ಬೆಂಗಳೂರು, (www.thenewzmirror.com) ;
ಗೃಹ ಜ್ಯೋತಿ ಯೋಜನೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಪೈಕಿ ಈ ಗ್ಯಾರಂಟಿನೂ ಒಂದು, ಚುನಾವಣೆಗೂ ಮೊದಲು ಪ್ರತಿ ಮನೆಗೂ 200 ಯೂನಿಟ್ ಫ್ರೀ ವಿದ್ಯುತ್ ನೀಡ್ತೀವಿ ಅಂತ ಘೋಷಣೆ ಮಾಡಲಾಗಿತ್ತು. ಅದಾದ ಬಳಿಕ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿದ ಎರಡನೇ ಯೋಜನೆ ಗೃಹ ಜ್ಯೋತಿ ಯೋಜನೆ.
ಕಳೆದ ವರ್ಷ ಆಗಸ್ಟ್ ಮೊದಲ ವಾರದಲ್ಲಿ 200 ಯೂನಿಟ್ ಉಚಿತ ನೀಡುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಚಾಲನೆ ನೀಡಲಾಗಿತ್ತು.
ಆರಂಭದಲ್ಲಿ ಯೋಜನೆ ಹಳ್ಳ ಹಿಡಿಯುತ್ತೆ ಅಂತೆಲ್ಲ ಆರೋಪಗಳು ಕೇಳಿ ಬಂದಿತ್ತು. ಆದ್ರೆ ಆರ್ಥಿಕ ಇಲಾಖೆ ಹಾಗೂ ಇಂಧನ ತಜ್ಞರ ಜತೆ ನಡೆಸಿದ ನಿರಂತರ ಸಭೆಯ ಬಳಿಕ ಯೋಜನೆಯನ್ನ ಜಾರಿತೆ ತರಲಾಗಿತ್ತು. ಇದೀಗ ಯೋಜನೆ ಜಾರಿಯಾಗಿ ಅದರಲ್ಲೂ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ಸಂತಸವನ್ನ ಇಂಧನ ಸಚಿವ ಕೆ. ಜೆ. ಜಾರ್ಜ್ ಹಂಚಿಕೊಂಡಿದ್ದಾರೆ.
ಯೋಜನೆ ಜಾರಿಯಾಗಿ ಒಂದು ವಿಶೇಷ ಮೈಲಿಗಲ್ಲನ್ನು ಸಾಧಿಸಿದೆ. ಸರಿಯಾಗಿ ಒಂದು ವರ್ಷದ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಇಂಧನ ಇಲಾಖೆಯ ಅಧಿಕಾರಿಗಳ ಅಪಾರ ಬೆಂಬಲದೊಂದಿಗೆ, ನಾವು ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ.
ಒಂದು ವರ್ಷದಲ್ಲಿ ಗೃಹ ಜ್ಯೋತಿ ಯೋಜನೆಯನ್ನ ರಾಜ್ಯದ್ಯಾಂತ 1.65 ಕೋಟಿ ಕುಟುಂಬಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಆನಂದಿಸುತ್ತಿವೆ. ಇದರಿಂದ ಆ ಕುಟುಂಬಗಳ ಆರ್ಥಿಕ ಹೊರೆಯನ್ನ ಕಡಿಮೆ ಮಾಡುವುದಲ್ಲದೆ ಮನೆಗಳನ್ನು ಬೆಳಗಿಸುತ್ತಿವೆ. ಯೋಜನೆಗಾಗಿ ಸರ್ಕಾರ ₹9,000 ಕೋಟಿ ವ್ಯಯಮಾಡಿದ್ದು, ಇದನ್ನ ಮುಂದಿನ ಮುಂದುವರೆಸಿಕೊಂಡು ಹೋಗುತ್ತೇವೆ. ಇದು ನಮ್ಮ ಬದ್ಧತೆಯನ್ನ ತೋರಿಸುತ್ತದೆ ಅಂತ ಇಂಧನ ಸಚಿವ ಜಾರ್ಜ್ ಭರವಸೆ ಕೊಟ್ಟಿದ್ದಾರೆ.