ಬೆಂಗಳೂರು, (www.thenewzmirroe.com) ;
![](https://thenewzmirror.com/wp-content/uploads/2024/07/1001152899.jpg)
ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಗೌರವ ಸೂಚಕವಾಗಿ ಅವರ ಫೋಟೊವನ್ನು ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರದರ್ಶನ ಮಾಡಲಾಯಿತು. ಲೇಸರ್ ಲೈಟ್ಗಳ ಮೂಲಕ ಕೊಹ್ಲಿಯ ಫೋಟೊ ಕಂಗೊಳಿಸಿದ ವಿಡಿಯೋ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು.
ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.
![](https://thenewzmirror.com/wp-content/uploads/2024/07/1001142146-1024x682.webp)
![](https://thenewzmirror.com/wp-content/uploads/2024/07/1001142151-1024x682.webp)
829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ.