ಬೆಂಗಳೂರು/ಕಲ್ಬುರ್ಗಿ,(www.thenewzmirror.com) ;
ಇನ್ಮುಂದೆ ಮಿನಿ ವಿಧಾನಸೌಧ ಎನ್ನುವ ಹೆಸರನ್ನ ಪ್ರಜಾಸೌಧ ಎಂದು ಮರು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಕಲ್ಬುರ್ಗಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಇದರ ಜತೆಗೆ ಸಂಪುಟದಲ್ಲಿ 12,692 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯಲ್ಲಿ ಒಟ್ಟು 56 ವಿಷಯಗಳು ಚರ್ಚೆಯಾಗಿ ಒಪ್ಪಿಗೆ ಪಡೆಯಲಾಗಿದ್ದು, ಇದರಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟ ಸಂಗತಿಗಳನ್ನು ಒಪ್ಪಿಗೆ ಪಡೆಯಲಾಗಿದೆ. ಒಟ್ಟು 56 ವಿಷಯಗಳಿಂದ 12692 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಇದರಲ್ಲಿ 46 ವಿಷಯಗಳ ಒಟ್ಟು ಮೊತ್ತ 11770 ಕೋಟಿ ಮೊತ್ತದ ಯೋಜನೆಗೆ ಅನುಮೋದಿಸಲಾಗಿದೆ.
ಬೀದರ್-ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಗಳನ್ನಾಗಿ ಮಾಡುವ ನಿರ್ಣಯ, ಬೀದರ್- ಗುಲ್ಬರ್ಗದ ಎಲ್ಲಾ ಜನ ವಸತಿ ಪ್ರದೇಶಕ್ಕೆ 7200 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನ ಕ್ಯಾಬಿನೇಟ್ ನಲ್ಲಿ ಮಾಡಲಾಗಿದೆ.
7200 ಕೋಟಿಯಲ್ಲಿ ಶೇ50 ರಷ್ಟು ಮೊತ್ತವನ್ನು ಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನ ಮಾಡಲಾಗಿದ್ದು, ರಾಜ್ಯದ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸಲು ತೀರ್ಮಾನವನ್ನ ಕ್ಯಾಬಿನೇಟ್ ಕೈಗೊಂಡಿದೆ.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ತೀರ್ಮಾನ ಮಾಡಿದ್ದು ಇದರಿಂದ ಈ ಭಾಗದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಹಾಗೆನೇ 371J ಜಾರಿಯಾದ ಬಳಿಕ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರದ ಕೊಟ್ಟಿರುವುಷ್ಟೆ ಪ್ರಮಾಣದ 5000 ಕೋಟಿ ಕೊಡಬೇಕು ಎನ್ನುವ ನಿರ್ಣಯ ಮಾಡಲಾಗಿದೆ.
ರಾಜ್ಯಾದ್ಯಂತ 17439 ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿಗೆ ಕ್ರಮ, 11770 ಕೋಟಿ ರೂಪಾಯಿಯಲ್ಲಿ , ಕೃಷಿ ಇಲಾಖೆಗೆ 100 ಕೋಟಿ, ಕೈಗಾರಿಕಾ ಇಲಾಖೆಗೆ 1550 ಕೋಟಿ , ಅರಣ್ಯ 32, ಆರೋಗ್ಯ 910 ಕೋಟಿ ಸೇರಿ ನಾನಾ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗಿದೆ.
ನಂಜುಂಡಪ್ಪನವರ ಅಧ್ಯಕ್ಷತೆಯ ಸಮಿತಿ ವರದಿಯಲ್ಲಿನ ಹಿಂದುಳಿದ 119 ತಾಲ್ಲೂಕುಗಳಲ್ಲಿ ಇದುವರೆಗೂ ಏನೆಲ್ಲಾ ಪ್ರಗತಿ ಆಗಿದೆ ಎನ್ನುವುದನ್ನು ಅರಿಯಲು ಆರ್ಥಿಕ ತಜ್ಞ ಗೋವಂದರಾವ್ ಅಧ್ಯಕ್ಷತೆಯ ಸಮಿತಿ ಮಾಡಲಾಗಿದ್ದು 6 ತಿಂಗಳಲ್ಲಿ ಸಮಿತಿ ವರದಿ ಸರ್ಕಾರ ನೀಡಬೇಕಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 45 ಪ್ರಾಥಮಿಕ ಆರೋಗ್ಯ ಕೇಂದ್ರ, 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾಡಲು ತೀರ್ಮಾನ., 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ನಿರ್ಣಯ ಮಾಡಲಾಗಿದ್ದು ಇದಕ್ಕಾಗಿ 892 ಕೋಟಿ ವೆಚ್ಚ ಮಾಡಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ.