ಬೆಂಗಳೂರು, (www.thenewzmirror.com) ;
ಜಲಮಂಡಳಿ ನಷ್ಟದಲ್ಲಿದೆ. ಇಲ್ಲಿನ ಸಿಬ್ಬಂದಿಗೆ ವೇತನ ನೀಡೋಕೆ ಮಂಡಳಿ ಕೈಯಲ್ಲಿ ಸಾಧ್ಯವಾಗ್ತಿಲ್ಲ ಹೀಗಾಗಿ ನೀರಿನ ದರವನ್ನ ಏರಿಕೆ ಮಾಡೋದು ಅನಿವಾರ್ಯ ಅಂತ ಬೆಂಗಳೂರು ನಗರ ಉಸ್ತುವಾರಿಯೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ರು.
ಬೃಹತ್ತಾಕಾರವಾಗಿ ಬೆಳೆದಿರೋ ಮಹಾನಗರಕ್ಕೆ ನೀರು ಪೂರೈಕೆ ಮಾಡ್ತಿರೋ ಬೆಂಗಳೂರು ಜಲಮಂಡಳಿ ನಷ್ಟದಲ್ಲಿರೋಕೆ ಕಾರಣವೇನು..? ಅನ್ನೋದನ್ನ ಹುಡುಕುತ್ತಾ ಹೊರಟಾಗ ನ್ಯೂಝ್ ಮಿರರ್ ಗೆ ಸಿಕ್ಕಿದ್ದು, ಎರಡು ಕಾರಣ.
ಕಾರಣ 1 – ಅನಧಿಕೃತ ಸಂಪರ್ಕಗಳ ಸಂಖ್ಯೆಗೆ ಕಡಿವಾಣ ಹಾಕದೆ ಇರುವುದು
ಕಾರಣ 2 – ನೀರು ಸೋರಿಕೆಯನ್ನ ನಿಯಂತ್ರಣ ಮಾಡುವಲ್ಲಿ ಮಂಡಳಿ ವಿಫಲವಾಗಿದ್ದು
ಹೌದು ಈ ಎರಡು ಕಾರಣಗಳಿಂದ ಜಲಮಂಡಳಿ ನಷ್ಟದತ್ತ ಮುಖ ಮಾಡಲು ಪ್ರಮುಖವಾದ ಕಾರಣ ಎನ್ನಲಾಗುತ್ತಿದೆ.
ಜಲಮಂಡಳಿಯ ಕೆಲ ಅಧಿಕಾರಿಗಳ ಪ್ರಕಾರ ಪ್ರತಿ ದಿನ ಬೆಂಗಳೂರಿಗೆ ಹತ್ರತ್ರ 1500 ಎಂಎಲ್ ಡಿ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಶೇಕಡಾ ಮೂವತ್ತರಷ್ಟು ಅನಧಿಕೃತ ಸಂಪರ್ಕಗಳಿದಾವೆ. ಕೆಲ ಅಪಾರ್ಟ್ ಮೆಂಟ್ ಗಳಲ್ಲಿ ಒಂದು ಸಂಪರ್ಕ ಪಡೆದು ಮತ್ತೊಂದು ಅನಧಿಕೃತವಾಗಿ ಸಂಪರ್ಕ ಪಡೆದಿದ್ದಾರಂತೆ. ಇದಕ್ಕೆ ಕೆಲ ಆಯಾ ಭಾಗದ ಕೆಲ ಜಲಮಂಡಳಿ ಅಧಿಕಾರಿಗಳೂ ಸಾಥ್ ಕೊಡ್ತಿದ್ದಾರಂತೆ. ಅನಧಿಕೃತ ಸಂಪರ್ಕಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ರೂ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗುತ್ತೆ ಅನ್ನೋದು ಬೇಸರದ ಸಂಗತಿ.
ಇನ್ನೊಂದು ಕಾರಣವನ್ನ ನೋಡುವುದಾದರೆ ಬೆಂಗಳೂರಿಗೆ ನೀರಿನ ಮೂಲಗಳಿಂದ ಪೂರೈಕೆಯಾಗುತ್ತಿರೋ ನೀರು ಅಷ್ಟೇ ಪ್ರಮಾಣದಲ್ಲಿ ತಲುಪುತ್ತಿಲ್ಲ. ಕಾರಣ ಅಲ್ಲಲ್ಲಿ ಒಡೆದುಹೋಗಿರುವ ಪೈಪ್ ಗಳು, ತುಂಬಾ ಹಳೆಯದಾಗಿರುವ ನೀರಿನ ಪೈಪ್ ಗಳಿಂದ ಆಗ್ತಿರೋ ಸೋರಿಕೆಯಿಂದ ನೀರು ಪೋಲಾಗುತ್ತಿದೆ. ಜಲಮಂಡಳಿ ಹೇಳುವ ಪ್ರಕಾರ ಶೇಕಡಾ ಇಪ್ಪತ್ತರಷ್ಟು ನೀರು ಬಳಕೆಯಾಗದೆ ಪೋಲಾಗುತ್ತಿದೆಯಂತೆ.
ಈ ಎರಡು ಲೋಪಗಳನ್ನ ಸರಿಪಡಿಸಿಕೊಳ್ಳದಿದ್ರೆ ಜಲಮಂಡಳಿ ಇನ್ನಷ್ಟು ನಷ್ಟಕ್ಕೆ ಹೋಗೋದ್ರಲ್ಲಿ ಎರಡು ಮಾತಿಲ್ಲ. ಹಾಗೆನೇ ಕಾಲ ಕಾಲಕ್ಕೆ ಜಲಮಂಡಳಿಗೆ ಕಟ್ಟುವ ಬಿಲ್ ಅನ್ನ ವಸೂಲಿ ಮಾಡುವಲ್ಲಿ ಕೆಲ ಅಧಿಕಾರಿಗಳು ವಿಫಲರಾಗ್ತಿದ್ದಾರೆ. ಜನಸಾಮಾನ್ಯರು ಒಂದು ತಿಂಗಳು ಬಿಲ್ ಕಟ್ಟಲಿಲ್ಲ ಅಂದ್ರೆ ನೀರಿನ ಸಂಪರ್ಕ ಕಡಿತಗೊಳಿಸೋ ಎಚ್ಚರಿಕೆ ನೀಡುವ ಅಧಿಕಾರಿಗಳು ದೊಡ್ಡ ದೊಡ್ಡವರು, ಆರ್ಥಿಕ ಬಲವಂತರಾಗಿರುವವರ ಬಿಲ್ ಮಾತ್ರ ಸಂಗ್ರಹ ಮಾಡುವಲ್ಲಿ ಮುಂದಾಗ್ತಿಲ್ಲ. ಹೀಗೆ ಕಳೆದ ಹಲವು ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಂಡಿರುವವರ ಸಂಖ್ಯೆ ಶೇಕಡಾ 18 ರಷ್ಟಿದೆಯಂತೆ.
ಜಲಮಂಡಳಿ ತಾನು ಮಾಡಿಕೊಂಡಿರುವ ಎಡವಟ್ಟುಗಳಿಂದಾಗಿಯೇ ನಷ್ಟದ ದಾರಿಗೆ ಹೋಗುತ್ತಿದೆ. ಬೆಂಗ್ಳೂರು ನಗರ ಉಸ್ತುವಾರಿ ಸಚಿವರು ಇದನ್ನ ಗಮನ ಹರಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದ್ರೆ ನಷ್ಟದಲ್ಲಿರೋ ಮಂಡಳಿಯನ್ನ ಲಾಭದತ್ತ ತರಬಹುದು ಅಷ್ಟೇ ಅಲ್ದೇ ನೀರಿನ ಬಿಲ್ ಏರಿಕೆ ಮಾಡುವ ಪ್ರಸ್ತಾವನೆನ್ನೂ ಸದ್ಯಕ್ಕೆ ಕೈ ಬಿಡಬಹುದು.
ರಾತ್ರೋ ರಾತ್ರಿ 200 ಅಧಿಕಾರಿಗಳ ವರ್ಗಾವಣೆ…!
ಇನ್ನೊಂದು ಮೂಲಗಳ ಪ್ರಕಾರ ಜಲಮಂಡಳಿಯಲ್ಲಿ ರಾತ್ರೋ ರಾತ್ರಿ ಸಚಿವರ ಗಮನಕ್ಕೂ ತಾರದೇ 200 ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆಯಂತೆ. ಕೇವಲ ವರ್ಗಾವಣೆ ಮಾಡಿರೋದು ಅಷ್ಟೇ ಅಲ್ಲ ಒಬ್ಬೊಬ್ಬ ಅಧಿಕಾರಿಗೆ ಎರಡೆರಡು ಪೋಸ್ಟಿಂಗ್ ಕೂಡ ನೀಡಲಾಗಿದೆಯಂತೆ. ವರ್ಗಾವಣೆಯಲ್ಲಿ ಹಲವರಿಗೆ ಮುಂಬಡ್ತಿ ನೀಡಿದ್ರೆ ಮತ್ತೆ ಕೆಲವರಿಗೆ ಡಬಲ್ ಪೋಸ್ಟಿಂಗ್ ನೀಡಲಾಗಿದೆ ಅನ್ನೋ ಆರೋಪವಿದ್ದು, ಹಲವು ನೌಕರರಿಗೆ ಮಾಪನ ಹುದ್ದೆಯಿಂದ ಜಲಪರೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
ಇನ್ನು ಜಲಮಂಡಳಿಯಲ್ಲಿ ಆಗ್ತಿರೋ ನೀರಿನ ಪೋಲಿನ ಕುರಿತು ಮಾಹಿತಿ ಸಂಗ್ರಹಿಸೋಕೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವ್ರನ್ನ ಸಂಪರ್ಕಸಿತಾದ್ರೂ ಅವ್ರ ಸಂಪರ್ಕಕ್ಕೆ ಸಿಗಲೇ ಇಲ್ಲ.