಕ ಒಗ್ಗಟ್ಟು ಪ್ರದರ್ಶನ ತೋರಿದ ಉಭಯನಾಯಕರು ಇನ್ಮುಂದೆ ಜತೆಯಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸೋ ಸಂದೇಶ ರವಾನೆ ಮಾಡಿದ್ದಾರೆ.
ಹಾಗಿದ್ರೆ ದೆಹಲಿಯಲ್ಲಿ ಏನೆಲ್ಲಾ ಡ್ರಾಮಗಳು ನಡೀತು, AICC ಸಮಸ್ಯೆ ಬಗೆಹರಿಸಿದ್ದು ಹೇಗೆ ಅನ್ನೋದರ ಕುರಿತಂತೆ AICC ನಾಯಕರು ಹೇಳಿದ್ದೇನು.? ಇಲ್ಲಿದೆ ಇದಕ್ಕೆ ಉತ್ತರ.