ಬೆಂಗಳೂರು, ( www.thenewzmirror.com) ;
ಚುನಾವಣೆಗೂ ಮೊದಲು ಕಾಂಗ್ರೆಸ್ ನಾವು ಅಧಿಕಾರಕ್ಕೆ ಬಂದರೆ ಐದು ಉಚಿತ ಗ್ಯಾರಂಟಿಗಳನ್ನ ಕಡ್ಡಾಯವಾಗಿ ನೀಡ್ತೀವಿ.., ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೇಟ್ ನಲ್ಲೇ ಅದನ್ನ ಜಾರಿ ಗೊಳಿಸ್ತೀವಿ ಅಂತೆಲ್ಲಾ ಭರವಸೆಗಳನ್ನ ಕೊಟ್ಟಿತ್ತು.
ಅದರಂತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಓಡಾಟ, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ, ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ಹಾಗೆನೇ ಯುವನಿಧಿಯಡಿ ಪದವೀಧರರಿಗೆ 3000 ಡಿಪ್ಲೋಮಾ ಉತ್ತೀರ್ಣರಾದವರಿಗೆ 1500 ರೂ ಕೊಡ್ತೀವಿ ಅಂತ ಘೋಷಣೆಯನ್ನೂ ಮಾಡಿದೆ.
ಚುನಾವಣೆಗೂ ಮೊದಲು ಜಾರಿ ಮಾಡಿಯೇ ಮಾಡ್ತೀವಿ ಅಂತ ಹೇಳುತ್ತಿದ್ದ ಕಾಂಗ್ರೆಸ್ ಇದೀಗ ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ವೆಚ್ಚ ಎಷ್ಟಾಗುತ್ತೆ ಅನ್ನೋದನ್ನ ಬಹಿರಂಗ ಪಡಿಸಿದೆ. ಈ ಕುರಿತಂತೆ ಸಿಎಂ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಐದು ಗ್ಯಾರಂಟಿ ಯೋಜನೆ ಜಾರಿಗೆ ವಾರ್ಷಿಕ ಸುಮಾರು 59000 ಕೋಟಿ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಅನ್ನಬಾಗ್ಯ, ಕ್ಷೀರಬಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಯೋಜನೆಗಳನ್ನ ಜಾರಿ ಮಾಡಿದ್ವಿ. ಇದೀಗ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿಯೇ ತೀರುತ್ತೀವಿ ಅಂತ ಟ್ವೀಟ್ ಮಾಡಿದ್ದಾರೆ.

ಹಾಗಿದ್ರೆ ಸರ್ಕಾರ ಏನೋ ಐದು ಗ್ಯಾರಂಟಿ ಜಾರಿ ಮಾಡ್ತೀವಿ ಇದಕ್ಕಾಗಿ 59000 ಕೋಟಿ ಹೊರೆ ಆಗುತ್ತೆ ಅಂತ ಹೇಳಿದೆ. ಒಂದು ವರ್ಷಕ್ಕೆ 59000 ಕೋಟಿ ಐದು ವರ್ಷಕ್ಕೆ 2,95,000 ಕೋಟಿ ( ಎರಡು ಲಕ್ಷದ 95 ಸಾವಿರ ಕೋಟಿ) ವೆಚ್ಚವಾಗುತ್ತೆ. ಇಷ್ಟು ದೊಡ್ಡ ಪ್ರಮಾಣದ ಹೊರೆರಾಜ್ಯದ ಜನತೆಯ ಮೇಲೆ ಎಷ್ಟು ಹೊರೆ ಬೀಳುತ್ತೆ ಅನ್ನೋದನ್ನ ನೋಡುವುದಾದರೆ.., 2014 ರಲ್ಲಿ ರಾಜ್ಯದ ಜನಸಂಖ್ಯೆ 6 ಕೋಟಿ 41 ಲಕ್ಷ ಇದೆ. ಇದೇ ಜನಸಂಖ್ಯೆ ಆಧಾರದ ಮೇಲೆ ಎಷ್ಟು ಆರ್ಥಿಕ ಹೊರೆ ಬೀಳುತ್ತೆ ಅನ್ನೋದನ್ನ ಲೆಕ್ಕ ಹಾಕುವುದಾದರೆ.., 59,000 ಕೋಟಿ ವೆಚ್ಚವಾದ್ರೆ ವಾರ್ಷಿಕ ಪ್ರತಿಯೊಬ್ಬರಿಗೆ ಬೀಳುವ ಆರ್ಥಿಕ ಹೊರೆ 1,086.44 ರೂಪಾಯಿ. ಇದನ್ನ ಐದು ವರ್ಷಕ್ಕೆ ಲೆಕ್ಕ ಹಾಕಿ ಹೇಳುವುದಾದರೆ 5,432.20 ರೂಪಾಯಿ ಹೆಚ್ಚುವರಿ ಬೀಳಲಿದೆ.
ಅಂದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ಆಗಬೇಕಂದ್ರೆ ತೆರಿಗೆ ಕಟ್ಟುತ್ತಿರುವವರೂ, ತೆರಿಗೆ ಕಟ್ಟದಿರವವರ ತಲೆ ಮೇಲೆ ಈಗಿರುವ ಸಾಲದ ಹೊರೆಯ ಜತೆಗೆ ಹೆಚ್ಚುವರಿಯಾಗಿ ವಾರ್ಷಿಕ 1,086.44 ರೂಪಾಯಿಗಳನ್ನ ಕಟ್ಟಬೇಕಾಗಿದೆ.