ಬೆಂಗಳೂರು, (www.thenewzmirror.com) ;
ಒಂದ್ಕಡೆ ರಾಜ್ಯದಲ್ಲಿ ಉಚಿತ ಭಾಗ್ಯ ಒಂದೊಂದೇ ಜಾರಿಯಾಗುತ್ತಿದೆ. ಇದಕ್ಕೆ ಅಗತ್ಯವಿರುವ ಅನುದಾನ ಹೊಂದಾಣಿಕೆಗೆ ರಾಜ್ಯ ಸರ್ಕಾರ ಪರ್ಯಾಯ ಮಾರ್ಗ ಹುಡುಕುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಜಿಎಸ್ ಟಿ ಪಾಲು ಕರ್ನಾಟಕಕ್ಕೆ ಬಿಡುಗಡೆ ಮಾಡಿದೆ. ಅದರ ಪ್ರಕಾರ ಜೂನ್ ತಿಂಗಳಲ್ಲಿ ರಾಜ್ಯಕ್ಕೆ 4,314 ಕೋಟಿ ಬಿಡುಗಡೆ ಮಾಡಿದೆ ಕೇಂದ್ರ ಸರ್ಕಾರ.
ಕೇಂದ್ರ, ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್ಟಿ ಪಾಲು ಹಂಚಿಕೆ ಮಾಡಿದೆ. ಒಟ್ಟಾರೆಯಾಗಿ 1,18,280 ಕೋಟಿ ರೂ ಹಣ ಬಿಡುಗಡೆ ಮಾಡಿದೆ.
ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ. ಪೈಕಿ ಕರ್ನಾಟಕಕ್ಕೆ 4,314 ರೂ, ಮಹಾರಾಷ್ಟ್ರಕ್ಕೆ 7,472 ಕೋಟಿ ರೂ ಸಿಕ್ಕಿದೆ. ಅತಿ ಹೆಚ್ಚು ಉತ್ತರಪ್ರದೇಶಕ್ಕೆ 21,218 ಕೋಟಿ ರೂ ನೀಡಲಾಗಿದೆ. ಬೇಸರದ ಸಂಗತಿ ಎಂದರೆ ದೇಶದಲ್ಲಿ ಹೆಚ್ಚು ಜಿಎಸ್ ಸಂಗ್ರಹಿಸೋ ಕರ್ನಾಟಕಕ್ಕೆ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ.
ರಾಜ್ಯಗಳಿಗೆ ಬಿಡುಗಡೆಯಾಗಿರುವ ಜಿಎಸ್ ಟಿ ಪಾಲು ಹೀಗಿದೆ.
ಉತ್ತರಪ್ರದೇಶ – 21,218 ಕೋಟಿ ರೂ.
ಬಿಹಾರ- 11,897 ಕೋಟಿ ರೂ.
ಮಧ್ಯಪ್ರದೇಶ- 9,285 ಕೋಟಿ ರೂ.
ಪಶ್ಚಿಮ ಬಂಗಾಳ- 8,898 ಕೋಟಿ ರೂ.
ಮಹಾರಾಷ್ಟ್ರ- 7,472 ಕೋಟಿ ರೂ.
ರಾಜಸ್ಥಾನ್- 7,128 ಕೋಟಿ ರೂ.
ಒಡಿಶಾ- 5,356 ಕೋಟಿ ರೂ.
ತಮಿಳುನಾಡು- 4,825 ಕೋಟಿ ರೂ.
ಆಂಧ್ರಪ್ರದೇಶ- 4,787 ಕೋಟಿ ರೂ.
ಕರ್ನಾಟಕ- 4,314 ಕೋಟಿ ರೂ.
ಗುಜರಾತ್- 4,114 ಕೋಟಿ ರೂ.
ಛತ್ತೀಸ್ಗಡ- 4,030 ಕೋಟಿ ರೂ.
ಜಾರ್ಖಂಡ್- 3,912ಕೋಟಿ ರೂ.
ಅಸ್ಸಾಮ್- 3,700 ಕೋಟಿ ರೂ.
ತೆಲಂಗಾಣ- 2,486 ಕೋಟಿ ರೂ.
ಕೇರಳ- 2,277 ಕೋಟಿ ರೂ.
ಪಂಜಾಬ್- 2,137 ಕೋಟಿ ರೂ.
ಅರುಣಾಚಲಪ್ರದೇಶ- 2,078 ಕೋಟಿ ರೂ.
ಉತ್ತರಾಖಂಡ್- 1,322 ಕೋಟಿ ರೂ.
ಹರಿಯಾಣ- 1,293 ಕೋಟಿ ರೂ.
ಹಿಮಾಚಲಪ್ರದೇಶ- 982 ಕೋಟಿ ರೂ.
ಮೇಘಾಲಯ- 907 ಕೋಟಿ ರೂ.
ಮಣಿಪುರ- 847 ಕೋಟಿ ರೂ.
ತ್ರಿಪುರಾ- 837 ಕೋಟಿ ರೂ.
ನಾಗಾಲ್ಯಾಂಡ್- 673 ಕೋಟಿ ರೂ.
ಮಿಝೋರಾಂ- 591 ಕೋಟಿ ರೂ.
ಸಿಕ್ಕಿಂ- 459 ಕೋಟಿ ರೂ.
ಗೋವಾ- 457 ಕೋಟಿ ರೂ.