ಬೆಂಗಳೂರು, (www.thenewzmirror.com) ;
ಮೂಡ ಹಗರಣದಲ್ಲಿ ಸಿಲುಕಿ ಅದರಿಂದ ಆಚೆ ಬರೋದಿಕ್ಕೆ ಸಾಧ್ಯವಾಗದೆ ಪರದಾಡುತ್ತಿರೋ ಸಿದ್ದರಾಮಯ್ಯ ಸಿಎಂ ತನ್ನ ಹುದ್ದೆಯಿಂದ ಕೆಳಗಿಳಿಯೋದು ಖಚಿತ. ಹಾಗೆನೇ ಮಿತ್ರ ಪಕ್ಷಗಳ ಜತೆ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರೋ ಪ್ರಧಾನಿ ಮೋದಿ ಸರ್ಕಾರ ಬೀಳೋದು ಗ್ಯಾರಂಟಿ ಅಂತ ಯಾದಗಿರಿಯ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಪೂಜಾರಿಯ ಈ ಭವಿಷ್ಯ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಹುಟ್ಟಿಹಾಕಿದೆ. ಯಾಕಂದ್ರೆ ಈ ಹಿಂದೆ ಪೂಜಾರಿ ಮಹಾದೇವಪ್ಪ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ, ಕೇಂದ್ರದ ಎನ್ಡಿಎ ಸರ್ಕಾರವೂ ಪತನವಾಗಲಿದೆ. ಹಾಗೆನೇ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಭವಿಷ್ಯ ನುಡಿದಿದ್ದಾರೆ.
ಕೇಂದ್ರ ಮಿತ್ರ ಪಕ್ಷಗಳ ಜತೆ ಹೊಂದಾಣಿಕೆ ಸರಿಯಾಗದೇ ಪ್ರಧಾನಿ ಹುದ್ದೆಯನ್ನ ನರೇಂದ್ರ ಮೋದಿ ಕಳೆದುಕೊಳ್ತಾರಾ ಅನ್ನೋ ಆತಂಕ ಇದೀಗ ಬಿಜೆಪಿಗೆ ಕಾಡತೊಡಗಿದೆ. ಹಾಗೆನೇ ರಾಜ್ಯದ ವಿಚಾರಕ್ಕೆ ಬರೋದಾದ್ರೆ ಮೂಡ ಹಗರಣದಿಂದ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಕಂಟಕ ಎದುರಾಗಲಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ.
ಇನ್ನು ಸಿದ್ದರಾಮಯ್ಯ ನಂತರದ ಯಾರು ಮುಖ್ಯಮಂತ್ರಿ ಹುದ್ದೆಯನ್ನ ಪಡೆಯುತ್ತಾರೆ ಅನ್ನೋದನ್ನೂ ಸಹ ಪೂಜಾರಿ ಮಹಾದೇವಪ್ಪ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಅಂತಾನೂ ಭವಿಷ್ಯ ಹೇಳಿದ್ದಾರೆ.
ಈ ಹಿಂದೆ ಪೂಜಾರಿ ಮಹಾದೇವಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಭವಿಷ್ಯ ನುಡಿದ್ದಿದ್ದು, ಅದರಂತೆ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.